ದಕ್ಷಿಣಕನ್ನಡ: ಕರ್ನಾಟಕ ರಾಜ್ಯದಲ್ಲಿ ಕೆಎಫ್ಡಿ, ಪಿಎಫ್ಐ, ಎಸ್ಡಿಪಿಐ ಸಂಘಟನೆಗಳಿಗೆ ನಿಷೇಧ ಹೇರುವಂತೆ ಒತ್ತಾಯಿಸಿ ವಿಶ್ವ ಹಿಂದೂ ಪರಿಷತ್,ಭಜರಂಗದಳ ಕಡಬ ಪ್ರಖಂಡದ ವತಿಯಿಂದ ರಾಜ್ಯಪಾಲರು ಮತ್ತು ಗೃಹ ಸಚಿವರಿಗೆ ಕಡಬದ ತಹಶೀಲ್ದಾರ್ ಮೂಲಕ ಮನವಿ ನೀಡಲಾಯಿತು.
ಈ ವೇಳೆ ವಿಶ್ವ ಹಿಂದೂ ಪರಿಷತ್ ಕಡಬ ಪ್ರಖಂಡ ಗೌರವಾಧ್ಯಕ್ಷರಾದ ಜನಾರ್ಧನ್ ರಾವ್,ಅಧ್ಯಕ್ಷರಾದ ರಾಧಾಕೃಷ್ಣ ಕೋಲ್ಪೆ,ಕಾರ್ಯದರ್ಶಿ ಪ್ರಮೋದ್ ಕುಮಾರ್ ರೈ ನಂದುಗುರಿ, ಭಜರಂಗದಳ ಕಡಬ ತಾಲೂಕು ಸಂಯೋಜಕರಾದ ಮೂಲಚಂದ್ರ ಕಾಂಚಾಣ,ಸಹ ಸಂಯೋಜಕರಾದ ದಿನೇಶ್ ಮಾಸ್ತಿ, ಹಿಂದೂ ಜಾಗರಣ ವೇದಿಕೆಯ ನಗರ ಕಾರ್ಯದರ್ಶಿ ನಿತ್ಯಾನಂದ ಮೇಲ್ಮನೆ ಮೊದಲಾದವರು ಉಪಸ್ಥಿತರಿದ್ದರು.