ETV Bharat / state

ಮಂಗಳೂರು: ಅಕ್ರಮವಾಗಿ ಮನೆ ಪ್ರವೇಶಿಸಿ ಮಲಗಿದ್ದ ಮಹಿಳೆಗೆ ಕಿರುಕುಳ, ಆರೋಪಿ ಬಂಧನ - ಉಳ್ಳಾಲ ತಾಲೂಕಿನ ಹರೇಕಳದ ನೌಫಾಲ್

ಮಲಗಿದ್ದ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪಿಯನ್ನು ಮಂಗಳೂರು ನಗರ ಪೊಲೀಸರು ಬಂಧಿಸಿದ್ದಾರೆ.

ಆರೋಪಿ ನೌಫಾಲ್
ಆರೋಪಿ ನೌಫಾಲ್
author img

By ETV Bharat Karnataka Team

Published : Oct 26, 2023, 10:57 PM IST

ಮಂಗಳೂರು: ಮನೆಗೆ ಅಕ್ರಮ ಪ್ರವೇಶ ಮಾಡಿ ಮಲಗಿದ್ದ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪಿಯನ್ನು ಮಂಗಳೂರು ನಗರ ಪೊಲೀಸರು ಬಂಧಿಸಿದ್ದಾರೆ. ಉಳ್ಳಾಲ ತಾಲೂಕಿನ ಹರೇಕಳದ ನೌಫಾಲ್ ಬಂಧಿತ ಆರೋಪಿ.

ಅಕ್ಟೋಬರ್ 25 ರಂದು ಮಹಿಳೆ ತನ್ನ ಮಕ್ಕಳೊಂದಿಗೆ ಮಲಗಿದ್ದ ವೇಳೆ ಘಟನೆ ನಡೆದಿದೆ. ಮಹಿಳೆ ರಾತ್ರಿ 11 ಗಂಟೆ ಸಮಯಕ್ಕೆ ಊಟ ಮುಗಿಸಿ ತಮ್ಮ ಬೆಡ್ ರೂಮ್​ನಲ್ಲಿ ಮಲಗಿದ್ದು, ರಾತ್ರಿ ಸುಮಾರು 12.10 ಗಂಟೆಯ ಸಮಯಕ್ಕೆ ಅವರ ಕಾಲು ಮತ್ತು ಕೈಯನ್ನು ಯಾರೋ ಸವರಿದಂತಾಗಿದೆ. ಕೂಡಲೇ ಎದ್ದು ಲೈಟ್ ಹಾಕಿ ನೋಡಿದಾಗ ಮನೆಯೊಳಗೆ ಅಕ್ರಮ ಪ್ರವೇಶ ಮಾಡಿದ್ದ ನೌಫಾಲ್​ನು ಮಂಚದ ಕೆಳಗಿನಿಂದ ಎದ್ದು ಹಿಂಬಾಗಿಲನ್ನು ತೆರೆದು ಹೋಗಿದ್ದಾನೆ. ಈ ಬಗ್ಗೆ ಮಹಿಳೆ ಕೊಣಾಜೆ ಪೊಲೀಸ್ ಠಾಣೆಯಲ್ಲಿ ದೂರನ್ನು ನೀಡಿದ್ದರು. ಆರೋಪಿಯನ್ನು ಇಂದು ಮಧ್ಯಾಹ್ನ ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ವಿದ್ಯಾರ್ಥಿನಿಯರಿಗೆ ಬ್ಯಾಡ್​ ಟಚ್​, ಪ್ರಾಂಶುಪಾಲ ಅರೆಸ್ಟ್​: ವಸತಿ‌ ಶಾಲೆಯಲ್ಲಿದ್ದ ಪ್ರೌಢ ಶಾಲಾ ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಆರೋಪಿ ಪ್ರಾಂಶುಪಾಲರೊಬ್ಬರನ್ನು ಪೋಕ್ಸೋ ಕಾಯ್ದೆಯಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು (ಡಿಸೆಂಬರ್ 22-2023) ಬಂಧಿಸಿದ್ದರು. ಹಾಸನದ ಮಕ್ಕಳ ಕಲ್ಯಾಣ ಸಮಿತಿಯವರು ಮಕ್ಕಳಿಗೆ ಗುಡ್ ಟಚ್ ಬ್ಯಾಡ್ ಟಚ್ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಈ ಕಾರ್ಯಕ್ರಮದ ತರುವಾಯ ಮಕ್ಕಳೊಂದಿಗೆ ಸಮಾಲೋಚನೆ ನಡೆಸಿದಾಗ ಕೃತ್ಯ ಬಯಲಿಗೆ ಬಂದಿತ್ತು.

ಅರಕಲಗೂಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 18ನೇ ತಾರೀಖಿಗೆ ಮೊರಾರ್ಜಿ ದೇಸಾಯಿ ಹೆಣ್ಣು ಮಕ್ಕಳ ಶಾಲೆಯಲ್ಲಿ 1098 ಚೈಲ್ಡ್​ ಹೆಲ್ಪ್​​ಲೈನ್​ನವರು ಶಾಲೆಗಳಲ್ಲಿ ಜಾಗೃತಿ ನೀಡುವ ಜೊತೆಗೆ ಅಲ್ಲಿರುವ 8, 9, 10ನೇ ತರಗತಿ ವಿದ್ಯಾರ್ಥಿಗಳಿಗೆ ಗುಡ್​ ಟಚ್​ ಹಾಗೂ ಬ್ಯಾಡ್​ ಟಚ್​ ಬಗ್ಗೆ ಅವರಿಗೆ ಜಾಗೃತಿಯನ್ನು ಕೊಡಲಾಗಿತ್ತು.

ಈ ವೇಳೆ ಅಲ್ಲಿರುವ ಸುಮಾರು 15 ಮಕ್ಕಳು ನಮ್ಮ ಶಾಲೆಯ ಪ್ರಾಂಶುಪಾಲರಿಂದಲೇ ಬ್ಯಾಡ್​ ಟಚ್​ ಆಗಿದೆ ಎಂಬ ಹೇಳಿಕೆ ನೀಡಿದ್ದರು. ನಂತರ ಚೈಲ್ಡ್​ ಡೆವಲಪ್​ಮೆಂಟ್​ ಹೆಲ್ತ್​ ಆಫಿಸರ್​​​ ಶಾಲೆಗೆ ಹೋಗಿ ಮಕ್ಕಳ ಹೇಳಿಕೆಯನ್ನು ಪಡೆದುಕೊಂಡಿದ್ದರು. ಆ ಹೇಳಿಕೆ ಆಧಾರದ ಮೇಲೆ ಅವರು ಪೊಲೀಸರ ಗಮನಕ್ಕೆ ತಂದಿದ್ದರು. ನಂತರ ನಾವು ಚೈಲ್ಡ್​ ವೆಲ್​ಫೇರ್​ ಕಮಿಟಿಯವರಿಂದ ಕಂಪ್ಲೇಂಟ್​ ತೆಗೆದುಕೊಂಡು ಆರೋಪಿ ಪ್ರಾಂಶುಪಾಲರ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದೇವೆ. ಈಗ ಮಕ್ಕಳನ್ನು ಕೌನ್ಸೆಲಿಂಗ್ ಮಾಡುತ್ತಿದ್ದೇವೆ ಎಂದು ಎಸ್​ಪಿ ಹರಿರಾಮ್ ಶಂಕರ್ ಅವರು ತಿಳಿಸಿದ್ದರು.

ಇದನ್ನೂ ಓದಿ: ವಸತಿ‌ ಶಾಲೆಯ ಮಕ್ಕಳಿಗೆ ಲೈಂಗಿಕ ಕಿರುಕುಳ.. ವಿದ್ಯಾರ್ಥಿನಿಯರಿಗೆ ಬ್ಯಾಡ್​ ಟಚ್​, ಪ್ರಾಂಶುಪಾಲ ಅರೆಸ್ಟ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.