ಮಂಗಳೂರು: ಗುಳಿಕೆನ್ನೆ ನಟಿ ರಚಿತಾರಾಮ್ ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿಯಲ್ಲಿರುವ ಬಪ್ಪನಾಡು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿದರು.
ರಚಿತಾರಾಮ್ ತಮ್ಮಕುಟುಂಬ ಸಮೇತ ಕರಾವಳಿ ಪ್ರವಾಸ ಮಾಡುತ್ತಿದ್ದು, ಪುಣ್ಯಕ್ಷೇತ್ರ ಗಳ ದರ್ಶನ ಪಡೆಯುತ್ತಿದ್ದಾರೆ. ನಿನ್ನೆ ಸಂಜೆ ಬಪ್ಪನಾಡು ದುರ್ಗಾಪರಮೇಶ್ವರಿ ದೇವಸ್ಥಾನ ದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ದೇವಾಲಯದ ವತಿಯಿಂದ ಅವರನ್ನು ಗೌರವಿಸಲಾಯಿತು. ಈ ವೇಳೆ ದೇವಸ್ಥಾನಕ್ಕೆ ಬಂದಿದ್ದ ಭಕ್ತರು ರಚಿತಾ ರಾಮ್ ಜೊತೆ ಸೆಲ್ಪಿ ತೆಗೆಸಿಕೊಂಡು ಸಂತಸಪಟ್ಟರು.
ಓದಿ: ಅಲಿಗಢ ವಿವಿ ವಿದ್ಯಾರ್ಥಿಗಳಿಂದ ಹೈಬ್ರಿಡ್ ಎಲೆಕ್ಟ್ರಿಕ್ ವಾಹನ ವಿನ್ಯಾಸ.. ಎಪಿಸೈಕಲ್ ಸ್ಪರ್ಧೆಯಲ್ಲಿ 5ನೇ ಸ್ಥಾನ
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕರಾವಳಿಯ ದೇವಸ್ಥಾನಗಳು ಭಕ್ತಿಯ ತಾಣಗಳಾಗಿದ್ದಾವೆ. ದೇವರು ಎಲ್ಲರಿಗೂ ಒಳ್ಳೆಯದು ಮಾಡಲಿ. ಕನ್ನಡ ಚಿತ್ರರಂಗಕ್ಕೆ ಎಲ್ಲರ ಸಪೋರ್ಟ್ ಇರಲಿ. ಅಪ್ಪುವನ್ನು ಕಳೆದುಕೊಂಡಿರುವುದು ದುಖ ತಂದಿದೆ ಎಂದರು.
ಕರಾವಳಿಯ ಊಟ ಬಲು ಇಷ್ಟ. ಕರಾವಳಿಯ ಎಲ್ಲಾ ತರದ ಊಟಗಳನ್ನು ಇಷ್ಟ ಪಡುತ್ತೇನೆ. ಪಬ್ಬಾಸ್ ಐಸ್ ಕ್ರೀಂ ತಿನ್ನಬೇಕೆಂದು ಇಷ್ಟವಿತ್ತು. ಆದರೆ ಗಂಟಲು ನೋವಿನಿಂದ ಸಾಧ್ಯವಾಗಿಲ್ಲ ಎಂದರು.