ETV Bharat / state

ಪೊಲೀಸ್ ಕಮಿಷನರ್‌ ಕಂಠದಲ್ಲಿ ಬಂದ ಟಗರು ಹಾಡಿಗೆ ಡ್ಯಾನ್ಸ್ ಮಾಡಿದ ನಟ ಶಿವರಾಜ್ ಕುಮಾರ್ - Acter Shivaraj Kumar danced 'Tagaru' movie song

ಮಂಗಳೂರು ನಗರ ಪೊಲೀಸ್​ ಕಮಿಷನರ್​ ಶಶಿಕುಮಾರ್ ಅವರು ಹಾಡಿದ ಟಗರು ಹಾಡಿಗೆ ನಟ ಶಿವರಾಜ್ ಕುಮಾರ್ ಅವರು ಡ್ಯಾನ್ಸ್​ ಮಾಡಿದ್ದಾರೆ..

ಟಗರು ಸಿನಿಮಾ ಹಾಡಿಗೆ ಡ್ಯಾನ್ಸ್ ಮಾಡಿದ ನಟ ಶಿವರಾಜ್ ಕುಮಾರ್

author img

By

Published : May 2, 2022, 7:50 PM IST

ಮಂಗಳೂರು : ನಗರ ಪೊಲೀಸ್ ಕಮಿಷನರ್​ ಶಶಿಕುಮಾರ್ ಅವರು ಹಾಡಿದ ಟಗರು ಸಿನಿಮಾ ಹಾಡಿಗೆ ಹ್ಯಾಟ್ರಿಕ್ ಹೀರೋ ಶಿವರಾಜ್‌ ಕುಮಾರ್ ಹೆಜ್ಜೆ ಹಾಕಿದರು. ಮಂಗಳೂರಿನಲ್ಲಿ ನಗರ ಪೊಲೀಸ್ ಇಲಾಖೆ ಆಯೋಜಿಸಿದ ಪುನೀತ್​ ರಾಜ್ ಕುಮಾರ್ ಪುಣ್ಯಸ್ಮರಣೆಯಲ್ಲಿ ಭಾಗವಹಿಸಿದ ಶಿವರಾಜ್ ಕುಮಾರ್ ಅವರು ವೇದಿಕೆಯಲ್ಲಿ ಮಂಗಳೂರು ಕಮಿಷನರ್​ ಶಶಿಕುಮಾರ್ ಅವರು ಹಾಡಿದ ಟಗರು ಹಾಡಿಗೆ ಡ್ಯಾನ್ಸ್ ಮಾಡಿದರು.

ಟಗರು ಸಿನಿಮಾ ಹಾಡಿಗೆ ಡ್ಯಾನ್ಸ್ ಮಾಡಿದ ನಟ ಶಿವರಾಜ್ ಕುಮಾರ್..

ಆರಂಭದಲ್ಲಿ ಕಮಿಷನರ್​ ಜೊತೆಗಿನ ಹಾಡಿಗೆ ಶಿವರಾಜ್ ಕುಮಾರ್ ಧ್ವನಿಗೂಡಿಸಿದರೆ ಬಳಿಕ ವೇದಿಕೆಯಲ್ಲಿ ಡ್ಯಾನ್ಸ್ ಮಾಡುತ್ತಿದ್ದ ಪುಟಾಣಿಗಳು, ಪೊಲೀಸರ ಜೊತೆಗೆ ಹೆಜ್ಜೆ ಹಾಕಿದರು. ಪೊಲೀಸ್ ಕಮಿಷನರ್ ಶಶಿಕುಮಾರ್ ಅವರು ಸುಂದರವಾಗಿ ಹಾಡಿದ್ದಾರೆ. ಆ ಹಾಡು ಹೈ ಪಿಚ್​ನದ್ದು. ಅದನ್ನು ಹಾಡುವುದು ಸುಲಭವಿಲ್ಲ. ಕಮಿಷನರ್ ಹಾಡು ನನಗೂ ಆಶ್ಚರ್ಯವಾಯಿತು ಎಂದು ಶಿವರಾಜ್ ಕುಮಾರ್ ಶ್ಲಾಘಿಸಿದ್ದಾರೆ.

