ಮಂಗಳೂರು: ಲಾಕ್ಡೌನ್ ಬಳಿಕ ಸಂಕಷ್ಟದಲ್ಲಿ ಸಿಲುಕಿರುವ ವಿದೇಶದಲ್ಲಿರುವ ಭಾರತೀಯರನ್ನು ಏರ್ ಲಿಫ್ಟ್ ಮಾಡಲಾಗುತ್ತಿದೆ. ನಾಳೆ ಮಸ್ಕತ್ನಿಂದ ಬೆಂಗಳೂರು ಮೂಲಕ ಮಂಗಳೂರು ವಿಮಾನ ನಿಲ್ದಾಣಕ್ಕೆ ವಿಮಾನ ಬರಲಿದೆ.
ಮೇ 12 ಮತ್ತು ಮೇ 18 ರಂದು ದುಬೈನಿಂದ ವಿಮಾನ ಬಂದಿದ್ದು, ನಾಳೆ ಮಸ್ಕತ್ನಿಂದ ಬರಲಿದೆ. ನಾಳೆ ಮಸ್ಕತ್ನಿಂದ ಹೊರಡಲಿರುವ ವಿಮಾನ ಅಲ್ಲಿಂದ ಬೆಂಗಳೂರಿಗೆ ತಲುಪಲಿದೆ. ಬಳಿಕ ಬೆಂಗಳೂರಿನಿಂದ ಮಂಗಳೂರಿಗೆ ಬರಲಿದೆ.
ವಿಮಾನದಲ್ಲಿ ಇಬ್ಬರು ಮಕ್ಕಳು ಮತ್ತು 176 ವಯಸ್ಕರು ಪ್ರಯಾಣಿಸಲಿದ್ದಾರೆ. ಇದರಲ್ಲಿ ಬೆಂಗಳೂರಿನ ಇಬ್ಬರು ಮಕ್ಕಳು ಮತ್ತು 113 ವಯಸ್ಕರಿದ್ದು, ಅವರನ್ನು ಇಳಿಸಿದ ಬಳಿಕ, ಮಂಗಳೂರಿಗೆ ಪ್ರಯಾಣ ಬೆಳೆಸಲಿದೆ. ಮಂಗಳೂರಿಗೆ 63 ಪ್ರಯಾಣಿಕರು ಆಗಮಿಸಲಿದ್ದಾರೆ. ಮಂಗಳೂರಿಗೆ ಬರುವ ಪ್ರಯಾಣಿಕರನ್ನು ತಪಾಸಣೆ ನಡೆಸಿ ಕ್ವಾರಂಟೈನ್ ಮಾಡಲು ದ.ಕ. ಜಿಲ್ಲಾಡಳಿತ ಸಿದ್ಧತೆ ನಡೆಸಿದೆ.