ETV Bharat / state

ಮಂಗಳೂರಿನಲ್ಲಿ ಡೆಂಗ್ಯು ಹಾವಳಿ: ವೆನ್ಲಾಕ್​​ ಆಸ್ಪತ್ರೆಯಲ್ಲಿ ವಿಶೇಷ ಆರೈಕೆ ಕೇಂದ್ರ - undefined

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಡೆಂಗ್ಯು ಜ್ವರದ ಬಾಧೆಯು ವ್ಯಾಪಿಸುತ್ತಿದ್ದು, ಜನರಲ್ಲಿಯೂ ಆತಂಕ ಎದುರಾಗುತ್ತಿದೆ. ದಿನವೊಂದಕ್ಕೆ 25-30 ಶಂಕಿತ ಡೆಂಗ್ಯು ಪ್ರಕರಣಗಳು ವರದಿಯಾಗುತ್ತಿವೆ.

ಡಾ.ರಾಜೇಶ್ವರಿ
author img

By

Published : Jul 25, 2019, 5:24 AM IST

Updated : Jul 25, 2019, 9:50 AM IST

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಡೆಂಗ್ಯು ಜ್ವರದ ಬಾಧೆಯು ವ್ಯಾಪಿಸುತ್ತಿದ್ದು, ಜನರಲ್ಲಿ ಆತಂಕ ಎದುರಾಗುತ್ತಿದೆ. ದಿನವೊಂದಕ್ಕೆ 25-30 ಶಂಕಿತ ಡೆಂಗ್ಯು ಪ್ರಕರಣಗಳು ವರದಿಯಾಗುತ್ತಿವೆ. ಈ ಹಿನ್ನೆಲೆ ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಇಲಾಖೆ ಇದರ ನಿಯಂತ್ರಣಕ್ಕೆ ಸಮರೋಪಾದಿಯಲ್ಲಿ ಕೆಲಸ ಮಾಡುತ್ತಿದೆ ಎಂದು ಡಾ. ರಾಜೇಶ್ವರಿ ದೇವಿ ಮಾಹಿತಿ ನೀಡಿದ್ದಾರೆ.

ದಿನದಿಂದ ದಿನಕ್ಕೆ ಈ ರೋಗದ ಪ್ರಕರಣಗಳು ಹೆಚ್ಚಾಗುತ್ತಿವೆ. ಮಂಗಳೂರು ನಗರದ ಗುಜ್ಜರಕೆರೆ ವ್ಯಾಪ್ತಿಯ ಗೋರಕ್ಷದಂಡು, ಅರೆಕೆರೆಬೈಲು, ಜಲಜಮ್ಮ ಕಂಪೌಂಡ್, ಅಲೆಮಾನ್ ಕಂಪೌಂಡ್, ಮುಳಿಹಿತ್ಲು, ಅಂಬಾನಗರ, ಹೊಯಿಗೆ ಬಜಾರ್, ಜಪ್ಪು ಮಾರುಕಟ್ಟೆ ವ್ಯಾಪ್ತಿಯಲ್ಲಿ ಅನೇಕ ಮಂದಿ ಡೆಂಗ್ಯುವಿನಿಂದ ಬಳಲುತ್ತಿದ್ದಾರೆ .

