ಮಂಗಳೂರು: ಕೆಲ ವಿಮಾನಗಳ ವಿಳಂಬ ಆಗಮನದಿಂದ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂದು ಆಗಮಿಸುವ ಮತ್ತು ನಿರ್ಗಮಿಸುವ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದ ಸಮಯ ಬದಲಾವಣೆ ಆಗಿದೆ.
ಮಂಗಳೂರಿನಿಂದ ದುಬೈಗೆ ಇಂದು ಬೆಳಗ್ಗೆ 9.10ಕ್ಕೆ ನಿರ್ಗಮಿಸಬೇಕಾದ ವಿಮಾನ ಮಧ್ಯಾಹ್ನ 4.25 ಕ್ಕೆ, ರಾತ್ರಿ 8.05 ಕ್ಕೆ ನಿರ್ಗಮಿಸಬೇಕಾದ ವಿಮಾನ ರಾತ್ರಿ 8.30ಕ್ಕೆ ಹೊರಡಲಿದೆ. ದೋಹಾ, ಕತಾರ್ಗೆ ಸಂಜೆ 5.35ಕ್ಕೆ ನಿರ್ಗಮಿಸಬೇಕಾದ ವಿಮಾನ ಸಂಜೆ 6.25ಕ್ಕೆ ಹೊರಡಲಿದೆ.
ಇನ್ನು ಬಹರೈನ್ನಿಂದ ಮಂಗಳೂರಿಗೆ ಇಂದು ಸಂಜೆ 6.25ಕ್ಕೆ ಆಗಮಿಸಬೇಕಿದ್ದ ವಿಮಾನ ಸಂಜೆ 7.40ಕ್ಕೆ, ಅಬುಧಾಬಿಯಿಂದ ಬೆಳಗ್ಗೆ 5ಗಂಟೆಗೆ ಆಗಮಿಸಬೇಕಿದ್ದ ವಿಮಾನ ಸಂಜೆ 6.25ಕ್ಕೆ ತಲುಪಲಿದೆ.