ETV Bharat / state

ಸರ್ಕಾರಿ ನಿಗದಿತ ದರ ಮೀರಿ ಹಣ ಪಡೆದ ಖಾಸಗಿ ಆಸ್ಪತ್ರೆಗಳ ವಿರುದ್ಧ ಕ್ರಮ: ಡಾ.ಕೆ.ವಿ.ರಾಜೇಂದ್ರ - government fixed rates

ಕೋವಿಡ್ ಚಿಕಿತ್ಸೆಗೆಂದು ಪ್ರತ್ಯೇಕವಾಗಿ ಖಾಸಗಿ ಆಸ್ಪತ್ರೆಗೆ ಹೋಗುವವರಿಗೂ ಸರ್ಕಾರ ಇಂತಿಷ್ಟೇ ದರ ವಿಧಿಸಬೇಕೆಂದು ನಿಯಮ ಇದೆ. ಅದನ್ನು ಮೀರಿ ಖಾಸಗಿ ಆಸ್ಪತ್ರೆಗಳು ಹೆಚ್ಚಿನ ದರ ವಿಧಿಸಿದ್ದಲ್ಲಿ ಅಂತಹ ಆಸ್ಪತ್ರೆಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ದ.ಕನ್ನಡ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಎಚ್ಚರಿಕೆ ನೀಡಿದ್ದಾರೆ.

Dr. K.V. Rajendra
ದ.ಕನ್ನಡ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ
author img

By

Published : Jul 31, 2020, 9:38 PM IST

ಮಂಗಳೂರು: ಕೊರೊನಾ ಸೋಂಕಿತರಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಸರ್ಕಾರದ ನಿಯಮದಂತೆ ಉಚಿತ ಚಿಕಿತ್ಸೆ ಎಲ್ಲರಿಗೂ ಲಭ್ಯವಿದೆ. ವೆನ್ಲಾಕ್ ಕೋವಿಡ್ ಆಸ್ಪತ್ರೆಯಲ್ಲಿ ಬೆಡ್​ಗಳು ಖಾಲಿ ಇಲ್ಲದಿದ್ದಲ್ಲಿ ರೋಗಿಗಳನ್ನು ಖಾಸಗಿ ಆಸ್ಪತ್ರೆಗಳಿಗೆ ಕಳುಹಿಸಲಾಗುತ್ತದೆ. ಅಲ್ಲಿ ಅವರಿಗೆ ಆರೋಗ್ಯ ಕರ್ನಾಟಕ ಹಾಗೂ ಆಯುಷ್ಮಾನ್ ಭಾರತ ಕಾರ್ಡ್ ಮೂಲಕ‌ ಚಿಕಿತ್ಸೆ ಕೊಡಲಾಗುತ್ತದೆ. ಆದರೆ ಖಾಸಗಿ ಆಸ್ಪತ್ರೆಗಳು ಸರ್ಕಾರ ವಿಧಿಸಿರುವ ದರವನ್ನು ಅನುಸರಿಸಬೇಕು ಎಂದು ದ.ಕನ್ನಡ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಹೇಳಿದರು.