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಡೆಂಗ್ಯು ಜ್ವರದ ಬಾಧೆ

ಇಲ್ಲಿನ ಸುಮಾರು 250ಕ್ಕೂ ಅಧಿಕ ಮಂದಿಗೆ ಡೆಂಗ್ಯು ಕಾಣಿಸಿಕೊಂಡಿದ್ದು, ಹಲವರು ಗುಣಮುಖರಾಗಿದ್ದಾರೆ. ಈ ಪ್ರದೇಶಗಳಲ್ಲದೆ ಮಂಗಳೂರಿನ ಬಲ್ಮಠ, ಕೊಡಿಯಾಲಬೈಲು, ಕದ್ರಿ, ವೆಲೆನ್ಸಿಯಾ, ಮಣ್ಣಗುಡ್ಡ ಸಹಿತ ವಿವಿಧ ಭಾಗಗಳಲ್ಲಿ ಡೆಂಗ್ಯು ಕಾಣಿಸಿಕೊಂಡಿದೆ. ಜಿಲ್ಲೆಯ ಇತರ ತಾಲೂಕುಗಳಾದ ಬೆಳ್ತಂಗಡಿ, ಪುತ್ತೂರು, ಕಡಬ, ಸುಳ್ಯ ಈ ಪ್ರದೇಶಗಳಲ್ಲಿಯೂ ಜನರಲ್ಲಿ ಡೆಂಗ್ಯು ಜ್ವರದ ಭೀತಿ ಎದುರಾಗಿದೆ. ಇದರಲ್ಲಿ 3 ವರ್ಷದ ಮಗುವಿನಿಂದ ಹಿಡಿದು 59 ವರ್ಷದ ವಯಸ್ಸಿನವರೂ ಆಸ್ಪತ್ರೆಗೆ ದಾಖಲಾಗಿದ್ದಾರೆ.

ವೆನ್ಲಾಕ್​ ಆಸ್ಪತ್ರೆಯಲ್ಲಿ ಇಲ್ಲಿಯವರೆಗೆ ಯಾರೂ ಡೆಂಗ್ಯು ರೋಗದಿಂದ ಮೃತರಾಗಿಲ್ಲ‌. ಬಹಳಷ್ಟು ಮಂದಿ ಕಾಯಿಲೆಯಿಂದ ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಪ್ರಸ್ತುತ 13 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರೂ ಗುಣಮುಖರಾಗುತ್ತಿದ್ದಾರೆ ಎಂದು ಡಾ. ರಾಜೇಶ್ವರಿ ದೇವಿ ಹೇಳಿದರು.

Intro:ಮಂಗಳೂರು: ದ.ಕ.ಜಿಲ್ಲೆಯಲ್ಲಿ ಡೆಂಗ್ಯು ಜ್ವರದ ಬಾಧೆಯು ವ್ಯಾಪಿಸುತ್ತಿದ್ದು, ಜನರಲ್ಲಿಯೂ ಆತಂಕ ಎದುರಾಗುತ್ತಿದೆ. ದಿನವೊಂದಕ್ಕೆ 25-30 ಮಂದಿಗೆ ಶಂಕಿತ ಡೆಂಗ್ಯು ಪ್ರಕರಣಗಳು ವರದಿಯಾಗುತ್ತಿದೆ. ದ.ಕ.ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಇಲಾಖೆ, ದ.ಕ.ಜಿಲ್ಲಾಧಿಕಾರಿ ಕಚೇರಿ, ಮಂಗಳೂರು ಮಹಾನಗರ ಪಾಲಿಕೆ ಜಿಲ್ಲೆಯಲ್ಲಿ ಡೆಂಗ್ಯು ಜ್ವರದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಸಮರೋಪಾದಿಯಲ್ಲಿ ಕೆಲಸ ಮಾಡುತ್ತಿದೆ. ಆದರೂ ಈ ರೋಗದ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ.

