ETV Bharat / state

ರಾಷ್ಟ್ರೀಯ ಹೆದ್ದಾರಿ ಮರು ಡಾಂಬರೀಕರಣಕ್ಕಾಗಿ ಜಿಲ್ಲಾಧಿಕಾರಿಗೆ ಮನವಿ.. - ಅಡ್ಡಹೊಳೆ-ಬಿ.ಸಿ.ರೋಡ್ ಚತುಷ್ಪಥ ರಸ್ತೆ

ನೆಲ್ಯಾಡಿ ರಾಷ್ಟ್ರೀಯ ಹೆದ್ದಾರಿಯುದ್ದಕ್ಕೂ ನಿರ್ಮಾಣಗೊಂಡಿರುವ ಹೊಂಡಗಳನ್ನು ಮುಚ್ಚಿಸಿ ಹೆದ್ದಾರಿ ಮರು ಡಾಂಬರೀಕರಣ ಮಾಡಬೇಕು ಅಂತಾ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ.

ರಾಷ್ಟ್ರೀಯ ಹೆದ್ದಾರಿ ಮರುಡಾಂಬರೀಕರಣಗೊಳಿಸುವಂತೆ ಡಿಸಿಗೆ ಮನವಿ
author img

By

Published : Sep 27, 2019, 12:10 PM IST

ಮಂಗಳೂರು: ರಾಷ್ಟ್ರೀಯ ಹೆದ್ದಾರಿಯುದ್ದಕ್ಕೂ ನಿರ್ಮಾಣಗೊಂಡಿರುವ ಹೊಂಡಗಳನ್ನು ಮುಚ್ಚಿಸಿ ಹೆದ್ದಾರಿ ಮರು ಡಾಂಬರೀಕರಣಗೊಳಿಸುವಂತೆ ದಕ್ಷಿಣಕನ್ನಡ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ.

ನೆಲ್ಯಾಡಿ ರಾಷ್ಟ್ರೀಯ ಹೆದ್ದಾರಿ 75ರ ಅಡ್ಡಹೊಳೆ-ಬಿ ಸಿ ರೋಡ್ ನಡುವಿನ ಚತುಷ್ಪಥ ರಸ್ತೆ ಕಾಮಗಾರಿ ಅಪೂರ್ಣಗೊಂಡಿರುವುದರಿಂದ ರಾಷ್ಟ್ರೀಯ ಹೆದ್ದಾರಿಯುದ್ದಕ್ಕೂ ನಿರ್ಮಾಣಗೊಂಡಿರುವ ಹೊಂಡಗಳನ್ನು ಮುಚ್ಚಿಸಿ ಹೆದ್ದಾರಿ ಮರು ಡಾಂಬರೀಕರಣಗೊಳಿಸುವ ಸಂಬಂಧ ಡಿಸಿಯವರನ್ನು ಭೇಟಿ ಮಾಡಲಾಯ್ತು. ಸೆ.30ರೊಳಗೆ ತಮ್ಮ ಮನವಿಗೆ ಸ್ಪಂದನೆ ಸಿಗದೇ ಇದ್ದಲ್ಲಿ ಅಕ್ಟೋಬರ್‌ 10ರಂದು ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸುವುದಾಗಿಯೂ ಎಚ್ಚರಿಕೆ ನೀಡಿದ್ದಾರೆ.

road
ರಾಷ್ಟ್ರೀಯ ಹೆದ್ದಾರಿ ಮರುಡಾಂಬರೀಕರಣಗೊಳಿಸಲು ಡಿಸಿಗೆ ಮನವಿ..

