ಮಂಗಳೂರು: ನಗರದ ಅಡ್ಯಾರ್ ಪದವು ಎಂಬಲ್ಲಿ ವ್ಯಕ್ತಿ ಮೇಲೆ ದುಷ್ಕರ್ಮಿಗಳು ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಶುಕ್ರವಾರ ರಾತ್ರಿ ನಡೆದಿದೆ. ರಿಯಾಝ್ ಅಹ್ಮದ್(38) ಎಂಬಾತ ಘಟನೆಯಲ್ಲಿ ಗಾಯಗೊಂಡಿದ್ಧಾನೆ.
ರಿಯಾಝ್ ಅಹ್ಮದ್ ಅಡ್ಯಾರ್ ಪದವು ಎಂಬಲ್ಲಿ ಕಾರಿನಲ್ಲಿದ್ದ ವೇಳೆ 3-4 ಜನರಿದ್ದ ತಂಡವೊಂದು ಅಲ್ಲಿಗೆ ಬಂದಿದೆ. ಅಲ್ಲದೆ ಏಕಾಏಕಿ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದೆ. ತಕ್ಷಣ ಸ್ಥಳದಲ್ಲಿದ್ದವರು ರಿಯಾಝ್ರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿರುವ ಮಂಗಳೂರು ನಗರ ಪೊಲೀಸ್ ಕಮಿಷನರ್ ಶಶಿಕುಮಾರ್ ಎನ್. ಮಾತನಾಡಿ, ಯಾವ ರೀತಿ ಗಾಯವಾಗಿದೆ ಎಂಬುದು ಇನ್ನೂ ಸ್ಪಷ್ಟವಾಗಿ ತಿಳಿದಿಲ್ಲ. ಈ ಬಗ್ಗೆ ವೈದ್ಯರು ಪರಿಶೀಲಿಸಿ ಹೇಳಬೇಕಿದೆ. ಯಾರು, ಯಾಕೆ ಹಲ್ಲೆ ನಡೆಸಿದ್ದಾರೆ ಎಂಬುದು ಇನ್ನಷ್ಟೇ ತಿಳಿಯಬೇಕಿದೆ ಎಂದು ಹೇಳಿದರು.
ಈ ಬಗ್ಗೆ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕೊಲೆಯತ್ನ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ನಮ್ ಶಾಲೆ ಬಿಟ್ಟು ಹೋಗಬೇಡಿ ಸರ್.. ನೆಚ್ಚಿನ ಶಿಕ್ಷಕರ ವರ್ಗಾವಣೆಗೆ ಮಕ್ಕಳು, ಸಹೋದ್ಯೋಗಿಗಳ ಕಣ್ಣೀರು