ದ.ಕ.ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ತಮ್ಮ ಕಚೇರಿಯಲ್ಲಿ ಮೊದಲ ಬಾರಿಗೆ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಕೋವಿಡ್ ಚಿಕಿತ್ಸೆಗೆಂದು ಪ್ರತ್ಯೇಕವಾಗಿ ಖಾಸಗಿ ಆಸ್ಪತ್ರೆಗೆ ಹೋಗುವವರಿಗೂ ಸರ್ಕಾರ ಇಂತಿಷ್ಟೇ ದರ ವಿಧಿಸಬೇಕೆಂದು ನಿಯಮ ಇದೆ. ಅದನ್ನು ಮೀರಿ ಖಾಸಗಿ ಆಸ್ಪತ್ರೆಗಳು ಹೆಚ್ಚಿನ ದರ ವಿಧಿಸಿದ್ದಲ್ಲಿ ಅವರು ಬರೀ ಕೋವಿಡ್ ಸೋಂಕಿತರೇ ಅಥವಾ ಇನ್ನಿತರ ರೋಗಗಳಿಗೆ ತುತ್ತಾಗಿದ್ದಾರೆಯೇ ಎಂದು ಪರಿಶೀಲನೆ ನಡೆಸಲಾಗುತ್ತದೆ. ಆಗ ಸರ್ಕಾರ ವಿಧಿಸಿರುವ ನಿಯಮವನ್ನು ಮೀರಿ ದರವನ್ನು ವಿಧಿಸಿದ್ದಲ್ಲಿ ಅಂತಹ ಆಸ್ಪತ್ರೆಗಳ ಮೇಲೆ ಖಂಡಿತಾ ಕ್ರಮ ಕೈಗೊಳ್ಳಲಾಗುತ್ತದೆ.

ದ.ಕನ್ನಡ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ

ಕೆಲವು ಪ್ರಕರಣಗಳಲ್ಲಿ ಸೋಂಕು ತಪಾಸಣೆಯಲ್ಲಿ ಒಂದು ಸಲ ಪಾಸಿಟಿವ್, ಒಂದು ಸಲ ನೆಗೆಟಿವ್ ಬಂದಿರುತ್ತದೆ. ಆದರೆ ಇದಕ್ಕಾಗಿ ತಪಾಸಣೆಯ ಮೇಲೆ ಅನುಮಾನ ವ್ಯಕ್ತಪಡಿಸುವ ಅಗತ್ಯವಿಲ್ಲ. ವೈರಾಣು ಪ್ರಭಾವ ಕಡಿಮೆ ಆಗಿರುವುದರಿಂದಲೂ ಪಾಸಿಟಿವ್, ನೆಗೆಟಿವ್ ಬಂದಿರಬಹುದು. ಹಾಗಾಗಿ ಮುಂದಿನ ದಿನಗಳಲ್ಲಿ ಜನಸಾಮಾನ್ಯರಿಗೆ ನಂಬಿಕೆ ಮೂಡಿಸುವಂತಹ ಸರ್ವ ಪ್ರಯತ್ನವನ್ನು ನಾವು ಮಾಡುತ್ತಿದ್ದೇವೆ ಎಂದು ಡಿಸಿ ಹೇಳಿದರು.

ಖಾಸಗಿ ಕ್ಲಿನಿಕ್ ವೈದ್ಯರುಗಳು ನಾಲ್ಕು ತಿಂಗಳಾದರೂ ಇನ್ನೂ ಕ್ಲಿನಿಕ್ ತೆರೆಯದ ಕಾರಣ ಜನರು ಇತರ ರೋಗಕ್ಕೆ ವೈದ್ಯರುಗಳಿಲ್ಲದೆ ಪರದಾಡುವಂತಾಗಿದೆಯಲ್ಲಾ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ಖಾಸಗಿ ವೈದ್ಯರುಗಳು ಸೂಕ್ತವಾಗಿ ನಿಯಮ ಪಾಲನೆ ಮಾಡಿ ಕ್ಲಿನಿಕ್​ಗಳನ್ನು ತೆರೆಯಬೇಕೆಂದು ಸರ್ಕಾರಿ ಆದೇಶವಿದೆ. ಆದಾಗ್ಯೂ, ಕ್ಲಿನಿಕ್ ತೆರೆಯದಿದ್ದಲ್ಲಿ ತಕ್ಷಣ ಈ ರೀತಿ ಮುಚ್ಚಲ್ಪಟ್ಟ ವೈದ್ಯರುಗಳ ಬೆನ್ನು ತಟ್ಟಿ ಅವರ ಗೊಂದಲಗಳನ್ನು ನಿವಾರಣೆ ಮಾಡಿ ಕ್ಲಿನಿಕ್ ತೆರೆಯುವ ಪ್ರಯತ್ನ ಮಾಡಲಾಗುತ್ತದೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.