ರಾಷ್ಟ್ರೀಯ ಹೆದ್ದಾರಿ75ರ ಶಿರಾಡಿ ಗ್ರಾಮದ ಅಡ್ಡಹೊಳೆ ಹಾಗೂ ಬಂಟ್ವಾಳ ತಾಲೂಕಿನ ಬಿ ಸಿ ರೋಡ್ ನಡುವೆ ಚತುಷ್ಪಥ ರಸ್ತೆ ನಿರ್ಮಾಣ ಹಿನ್ನೆಲೆಯಲ್ಲಿ ಕಾಮಗಾರಿ ಗುತ್ತಿಗೆ ವಹಿಸಿಕೊಂಡಿರುವ ಎಲ್ ಅಂಡ್‌ ಟಿ ಕಂಪನಿಯವರು ತಾಂತ್ರಿಕ ರೂಪುರೇಷೆ ಇಲ್ಲದೇ ರಸ್ತೆ ಅಗೆದು ಹಾಕಿರುವುದರಿಂದ ವಾಹನಗಳ ಸುಗಮ ಸಂಚಾರಕ್ಕೆ ಅಡ್ಡಿಯಾಗಿದೆ. ರಸ್ತೆಯ ದುರವಸ್ಥೆಯಿಂದಾಗಿ ಪದೇಪದೆ ಅಪಘಾತಗಳು ಸಂವಿಸಿ ಸಾವು ನೋವುಗಳು ಹೆಚ್ಚಾಗಿವೆ. ಅವೈಜ್ಞಾನಿಕವಾಗಿ ಮಣ್ಣು ಅಗೆದ ಪರಿಣಾಮ ಗುಡ್ಡಕುಸಿತ ಹಾಗೂ ರಸ್ತೆಯ ಅಂಚಿನಲ್ಲಿರುವ ಮರಗಳು ರಸ್ತೆಗೆ ಉರುಳಿ ಬಿದ್ದು ಅರಣ್ಯನಾಶವಾಗುತ್ತಿದೆ.

ಮನವಿಯಲ್ಲಿ ಹೋರಾಟ ಸಮಿತಿಯ ಜೊತೆಗೆ ನೆಲ್ಯಾಡಿ ಪರಿಸರದ ಎಲ್ಲಾ ಶಾಲಾ-ಕಾಲೇಜು, ಸಂಘ ಸಂಸ್ಥೆಗಳು ಸೇರಿದಂತೆ ಸುಮಾರು ನಲ್ವತ್ತು ಸಂಘಟನೆಗಳ ಹೆಸರು ನಮೂದಿಸಿ ನೀಡಲಾಗಿದೆ. ಜಿಲ್ಲಾಧಿಕಾರಿಗಳಿಗೆ ಮತ್ತು ಪೊಲೀಸ್ ಅಧೀಕ್ಷಕರಿಗೆ ಮನವಿ ನೀಡುವ ಸಂದರ್ಭದಲ್ಲಿ ಹೋರಾಟ ಸಮಿತಿ ಕಾರ್ಯದರ್ಶಿ ಜೋಸ್ ಕೆಜೆ, ಪದಾಧಿಕಾರಿಗಳಾದ ಫಾ.ಆದರ್ಶ್ ಜೋಸೆಫ್, ಸೆಬಾಸ್ಟಿಯನ್ ಕೆ ಕೆ, ಜಯಾನಂದ ಬಂಟ್ರಿಯಾಲ್, ನೆಲ್ಯಾಡಿ ವರ್ತಕ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ರಫೀಕ್ ಸೀಗಲ್, ಪ್ರಧಾನ ಕಾರ್ಯದರ್ಶಿ ಸುಬ್ರಹ್ಮಣ್ಯ ಜಿ., ಮನೋಜ್, ಜಯೇಶ್ ವಿಜೆ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.

