ಮಂಗಳೂರು: ಕಟೀಲು ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಬಗ್ಗೆ ಕೆಲವು ದಿನಗಳ ಹಿಂದೆ ವಾಯ್ಸ್ ಮೆಸೇಜ್ ಮೂಲಕ ಅಶ್ಲೀಲ ಪದ ಬಳಸಿ ಅವಹೇಳನಕಾರಿಯಾಗಿ ನಿಂದಿಸಿರುವ ಆರೋಪಿ ಇಂದು ಶ್ರೀ ದೇವಿಯ ಮುಂದೆ ಕ್ಷಮೆಯಾಚನೆ ಮಾಡಿರುವ ಘಟನೆ ನಡೆದಿದೆ.
ಮೂಲತಃ ಬಜ್ಪೆ ನಿವಾಸಿಯಾಗಿರುವ ಆಲ್ಬರ್ಟ್ ಫೆರ್ನಾಂಡಿಸ್ ಮುಂಬೈನಲ್ಲಿ ಕೆಲಸ ಮಾಡುತ್ತಿದ್ದಾನೆ. ಈತ ಕೆಲ ದಿನಗಳ ಹಿಂದೆ ದಿನೇಶ್ ಎಂಬುವರಿಗೆ ಕಟೀಲು ಶ್ರೀದೇವಿಯ ನಿಂದನೆಯ ವಾಯ್ಸ್ ಮೆಸೇಜ್ ಕಳಿಸಿದ್ದ.
ಈತನ ಹೇಳಿಕೆಯಿಂದ ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆಯಾಗಿದೆ ಎಂದು ಬಜ್ಪೆ ಠಾಣೆಯಲ್ಲಿ ದೂರು ಕೂಡ ದಾಖಲಾಗಿತ್ತು. ಈಗ ಆ ವ್ಯಕ್ತಿ ತಾನು ಮಾಡಿದ್ದು ತಪ್ಪು. ಈ ರೀತಿ ತಾನು ಹೇಳಬಾರದಿತ್ತೆಂದು ಕಣ್ಣೀರಿಟ್ಟು ಕ್ಷಮೆ ಯಾಚಿಸಿದ್ದಾನೆ.
ನಂತರ ಆರೋಪಿ ಹಾಗೂ ಈ ಬಗ್ಗೆ ದೂರು ದಾಖಲಿಸಿರುವ ಹಿಂದೂ ಸಂಘಟನೆಯ ಮುಖಂಡರು ಬಜ್ಪೆ ಠಾಣೆಯಲ್ಲಿ ಜೊತೆಯಾಗಿ ತೆರಳಿ ಪ್ರಕರಣವನ್ನು ಇತ್ಯರ್ಥಗೊಳಿಸಿದ್ದಾರೆ.
ಇದನ್ನೂ ಓದಿ: ವ್ಯಕ್ತಿಯ ಅಂತ್ಯಸಂಸ್ಕಾರ ಮತ್ತು ತಿಥಿ ಕಾರ್ಯದಲ್ಲಿ ಭಾಗಿಯಾಗಿ ಅಚ್ಚರಿ ಮೂಡಿಸಿದ ವಾನರ