ಪುನೀತ್ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಅಪ್ಪು ಭಾವಚಿತ್ರಕ್ಕೆ ಪುಷ್ಪ ನಮನ ಮಾಡಿ ಮಾತನಾಡಿದ ಅವರು, ಅಪ್ಪು ಹುಟ್ಟುವಾಗಲೇ ಸೂಪರ್ ಸ್ಟಾರ್. ಅಪ್ಪು ಇಲ್ಲದಿರುವುದನ್ನು ನೆನೆದುಕೊಳ್ಳಲು ಆರು ತಿಂಗಳಾದರೂ ಸಂಕಟವಾಗುತ್ತಿದೆ. ನಾವು ಇನ್ನೂ ಅಪ್ಪುವನ್ನು ನೆನೆದು ಸಂಭ್ರಮಿಸಬೇಕು ಎಂದರು. ಇದೇ ವೇಳೆ ಪೊಲೀಸರ ಜೊತೆಗೆ ಸಂವಾದ ನಡೆದಿದ್ದು, ಪೊಲೀಸರ ಪ್ರಶ್ನೆಯೊಂದಕ್ಕೆ ಟಗರು 2 ಬರುವ ಸಾಧ್ಯತೆಯ ಬಗ್ಗೆ ರಿವೀಲ್​ ಮಾಡಿದ್ದಾರೆ.

ನಟ ಶಿವರಾಜ್ ಕುಮಾರ್ ಮಾತನಾಡಿರುವುದು

ಮಾಧ್ಯಮದೊಂದಿಗೆ ಮಾತನಾಡಿದ ಅವರು, ಮಹಾರಾಷ್ಟ್ರದಲ್ಲಿ ಪೊಲೀಸರಿಗಾಗಿ ಬಾಲಿವುಡ್‌ನವರು ಕಾರ್ಯಕ್ರಮ ಮಾಡಿದಂತೆ ಅಪ್ಪಾಜಿಯವರು ಪೊಲೀಸ್‌ ಇಲಾಖೆಗೆ ಕಾರ್ಯಕ್ರಮ ಮಾಡಿದ್ದರು. ದೆಹಲಿಗೆ ಹೋಗಿಯೂ ಕಾರ್ಯಕ್ರಮ ಮಾಡಿದ್ದರು. ಕನ್ನಡ ಸಿನಿಮಾ‌ ಇಂಡಸ್ಟ್ರಿಯಿಂದಲೂ ಮುಂದೆ ಕಾರ್ಯಕ್ರಮ ಮಾಡಲಾಗುವುದು ಎಂದರು.

ಮಂಗಳೂರಿನ ಕಾರ್ಯಕ್ರಮದಲ್ಲಿ ಪೊಲೀಸರ ಪಾಲ್ಗೊಳ್ಳುವಿಕೆ ಖುಷಿ ತಂದಿದೆ. ಮುಂದೆ ನನ್ನ ಸಿನಿಮಾ 'ಬೈರಾಗಿ' ಬಿಡುಗಡೆಯಾಗಲಿದ್ದು, ವೇದ ಸಿನಿಮಾದ ಶೂಟಿಂಗ್ ನಡೆಯುತ್ತಿದೆ ಎಂದರು. ಈ ಸಂದರ್ಭದಲ್ಲಿ ಗೀತಾ ಶಿವರಾಜ್ ಕುಮಾರ್ ಜೊತೆಗಿದ್ದರು.

ಓದಿ: ಟ್ರಕ್ ಟರ್ಮಿನಲ್ ವಿವಾದ : ಆರ್. ಅಶೋಕ್ ಅವರು ಕ್ರಮ ಕೈಗೊಳ್ಳಲಿದ್ದಾರೆ- ಸಚಿವ ಕೆ. ಗೋಪಾಲಯ್ಯ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.