Intro:ನೆಲ್ಯಾಡಿ
ರಾಷ್ಟ್ರೀಯ ಹೆದ್ದಾರಿ 75ರ ಅಡ್ಡಹೊಳೆ-ಬಿ.ಸಿ.ರೋಡ್ ನಡುವಿನ ಚತುಷ್ಪಥ ರಸ್ತೆ ಕಾಮಗಾರಿ ಅಪೂರ್ಣಗೊಂಡಿರುವುದರಿಂದ ರಾಷ್ಟ್ರೀಯ ಹೆದ್ದಾರಿಯುದ್ದಕ್ಕೂ ನಿರ್ಮಾಣಗೊಂಡಿರುವ ಹೊಂಡಗಳನ್ನು ಮುಚ್ಚಿಸಿ ಹೆದ್ದಾರಿ ಮರು ಡಾಮರೀಕರಣಗೊಳಿಸುವ ಸಂಬಂಧ ಹೋರಾಟ ನಡೆಸುವ ಸಲುವಾಗಿ ನೆಲ್ಯಾಡಿಯಲ್ಲಿ ಹೋರಾಟ ಸಮಿತಿಯೊಂದನ್ನು ರಚನೆ ಮಾಡಲಾಗಿದೆ. ಈ ಸಮಿತಿಯ ಪದಾಧಿಕಾರಿಗಳು ಮಂಗಳೂರಿನಲ್ಲಿ ಮಾನ್ಯ ಜಿಲ್ಲಾಧಿಕಾರಿಯವರನ್ನು ಭೇಟಿ ಮಾಡಿ ರಸ್ತೆ ಮರು ಡಾಮರೀಕರಣಕ್ಕೆ ಮನವಿ ಮಾಡಿದ್ದು ಸೆ.30ರೊಳಗೆ ಸ್ಪಂದನೆ ಸಿಗದೇ ಇದ್ದಲ್ಲಿ ಅ.10ರಂದು ರಾ.ಹೆ.ತಡೆದು ಪ್ರತಿಭಟನೆ ನಡೆಸುವುದಾಗಿಯೂ ಎಚ್ಚರಿಕೆಯನ್ನು ನೀಡಿದ್ದಾರೆ.

