ETV Bharat / state

ಬಾಂಬ್​ ಪ್ರಕರಣ: ಆದಿತ್ಯರಾವ್​ನನ್ನು ವಿಮಾನ ನಿಲ್ದಾಣಕ್ಕೆ ಕರೆತಂದು ಸನ್ನಿವೇಶ ಮರು ಸೃಷ್ಟಿ

ಮಂಗಳೂರಿನ ಪಣಂಬೂರು ಸಹಾಯಕ ಆಯುಕ್ತರ ಕಚೇರಿಯಿಂದ ವಿಚಾರಣೆ ಬಳಿಕ ಏರ್ ಪೋರ್ಟ್​ಗೆ ಬಿಗಿ ಪೊಲೀಸ್ ಬಂದೋಬಸ್ತ್​ನಲ್ಲಿ ಕರೆದುಕೊಂಡು ಬರಲಾಯಿತು.ಈ ವೇಳೆ ಆದಿತ್ಯ ರಾವ್​ ಬಾಂಬ್​ ಇರಿಸಿದ್ದ ಸ್ಥಳವನ್ನು ತೋರಿಸಿದ್ದಾನೆ.

ಆದಿತ್ಯರಾವ್,  Aditya Rao
ಆದಿತ್ಯರಾವ್
author img

By

Published : Jan 24, 2020, 1:24 PM IST

Updated : Jan 24, 2020, 1:29 PM IST

ಮಂಗಳೂರು: ಪೊಲೀಸ್ ಕಸ್ಟಡಿಯಲ್ಲಿರುವ ಆದಿತ್ಯರಾವ್​ನನ್ನು ಇಂದು ಮಂಗಳೂರು ವಿಮಾನ ನಿಲ್ದಾಣಕ್ಕೆ ತರಲಾಯಿತು.

ಮಂಗಳೂರು ಏರ್ ಪೋರ್ಟ್​ನಲ್ಲಿ ಬಾಂಬ್ ಇರಿಸಿ ಹೋದ ಸ್ಥಳಕ್ಕೆ ಕರೆದುಕೊಂಡು ಬಂದ ಪೊಲೀಸರು, ಸ್ಥಳ ಮಹಜರು ನಡೆಸಿದರು. ಮಂಗಳೂರಿನ ಪಣಂಬೂರು ಸಹಾಯಕ ಆಯುಕ್ತರ ಕಚೇರಿಯಿಂದ ವಿಚಾರಣೆ ಬಳಿಕ ಏರ್ ಪೋರ್ಟ್​ಗೆ ಬಿಗಿ ಪೊಲೀಸ್ ಬಂದೋಬಸ್ತ್​ನಲ್ಲಿ ಕರೆದುಕೊಂಡು ಬರಲಾಯಿತು.

ಆದಿತ್ಯರಾವ್

ಅದಿತ್ಯ ರಾವ್​, ಬಾಂಬ್ ಇರಿಸಿದ ಸ್ಥಳವನ್ನು ಪೊಲೀಸರಿಗೆ ತೋರಿಸಿದ್ದಾನೆ. ವಿಮಾನ ನಿಲ್ದಾಣಕ್ಕೆ ಹೇಗೆ ಬಂದದ್ದು, ಬಾಂಬ್ ಬ್ಯಾಗನ್ನು ಇರಿಸಿದ ಸ್ಥಳ ಮತ್ತು ಎಸ್ಕಲೇಟರ್​ನಲ್ಲಿ ಇಳಿದು ಹೋದ ಜಾಗ, ಪಾರ್ಕಿಂಗ್ ಪ್ರದೇಶದಲ್ಲಿ ನಡೆದುಕೊಂಡು ಹೋಗಿ ರಿಕ್ಷಾ ಹತ್ತಿ ಹೋದ ಜಾಗವನ್ನು ತೋರಿಸಿದ್ದಾನೆ.

Intro:ಮಂಗಳೂರು: ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬ್ ಇರಿಸಿ ಬಂಧನಕ್ಕೊಳಗಾಗಿ ಪೊಲೀಸ್ ಕಸ್ಟಡಿಯಲ್ಲಿರುವ ಆದಿತ್ಯರಾವ್ ನನ್ನು ಇಂದು ಮಂಗಳೂರು ವಿಮಾನ ನಿಲ್ದಾಣಕ್ಕೆ ತರಲಾಯಿತು.

Body:ಮಂಗಳೂರು ಏರ್ ಪೋರ್ಟ್ ನಲ್ಲಿ ಬಾಂಬ್ ಇರಿಸಿ ಹೋದ ಸ್ಥಳಕ್ಕೆ ಕರೆದುಕೊಂಡು ಬಂದ ಪೊಲೀಸರು ಸ್ಥಳ ಮಹಜರು ನಡೆಸಿದರು. ಮಂಗಳೂರಿನ ಪಣಂಬೂರು ಸಹಾಯಕ ಆಯುಕ್ತರ ಕಚೇರಿಯಿಂದ ವಿಚಾರಣೆ ಬಳಿಕ ಏರ್ ಪೋರ್ಟ್ ಗೆ ಬಿಗಿ ಪೊಲೀಸ್ ಬಂದೋಬಸ್ತ್ ನಲ್ಲಿ ಕರೆದುಕೊಂಡು ಬರಲಾಯಿತು.
ಏರ್ ಪೋರ್ಟ್ ಗೆ ಆದಿತ್ಯರಾವ್ ನನ್ನು ಮುಸುಕು ಹಾಕಿ ಕರೆದುಕೊಂಡು ಬರಲಾಗಿದ್ದು ಈ ಸಂದರ್ಭದಲ್ಲಿ ಆತ ಬಾಂಬ್ ಇರಿಸಿದ ಸ್ಥಳವನ್ನು ಪೊಲೀಸರಿಗೆ ತೋರಿಸಿದ್ದಾನೆ. ವಿಮಾನ ನಿಲ್ದಾಣಕ್ಕೆ ಹೇಗೆ ಬಂದದ್ದು, ಬಾಂಬ್ ಬ್ಯಾಗನ್ನು ಇರಿಸಿದ ಸ್ಥಳ ಮತ್ತು ಎಸ್ಕಲೇಟರ್ ನಲ್ಲಿ ಇಳಿದು ಹೋದ ಜಾಗ ಮತ್ತು ಪಾರ್ಕಿಂಗ್ ಪ್ರದೇಶದಲ್ಲಿ ನಡೆದುಕೊಂಡು ಹೋಗಿ ರಿಕ್ಷಾ ಹತ್ತಿ ಹೋದ ವರೆಗೆ ಜಾಗವನ್ನು ಆತ ಮಹಜರು ವೇಳೆ ಪೊಲೀಸರಿಗೆ ತೋರಿಸಿದ್ದಾನೆ. ಆದಿತ್ಯರಾವ್ ಇಂದು ನೀಲಿ ಬಣ್ಣದ ಚಪ್ಪಲಿ, ನೀಲಿ ಬಣ್ಣದ ಪ್ಯಾಂಟ್ ಮತ್ತು ಷರ್ಟ್ ಧರಿಸಿದ್ದು ಮುಖಕ್ಕೆ ಪೊಲೀಸರು ಮುಸುಕು ಹಾಕಿ ಮಹಜರುವಿಗೆ ಕರೆದುಕೊಂಡು ಬಂದಿದ್ದರು.

Conclusion:
Last Updated : Jan 24, 2020, 1:29 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.