ETV Bharat / state

ಉಲ್ಲಂಜೆ ಬಳಿ ಮಾರಕಾಸ್ತ್ರಗಳಿಂದ ದಾಳಿ: ಸುರತ್ಕಲ್ ದೀಪಕ್ ರಾವ್ ಕೊಲೆ ಆರೋಪಿ ಎಸ್ಕೇಪ್

ಶುಕ್ರವಾರ ಸಂಜೆ 5ರಿಂದ 6 ಯುವಕರು ಮಾರಕಾಸ್ತ್ರಗಳಿಂದ ಏಕಾಏಕಿ ಸುರತ್ಕಲ್ ದೀಪಕ್ ರಾವ್ ಕೊಲೆ ಆರೋಪಿ ನೌಷಾದ್ ಮನೆಗೆ ನುಗ್ಗಿದ್ದು, ನೌಷಾದ್ ಹಿಂದಿನ ಬಾಗಿಲಿನಿಂದ ಓಡಿ ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ.

Accused Noushad
Accused Noushad
author img

By

Published : Aug 8, 2020, 9:07 PM IST

ಸುರತ್ಕಲ್: ಕಿನ್ನಿಗೋಳಿ ಸಮೀಪದ ಉಲ್ಲಂಜೆ ಬಳಿ ಶುಕ್ರವಾರ (ಆ.7) ಸಂಜೆ ವೇಳೆ ಯುವಕರಿಂದ ಮಾರಕಾಸ್ತ್ರಗಳಿಂದ ದಾಳಿ ನಡೆದಿದೆ. ಸುರತ್ಕಲ್ ದೀಪಕ್ ರಾವ್ ಕೊಲೆ ಆರೋಪಿ ನೌಷಾದ್ ಎಂಬಾತ ದಾಳಿಯಲ್ಲಿ ಜೀವ ಉಳಿಸಿಕೊಂಡು ಎಸ್ಕೇಪ್ ಆಗಿದ್ದಾನೆ ಎಂದು ತಿಳಿದು ಬಂದಿದೆ.

ಕಿನ್ನಿಗೋಳಿ ಸಮೀಪದ ಉಲ್ಲಂಜೆ ಬಳಿ ಸುರತ್ಕಲ್ ದೀಪಕ್ ರಾವ್ ಕೊಲೆ ಆರೋಪಿಯಾದ ನೌಷಾದ್ ಮನೆಯಿದೆ. ಶುಕ್ರವಾರ ಸಂಜೆ 5 ರಿಂದ 6 ಯುವಕರು ಮಾರಕಾಸ್ತ್ರಗಳಿಂದ ಏಕಾ ಏಕಿ ನೌಷಾದ್ ಮನೆಗೆ ನುಗ್ಗಿದ್ದು, ಮನೆಯ ಒಳಗಿನ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿ, ನೌಷಾದ್ ಮೇಲೆ ದಾಳಿ ನಡೆಸಲು ಅಣಿಯಾಗುತ್ತಿದ್ದಂತೆ ಮನೆಯಲ್ಲಿದ್ದವರು ಗಲಿಬಿಲಿಗೊಂಡಿದ್ದಾರೆ. ಈ ಸಂದರ್ಭ ನೌಷಾದ್ ಹಿಂದಿನ ಬಾಗಿಲಿನಿಂದ ಓಡಿ ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ.

ಕಳೆದ 2018 ರಂದು ಸುರತ್ಕಲ್ ಸಮೀಪದ ಕಾಟಿಪಳ್ಳ ಎಂಬಲ್ಲಿ ದೀಪಕ್ ರಾವ್ ಎಂಬುವವರ ಕೊಲೆಯಾಗಿದ್ದು, ಪೊಲೀಸರು 13 ಜನ ಕೊಲೆ ಆರೋಪಿಗಳ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ಪ್ರಕರಣದ ಪ್ರಧಾನ ನಾಲ್ಕು ಆರೋಪಿಗಳಲ್ಲಿ ಕಿನ್ನಿಗೋಳಿ ಉಲ್ಲಂಜೆಯ ನೌಷಾದ್ ಕೂಡಾ ಸೇರಿದ್ದಾನೆ. ಕಳೆದ ಕೆಲ ತಿಂಗಳ ಹಿಂದೆ ಜಾಮೀನು ಪಡೆದು ಹೊರ ಬಂದಿದ್ದ ಎನ್ನಲಾಗಿದೆ.

ಘಟನೆಯಿಂದ ಸ್ಥಳೀಯರಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ. ಸ್ಥಳಕ್ಕೆ ಮುಲ್ಕಿ ಪೊಲೀಸರು ಭೇಟಿ ನೀಡಿ, ಬಿಗಿ ಪೊಲೀಸ್ ಬಂದೋಬಸ್ತ್ ಮಾಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.