ETV Bharat / state

ಸುಳ್ಯ: ಬಿಸಿಎಂ ಹಾಸ್ಟೆಲ್​ನಲ್ಲಿ ಬೆಂಗಳೂರು ಮೂಲದ ವಿದ್ಯಾರ್ಥಿನಿ ಆತ್ಮಹತ್ಯೆ - Case in Sulya police station

ಪ್ರಥಮ ಪಿಯುಸಿ ಓದುತ್ತಿದ್ದ ವಿದ್ಯಾರ್ಥಿನಿಯೊಬ್ಬಳು ಸುಳ್ಯದ ಬಿಸಿಎಂ ಹಾಸ್ಟೆಲ್​ನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

Bangalore based student committed suicide
ಬಿಸಿಎಂ ಹಾಸ್ಟೆಲ್​ನಲ್ಲಿ ಬೆಂಗಳೂರು ಮೂಲದ ವಿದ್ಯಾರ್ಥಿನಿ ಆತ್ಮಹತ್ಯೆ
author img

By

Published : Dec 27, 2022, 4:46 PM IST

ಸುಳ್ಯ: ಇಲ್ಲಿನ ಶಾರದಾ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿನಿ ಸೋನಿಯಾ (18) ಕುರುಂಜಿಭಾಗ್ ಸಮೀಪದ ಬಿಸಿಎಂ ಹಾಸ್ಟೆಲ್ ಕೊಠಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈಕೆ ಬೆಂಗಳೂರು ರಾಮನಾಥ ಪುರದ ಕಾರಮಂಗಲ ಮಾರ್ಲಮಂಗಲ ಗ್ರಾಮದ ಪುರುಷೋತ್ತಮ-ರೀನಾ ದಂಪತಿಯ ಪುತ್ರಿ.

ಸೋನಿಯಾ ನಿನ್ನೆ ಕಾಲೇಜಿಗೆ ಹೋಗದೇ ಹಾಸ್ಟೇಲ್‌ನಲ್ಲಿಯೇ ಉಳಿದುಕೊಂಡಿದ್ದರು. ಆಕೆಯ ಕೊಠಡಿಯಲ್ಲಿದ್ದ ಊಟದ ತಟ್ಟೆ ತರಲೆಂದು ಸಹಪಾಠಿ ಹೋದಾಗ ಬಾಗಿಲು ಹಾಕಿಕೊಂಡಿತ್ತು. ಬಾಗಿಲನ್ನು ಎಷ್ಟೆ ತಟ್ಟಿದರೂ ತೆರೆಯಲಿಲ್ಲ. ಊಟ ಮುಗಿಸಿ ಮತ್ತೆ ರೂಮಿಗೆ ಬಂದಾಗಲೂ ಬಾಗಿಲು ತೆರೆಯದೇ ಇದ್ದ ಕಾರಣ ಸಂಶಯಗೊಂಡು ವಿದ್ಯಾರ್ಥಿ ನಿಲಯದ ವಾರ್ಡನ್​ಗೆ ಮಾಹಿತಿ ತಿಳಿಸಲಾಗಿತ್ತು

ಕೂಡಲೇ ಸಿಬ್ಬಂದಿ ಬಂದು ಬಾಗಿಲು ಒಡೆದು ನೋಡಿದಾಗ ಆತ್ಮಹತ್ಯೆ ಬೆಳಕಿಗೆ ಬಂದಿದೆ. ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಪೊಲೀಸ್ ವೃತ್ತನಿರೀಕ್ಷಕ ನವೀನ್ ಚಂದ್ರ ಜೋಗಿ ಸ್ಥಳಕ್ಕೆ ಆಗಮಿಸಿ ಮಹಜರು ನಡೆಸಿದ್ದಾರೆ. ಸುಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.

ಇದನ್ನೂ ಓದಿ: ಹಾಸನದಲ್ಲಿ ಮಿಕ್ಸಿ ಬ್ಲಾಸ್ಟ್ ಪ್ರಕರಣ: ವೈಯಕ್ತಿಕ ದ್ವೇಷದ ಕೃತ್ಯ- ಎಸ್ಪಿ ಸ್ಪಷ್ಟನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.