ಮಂಗಳೂರು : ನಾಲ್ಕು ವರ್ಷಗಳಿಂದ ಮಗಳಿಗೆ ಡ್ರಗ್ಸ್ ನೀಡಿ ಲೈಂಗಿಕವಾಗಿ ಬಳಸಿಕೊಳ್ಳುತ್ತಿದ್ದಾನೆಂದು ಆರೋಪಿಸಿ ಮಹಿಳೆಯೋರ್ವರು ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ. ಇದೀಗ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಸುರತ್ಕಲ್, ಕಾಟಿಪಳ್ಳ ನಿವಾಸಿ ಮಹಮ್ಮದ್ ಶರೀಫ್ (47) ಬಂಧಿತ ಆರೋಪಿ. ಬಿಜೈ ನಿವಾಸಿ ಮಹಿಳೆಯು ತಮ್ಮ ಮಗಳನ್ನು ಶರೀಫ್ ನಾಲ್ಕು ವರ್ಷಗಳಿಂದ ಪುಸಲಾಯಿಸಿ ಡ್ರಗ್ಸ್ ನೀಡಿ ಲೈಂಗಿಕವಾಗಿ ದುರ್ಬಳಕೆ ಮಾಡುತ್ತಿದ್ದಾನೆ ಎಂದು ದೂರು ನೀಡಿದ್ದರು.
ಡಿಸೆಂಬರ್ 22ರಂದು 5.45ರ ಸುಮಾರಿಗೆ ಮನೆಯಲ್ಲಿದ್ದ ಯುವತಿಯನ್ನು ಫೋನ್ ಕರೆ ಮಾಡಿ ನಗರದ ಲಾಲ್ಬಾಗ್ನಲ್ಲಿರುವ ಬಿಗ್ ಬಜಾರ್ನ ಮುಂಭಾಗಕ್ಕೆ ಕರೆದಿದ್ದಾನೆ.
ಅಲ್ಲಿಂದ ಆತ ಬೇರೆಡೆಗೆ ಆಕೆಯನ್ನು ಕರೆದೊಯ್ದು ರಾತ್ರಿ ಪೂರ್ತಿ ಲೈಂಗಿಕವಾಗಿ ದುರ್ಬಳಕೆ ಮಾಡಿಕೊಂಡಿದ್ದಾನೆ ಎಂದು ಮಹಿಳೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.
ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿರುವ ಮಹಿಳೆಯು, ಕೃತ್ಯದ ಬಗ್ಗೆ ಈ ಹಿಂದೆಯೂ ಕೂಡ ಪೊಲೀಸರಿಗೆ ದೂರು ನೀಡಲಾಗಿತ್ತು. ಆದರೆ, ಯಾವುದೇ ಪ್ರಯೋಜನವಾಗಿರಲಿಲ್ಲ ಎಂದು ಆರೋಪಿಸಿದ್ದಾರೆ.
ಅಲ್ಲದೆ, ಆರೋಪಿಯು ತನ್ನ ಮಗಳನ್ನು ಕಳೆದ ನಾಲ್ಕು ವರ್ಷಗಳಿಂದ ಪುಸಲಾಯಿಸಿ ಡ್ರಗ್ಸ್ ದಂಧೆಯಲ್ಲಿ ಸಿಲುಕಿಸಿದ್ದಾನೆ. ಈ ದಂಧೆಯಿಂದ ಅವಳನ್ನು ಪಾರು ಮಾಡಿ ಎಂದು ಯುವತಿಯ ತಾಯಿಯು ಸಂಘಟನೆಯೊಂದರ ಮೊರೆ ಹೋಗಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ಊಟದ ಬಿಲ್ ಕೇಳಿದ್ದಕ್ಕೆ ಡಾಬಾಕ್ಕೆ ಬೆಂಕಿ ಇಟ್ಟ ಪುಂಡರು..