ETV Bharat / state

ಪೊಲೀಸರಿಂದ ರಾಜಕೀಯ ಪಕ್ಷಗಳಿಗೆ ಅಡ್ಜಸ್ಟ್​ಮೆಂಟ್: ಜೆ ಆರ್ ಲೋಬೋ ಆರೋಪ - ಮಾಜಿ ಶಾಸಕ ಜೆ ಆರ್​ ಲೋಬೋ

ಪೊಲೀಸರು ತಮ್ಮ ಕಾರ್ಯವೈಖರಿಯಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಸಮಾಜದಲ್ಲಿ ದ್ವೇಷ ಭಾಷಣಗಳನ್ನು ತಡೆಯಲು ವಿಫಲರಾಗಿದ್ದು ಅಶಾಂತಿಯ ವಾತಾವರಣ ಸೃಷ್ಟಿಯಾಗುತ್ತಿದೆ ಎಂದು ಮಾಜಿ ಶಾಸಕ ಜೆ ಆರ್​ ಲೋಬೋ ದೂರಿದರು.

Former MLA JR Lobo
ಮಾಜಿ ಶಾಸಕ ಜೆ ಆರ್​ ಲೋಬೋ
author img

By

Published : Oct 24, 2022, 5:22 PM IST

ಮಂಗಳೂರು: ಪೊಲೀಸರು ರಾಜಕೀಯ ಪಕ್ಷಕ್ಕೆ ಅಡ್ಜಸ್ಟ್​ಮೆಂಟ್ ಮಾಡುತ್ತಿದ್ದು ಕಾನೂನು ಕಾಪಾಡಲು ವಿಫಲರಾಗಿದ್ದಾರೆ ಎಂದು ಮಾಜಿ ಶಾಸಕ ಕಾಂಗ್ರೆಸ್ ಮುಖಂಡ ಜೆ ಆರ್ ಲೋಬೋ ಟೀಕಿಸಿದರು.

ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ, ಪೊಲೀಸರು ತಮ್ಮ ಕಾರ್ಯವೈಖರಿಯಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಸಮಾಜದಲ್ಲಿ ದ್ವೇಷ ಭಾಷಣಗಳನ್ನು ತಡೆಯಲು ವಿಫಲರಾಗಿದ್ದು ಅಶಾಂತಿಯ ವಾತಾವರಣ ಸೃಷ್ಟಿಯಾಗುತ್ತಿದೆ. ಕಾಣಿಯೂರಿನಲ್ಲಿ ವ್ಯಾಪಾರಕ್ಕೆಂದು ಹೋದವರ ಮೇಲೆ ಗುಂಪು ಹಲ್ಲೆ ನಡೆದಿರುವುದು ಇಂತಹದೇ ದ್ವೇಷ ಭಾಷಣಗಳಿಂದ ಎಂದು ದೂರಿದರು.

ಮಾಜಿ ಶಾಸಕ ಜೆ ಆರ್​ ಲೋಬೋ

ಟೋಲ್ ಗೇಟ್ ವಿರುದ್ಧ ಹೋರಾಟ ಮಾಡಿದ ಕಾಂಗ್ರೆಸ್ ಮುಖಂಡೆ ಪ್ರತಿಭಾ ಕುಳಾಯಿ ವಿರುದ್ದ ಸಾಮಾಜಿಕ ಜಾಲತಾಣದಲ್ಲಿ ವೆಬ್​ಸೈಟ್ ಪತ್ರಕರ್ತ ನಿಂದಿಸಲು ಸಾಧ್ಯವಾದದ್ದು ದ್ವೇಷ‌ಭಾಷಣದಿಂದ. ಪೊಲೀಸರು ದ್ವೇಷ ಭಾಷಣದ ಮೇಲೆ ಕ್ರಮ ಕೈಗೊಳ್ಳಲು ವಿಫಲರಾಗಿರುವುದೇ ಇದಕ್ಕೆಲ್ಲ ಕಾರಣ ಎಂದರು.

ಇದನ್ನೂ ಓದಿ: ದಿ ನರ್ಸರಿಮೆನ್ ಕೋ ಆಪರೇಟಿವ್ ಸೊಸೈಟಿಗೆ ಅಧಿಕಾರಿಗಳಿಂದ ಅಕ್ರಮ ಬೀಗ: ಎನ್ ಆರ್ ರಮೇಶ್ ಆರೋಪ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.