ಮಂಗಳೂರು ನಗರದ ಗುಜ್ಜರಕೆರೆ ವ್ಯಾಪ್ತಿಯ ಗೋರಕ್ಷದಂಡು, ಅರೆಕೆರೆಬೈಲು, ಜಲಜಮ್ಮ ಕಂಪೌಂಡ್, ಅಲೆಮಾನ್ ಕಂಪೌಂಡ್, ಮುಳಿಹಿತ್ಲು, ಅಂಬಾನಗರ, ಹೊಯಿಗೆ ಬಜಾರ್, ಜಪ್ಪು ಮಾರುಕಟ್ಟೆ ವ್ಯಾಪ್ತಿಯಲ್ಲಿ ಅನೇಕ ಮಂದಿ ಡೆಂಗ್ಯುವಿನಿಂದ ಬಳಲುತ್ತಿದ್ದಾರೆ. ಇಲ್ಲಿನ ಸುಮಾರು 250ಕ್ಕೂ ಅಧಿಕ ಮಂದಿಗೆ ಡೆಂಗ್ಯು ಕಾಣಿಸಿಕೊಂಡಿದ್ದು, ಹಲವರು ಗುಣಮುಖರಾಗಿದ್ದಾರೆ. ಈ ಪ್ರದೇಶಗಳಲ್ಲದೆ ಮಂಗಳೂರಿನ ಬಲ್ಮಠ, ಕೊಡಿಯಾಲಬೈಲು, ಕದ್ರಿ, ವೆಲೆನ್ಸಿಯಾ, ಮಣ್ಣಗುಡ್ಡ ಸಹಿತ ವಿವಿಧ ಭಾಗಗಳಲ್ಲಿ ಡೆಂಗ್ಯು ಕಾಣಿಸಿಕೊಂಡಿದೆ. ಜಿಲ್ಲೆಯ ಇತರ ತಾಲೂಕುಗಳಾದ ಬೆಳ್ತಂಗಡಿ, ಪುತ್ತೂರು, ಕಡಬ, ಸುಳ್ಯ ಈ ಪ್ರದೇಶಗಳಲ್ಲಿಯೂ ಜನರಲ್ಲಿ ಡೆಂಗ್ಯು ಜ್ವರದ ಭೀತಿ ಎದುರಾಗಿದೆ.

Body:ಈ ಹಿನ್ನೆಲೆಯಲ್ಲಿ ವೆನ್ಲಾಕ್ ಜಿಲ್ಲಾ ಆಸ್ಪತ್ರೆಯಲ್ಲಿ ಡೆಂಗ್ಯು ವಿಶೇಷ ಕೇಂದ್ರವನ್ನು ತೆರೆಯಲಾಗಿದ್ದು, ಇಲ್ಲಿ ಶಂಕಿತ ಡೆಂಗ್ಯು ಪೀಡಿತರಿಗೆ ವಿಶೇಷ ಆರೈಕೆ ಮಾಡಲಾಗುತ್ತಿದೆ. ಅಲ್ಲಿ ರೋಗಿಗಳಿಗೆ ಸೊಳ್ಳೆಗಳ ಪರದೆಗಳನ್ನು ಅಳವಡಿಸಲಾಗಿದ್ದು, ರೋಗಿಗಳ ರಕ್ತದಲ್ಲಿ ಹಿಮೋಗ್ಲೋಬಿನ್ ಹಾಗೂ ಪ್ಲೇಟ್ಲೆಟ್ ಪ್ರಮಾಣವನ್ನು ದಿನವೂ ನೋಡಿಕೊಳ್ಳಲಾಗುತ್ತಿದೆ. ಡೆಂಗ್ಯುವಿಗೆ ಯಾವುದೇ ಸರಿಯಾದ ಚಿಕಿತ್ಸೆ ಇಲ್ಲದಿದ್ದರೂ, ರೋಗಿಯ ಸಂಪೂರ್ಣ ಚೇತರಿಕೆಗೆ ಬೇಕಾದ ಅಗತ್ಯ ಆರೈಕೆಯನ್ನು ಇಲ್ಲಿನ ವೈದ್ಯರು ಮುತುವರ್ಜಿಯಿಂದ ಮಾಡುತ್ತಿದ್ದಾರೆ.