ರಾಷ್ಟ್ರೀಯ ಹೆದ್ದಾರಿ75ರ ಶಿರಾಡಿ ಗ್ರಾಮದ ಅಡ್ಡಹೊಳೆ ಹಾಗೂ ಬಂಟ್ವಾಳ ತಾಲೂಕಿನ ಬಿ.ಸಿ.ರೋಡ್ ನಡುವೆ ಚತುಷ್ಪಥ ರಸ್ತೆ ನಿರ್ಮಾಣ ಹಿನ್ನೆಲೆಯಲ್ಲಿ ಕಾಮಗಾರಿ ಗುತ್ತಿಗೆ ವಹಿಸಿಕೊಂಡಿರುವ ಎಲ್ ಆಂಡ್ ಟಿ ಕಂಪನಿಯವರು ತಾಂತ್ರಿಕ ರೂಪುರೇಷೆ ಇಲ್ಲದೇ ರಸ್ತೆ ಅಗೆದು ಹಾಕಿರುವುದರಿಂದ ವಾಹನಗಳ ಸುಗಮ ಸಂಚಾರಕ್ಕೆ ಅಡ್ಡಿಯಾಗಿದೆ. ಕ್ಲಪ್ತ ಸಮಯಕ್ಕೆ ನಿಗದಿತ ಸ್ಥಳಗಳಿಗೆ ತಲುಪಲು ಅಸಾಧ್ಯವಾಗಿದೆ. ರಸ್ತೆಯ ದುರವಸ್ಥೆಯಿಂದಾಗಿ ಪದೇ ಪದೇ ಅಪಘಾತಗಳು ನಡೆಯುತ್ತಿದ್ದು ಪ್ರಾಣ, ಸೊತ್ತುಗಳಿಗೆ ಹಾನಿಯಾಗಿದೆ. ಅವೈಜ್ಞಾನಿಕವಾಗಿ ಮಣ್ಣು ಅಗೆದ ಪರಿಣಾಮ ಗುಡ್ಡಕುಸಿತ ಹಾಗೂ ರಸ್ತೆಯ ಅಂಚಿನಲ್ಲಿರುವ ಮರಗಳು ರಸ್ತೆಗೆ ಉರುಳಿ ಬಿದ್ದು ಅರಣ್ಯನಾಶವಾಗುತ್ತಿದೆ. ಈಗಾಗಲೇ ತಾತ್ಕಾಲಿಕವಾಗಿ ಹೊಂಡ ಮುಚ್ಚುವ ಕಾಮಗಾರಿ ಆರಂಭಗೊಂಡಿದ್ದರೂ ಇದು ಪೂರ್ತಿಯಾಗಿ ಕಳಪೆ ಮಟ್ಟದ್ದಾಗಿದ್ದು ಹೊಂಡ ಮುಚ್ಚಿದ ಮರುದಿನವೇ ಜಲ್ಲಿಕಲ್ಲುಗಳು ಎದ್ದು ದ್ವಿಚಕ್ರ ವಾಹನ ಸವಾರರಿಗೆ, ಪಾದಚಾರಿಗಳಿಗೆ ಪ್ರಯಾಣ ಕಷ್ಟಕರವಾಗಿದೆ. ಆದ್ದರಿಂದ ಅಡ್ಡಹೊಳೆ-ಬಿ.ಸಿ.ರೋಡ್ ನಡುವೆ ಹೆದ್ದಾರಿ ಮರು ಡಾಮರೀಕರಣ ಹಾಗೂ ನಂತರದ ದಿನಗಳಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾವು ನೋವುಗಳು ಸಂಭವಿಸಿದಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವನ್ನೇ ಹೊಣೆಗಾರರನ್ನಾಗಿ ಮಾಡಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಸಂಬಂಧಿಸಿ ಉಂಟಾಗಿರುವ ಗೊಂದಲದ ಬಗ್ಗೆಯೂ ಪೂರ್ಣ ಮಾಹಿತಿ ನೀಡುವಂತೆ ಮನವಿಯಲ್ಲಿ ಕೇಳಿಕೊಳ್ಳಲಾಗಿದ್ದು ಬೇಡಿಕೆಗೆ ಸೆ.30ರೊಳಗೆ ಸೂಕ್ತ ಸ್ಪಂದನೆ ದೊರೆಯದೇ ಇದ್ದಲ್ಲಿ ಅ.10ರಂದು ಬೆಳಿಗ್ಗೆ 10ರಿಂದ ಅಪರಾಹ್ನ 2 ಗಂಟೆಯ ನಡುವೆ ನೆಲ್ಯಾಡಿ ಪೇಟೆಯಲ್ಲಿ ಒಂದು ಗಂಟೆ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸುವುದಾಗಿಯೂ ಮನವಿಯಲ್ಲಿ ಎಚ್ಚರಿಕೆಯನ್ನು ನೀಡಲಾಗಿದೆ. ಮನವಿಯಲ್ಲಿ ಹೋರಾಟ ಸಮಿತಿಯ ಜೊತೆಗೆ ನೆಲ್ಯಾಡಿ ಪರಿಸರದ ಎಲ್ಲಾ ಶಾಲಾ ಕಾಲೇಜು, ಸಂಘ ಸಂಸ್ಥೆಗಳು ಸೇರಿದಂತೆ ಸುಮಾರು ನಲ್ವತ್ತು ಸಂಘಟನೆಗಳ ಹೆಸರು ನಮೂದಿಸಿ ನೀಡಲಾಗಿದೆ. ಜಿಲ್ಲಾಧಿಕಾರಿಗಳಿಗೆ ಮತ್ತು ಪೋಲೀಸ್ ಅಧೀಕ್ಷಕರಿಗೆ ಮನವಿ ನೀಡುವ ಸಂಧರ್ಭದಲ್ಲಿ ಹೋರಾಟ ಸಮಿತಿ ಕಾರ್ಯದರ್ಶಿ ಜೋಸ್ ಕೆ.ಜೆ., ಪದಾಧಿಕಾರಿಗಳಾದ ಫಾ.ಆದರ್ಶ್ ಜೋಸೆಫ್, ಸೆಬಾಸ್ಟಿಯನ್ ಕೆ.ಕೆ., ಜಯಾನಂದ ಬಂಟ್ರಿಯಾಲ್, ನೆಲ್ಯಾಡಿ ವರ್ತಕ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ರಫೀಕ್ ಸೀಗಲ್, ಪ್ರಧಾನ ಕಾರ್ಯದರ್ಶಿ ಸುಬ್ರಹ್ಮಣ್ಯ ಜಿ., ಮನೋಜ್, ಜಯೇಶ್ ವಿ.ಜೆ.,ಮೊದಲಾದವರು ಉಪಸ್ಥಿತರಿದ್ದರು.Body:ಮನವಿ ಜಿಲ್ಲಾಧಿಕಾರಿಗಳಿಗೆConclusion:ಪ್ರಕಾಶ್ ಕಡಬ ಸುಳ್ಯ ದಕ್ಷಿನಕನ್ನಡ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.