ಮಂಗಳೂರು: ನಗರದ ಬಲ್ಲಾಳ್ ಭಾಗ್ನ ಕಾಲೇಜು ಬಳಿ ಮಾರಾಕಾಸ್ತ್ರ ಹಿಡಿದು ಗಲಾಟೆ ನಡೆಸಿದ್ದ ಪ್ರಕರಣದಲ್ಲಿ ಮಂಗಳೂರು ನಗರ ಪೊಲೀಸರು ಓರ್ವನನ್ನು ಬಂಧಿಸಿದ್ದಾರೆ. ವಿವೇಕನಗರದ ವಿಶ್ವಾಸ್ (22) ಬಂಧಿತ ಆರೋಪಿ.
ಈತ ಫೆಬ್ರುವರಿ 1 ರಂದು ಬಲ್ಲಾಳ್ ಭಾಗ್ ನಲ್ಲಿರುವ ಶ್ರೀದೇವಿ ಕಾಲೇಜಿನ ಬಳಿ ಗ್ಯಾಂಗ್ ಜೊತೆಗೆ ಬಂದು ಗಲಾಟೆ ನಡೆಸಿದ್ದ. ಶ್ರೀದೇವಿ ಕಾಲೇಜಿನ ವಿದ್ಯಾರ್ಥಿಯೊಬ್ಬನ ದ್ವಿಚಕ್ರ ವಾಹನ ಸ್ಥಳೀಯನೊಬ್ಬನಿಗೆ ಸ್ಪರ್ಶಿಸಿದ ಹಿನ್ನೆಲೆ ವಿದ್ಯಾರ್ಥಿಗಳು ಮತ್ತು ಸ್ಥಳೀಯರ ನಡುವೆ ಗಲಾಟೆ ನಡೆದಿತ್ತು. ಮುಂದುವರಿದ ಭಾಗವಾಗಿ ಸ್ಥಳೀಯ ಯುವಕರ ತಂಡ ಮತ್ತೆ ವಿದ್ಯಾರ್ಥಿಗಳ ಜೊತೆಗೆ ಗಲಾಟೆಗೆ ಬಂದಿದ್ದು, ಈ ವೇಳೆ ಓರ್ವನ ಕೈಯಲ್ಲಿ ಕುಡುಗೋಲು ಕೂಡ ಇತ್ತು. ಇದನ್ನು ವಿದ್ಯಾರ್ಥಿಗಳು ಮೊಬೈಲ್ ನಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು.
ಇದನ್ನೂ ಓದಿ: ಸೂಟ್ಕೇಸ್ನಲ್ಲಿ ಮುಚ್ಚಿಟ್ಟು ಹಾಸ್ಟೆಲ್ಗೆ ಯುವತಿಯನ್ನು ಹೊತ್ತು ತಂದ ಲವರ್.. ಮುಂದಾಗಿದ್ದೇನು!?
ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ದೂರು ದಾಖಲಾಗಿರಲಿಲ್ಲ. ಯುವಕನ ಕೈಯಲ್ಲಿ ಮಾರಕಾಸ್ತ್ರ ಇದ್ದ ಕಾರಣ ಬರ್ಕೆ ಪೊಲೀಸ್ ಠಾಣೆಯಲ್ಲಿ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.