ಈ ಬಗ್ಗೆ ವೆನ್ಲಾಕ್ ಜಿಲ್ಲಾ ಆಸ್ಪತ್ರೆಯ ಅಧೀಕ್ಷಕಿ ಡಾ.ರಾಜೇಶ್ವರಿ ದೇವಿ ಮಾತನಾಡಿ, ನಮ್ಮ ಆಸ್ಪತ್ರೆಯಲ್ಲಿ ಜುಲೈ 11ರಿಂದ ಇಂದಿನವರೆಗೆ 25 ಡೆಂಗ್ಯು ಪೀಡಿತರು ದಾಖಲಾಗಿದ್ದಾರೆ. ಇದರಲ್ಲಿ 3 ವರ್ಷದ ಮಗುವಿನಿಂದ ಹಿಡಿದು 59 ವರ್ಷದ ವಯಸ್ಸಿನವರೂ ದಾಖಲಾಗಿದ್ದಾರೆ. ನಮ್ಮ ಆಸ್ಪತ್ರೆಯಲ್ಲಿ ಇಷ್ಟರವರೆಗೆ ಯಾವುದೇ ಡೆಂಗ್ಯು ರೋಗದಿಂದ ಯಾರೂ ಮೃತರಾಗಿಲ್ಲ‌. ಬಹಳಷ್ಟು ಮಂದಿ ಕಾಯಿಲೆಯಿಂದ ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಪ್ರಸ್ತುತ 13 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರೂ ಗುಣಮುಖರಾಗುತ್ತಿದ್ದಾರೆ ಎಂದು ಹೇಳಿದರು.

ಡೆಂಗ್ಯು ವಿನ ಬಗ್ಗೆ ಮೊದಲಾಗಿ ಮುಂಜಾಗರೂಕತೆ ಅಗತ್ಯ. ಡೆಂಗ್ಯು ಸೊಳ್ಳೆ ಹಗಲು ಹೊತ್ತಿನಲ್ಲಿ ಕಚ್ಚುವ ಸೊಳ್ಳೆ. ಆದ್ದರಿಂದ ಎಲ್ಲರೂ ಮೈಪೂರ್ತಿ ಮುಚ್ಚುವ ಬಟ್ಟೆಗಳನ್ನು ಧರಿಸುವುದು ಉತ್ತಮ. ಕಾಲುಗಳನ್ನು ಪೂರ್ತಿ ಮುಚ್ಚುವ ಬಟ್ಟೆಗಳನ್ನು ಧರಿಸಬೇಕು. ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ನೀರು ನಿಲ್ಲದಂತೆ ಜಾಗ್ರತೆ ವಹಿಸಬೇಕು. ಗಿಡಗಳ ಪಾಟ್, ಟೆರೇಸ್, ಪ್ಲಾಸ್ಟಿಕ್ ಕಪ್, ಪ್ಲೇಟ್, ಸೀಯಾಳಗಳ ಸಿಪ್ಪೆ, ಬಾಟಲಿಗಳಲ್ಲಿ ನೀರು ನಿಲ್ಲದಂತೆ ಎಚ್ಚರ ವಹಿಸುವುದು ಅಗತ್ಯ. ಆಗಿಂದಾಗ್ಗೆ ಈ ಬಗ್ಗೆ ಸುತ್ತಲಿನ ಪ್ರದೇಶಗಳಲ್ಲಿ ಪರೀಕ್ಷಿಸಿ ಸೊಳ್ಳೆಗಳ ಉತ್ಪತ್ತಿಯಾಗದಂತೆ ನೋಡಬೇಕು. ಈಗಾಗಲೇ ನಮ್ಮ ಆಸ್ಪತ್ರೆಯ ಪ್ಯಾರಾಮೆಡಿಕಲ್ ವಿದ್ಯಾರ್ಥಿಗಳು ಹೈರಿಸ್ಕ್ ಏರಿಯಾಗಳ ಮನೆಮನೆಗಳಿಗೆ ತೆರಳಿ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಡಾ.ರಾಜೇಶ್ವರಿ ದೇವಿ ಹೇಳಿದರು.

Reporter_Vishwanath Panjimogaru

Conclusion:
Last Updated : Jul 25, 2019, 9:50 AM IST

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.