ಮಂಗಳೂರು: ವಿದ್ಯಾರ್ಥಿ ವೇತನ ಬಿಡುಗಡೆಗೊಳಿಸಿ, ಎಲ್ಲ ವಿದ್ಯಾರ್ಥಿಗಳ ಹಾಸ್ಟೆಲ್ಗಳನ್ನು ತೆರೆಯಿರಿ, ಅತಿಥಿ ಉಪನ್ಯಾಸಕರ ತಕ್ಷಣ ನೇಮಕಾತಿ ಮಾಡಿ ಎಂದು ಒತ್ತಾಯಿಸಿ ಎಬಿವಿಪಿ ಮಂಗಳೂರಿನ ಮಿನಿ ವಿಧಾನಸೌಧದ ಮುಂಭಾಗ ಪ್ರತಿಭಟನೆ ನಡೆಸಿತು.
ಅದೇ ರೀತಿ, ವಿದ್ಯಾರ್ಥಿಗಳ ಸ್ಕಾಲರ್ಶಿಪ್ ಇನ್ನೂ ಬಿಡುಗಡೆಯಾಗಿಲ್ಲ ಹಾಗೂ ಹಾಸ್ಟೆಲ್ಗಳ ಅನೇಕ ವಿಚಾರಗಳನ್ನು ಸರಕಾರ ಕಡೆಗಣನೆ ಮಾಡಿ ವಿಳಂಬ ನೀತಿ ಅನುಸರಿಸುತ್ತಿದೆ. ಈ ವಿಳಂಬ ಧೋರಣೆಯನ್ನು ಖಂಡಿಸಿ ಇಂದು ಪ್ರತಿಭಟನೆ ನಡೆಸುತ್ತಿದ್ದು, ಈ ಮೂಲಕ ನಮ್ಮ ಎಲ್ಲ ಬೇಡಿಕೆಗಳನ್ನು ಈಡೇರಿಸಬೇಕೆಂದು ನಾವು ಸರ್ಕಾರಕ್ಕೆ ಆಗ್ರಹಿಸುತ್ತಿದ್ದೇವೆ ಎಂದು ಹೇಳಿದರು.
ಇದನ್ನೂ ಓದಿ:ಭಾರತದ ನೆಲದಲ್ಲಿ ಚೀನಾ ಗ್ರಾಮ: ಸರ್ಕಾರದ ಉತ್ತರ ಕೇಳಿದ ಪಿ.ಚಿದಂಬರಂ