ETV Bharat / state

ಬಸ್​ನಲ್ಲಿ ಅನುಭವಿಸಿದ ಲೈಂಗಿಕ ಕಿರುಕುಳದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದ ಯುವತಿ!

ಯುವತಿಯೋರ್ವರು ಸಾರ್ವಜನಿಕ ಬಸ್​ನಲ್ಲಿ ಪುರುಷನೋರ್ವನಿಂದ ಅನುಭವಿಸಿದ ಲೈಂಗಿಕ ಕಿರುಕುಳದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದಿದ್ದಾರೆ. ಅಲ್ಲದೇ ಕೊನೆಯಲ್ಲಿ, ಈ ಪೋಸ್ಟ್​ನ ಓದುವ ಮಹಿಳೆಯರೇ ಅಥವಾ ಪುರುಷರೇ ನಾನು ನಿಮ್ಮಲ್ಲಿ ಮನವಿ ಮಾಡಿಕೊಳ್ಳುತ್ತೇನೆ. ನಿಮಗೆ ಸಾಧ್ಯವಾದಷ್ಟು ಈ ಪೋಸ್ಟ್‌‌ ಶೇರ್‌ ಮಾಡಿ ಎಂದಿದ್ದಾರೆ.

author img

By

Published : Jan 15, 2021, 11:00 PM IST

ಬಸ್​ನಲ್ಲಿ ಅನುಭವಿಸಿದ ಲೈಂಗಿಕ ಕಿರುಕುಳವನ್ನು ಸಾಮಾಜಿಕ ಜಾಲತಾಣದಲ್ಲಿ ಬರೆದ ಯುವತಿ

ಮಂಗಳೂರು: ಯುವತಿಯೋರ್ವರು ತಾವು ಪ್ರಯಾಣಿಸುತ್ತಿದ್ದ ಬಸ್‌‌ನಲ್ಲಿ ಸಹ ಪ್ರಯಾಣಿಕನಿಂದ ಅನುಭವಿಸಿದ ಲೈಂಗಿಕ ಕಿರುಕುಳದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಇದೀಗ ಇದು ಎಲ್ಲೆಡೆ ವೈರಲ್ ಆಗುತ್ತಿದೆ.

ನಗರದ ದೇರಳಕಟ್ಟೆಯ ಕೆ.ಎಸ್‌.ಹೆಗ್ಡೆ ಆಸ್ಪತ್ರೆಯಿಂದ ಖಾಸಗಿ ಬಸ್‌‌ನಲ್ಲಿ ಪಂಪ್‌ವೆಲ್‌‌ಗೆ ಜ.14ರಂದು ಹೋಗುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಇಡೀ ಘಟನೆಯ ಬಗ್ಗೆ ಯುವತಿ ತನ್ನ ಇನ್‌‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಮಾಡಿದ್ದು, ಇದೀಗ ಆ ಪೋಸ್ಟ್‌ ವೈರಲ್‌ ಆಗಿದೆ.

ಜ. 14ರಂದು ಮಧ್ಯಾಹ್ನ 3.45ರ ಸುಮಾರಿಗೆ ನಾನು ಬಸ್‌ನಲ್ಲಿ ಪಂಪ್‌ವೆಲ್‌ಗೆ ತೆರಳುತ್ತಿದ್ದೆ. ಈ ವೇಳೆ ವ್ಯಕ್ತಿಯೋರ್ವನು ಆಸ್ಪತ್ರೆ ನಿಲ್ದಾಣದಿಂದ ಬಸ್‌ಗೆ ಹತ್ತಿದ್ದು, ನನ್ನ ಪಕ್ಕದಲ್ಲಿ ಬಂದು ಕುಳಿತುಕೊಂಡಿದ್ದಾನೆ. ಈ ವೇಳೆ ಆತ ಫೋನ್‌ನಲ್ಲಿ ಮಾತನಾಡುವಂತೆ ನಟಿಸುತ್ತಾ ಇನ್ನೊಂದು ಕೈಯಲ್ಲಿ ನನ್ನನ್ನು ಸ್ಪರ್ಶಿಸಲು ಪ್ರಾರಂಭಿಸಿದ್ದಾನೆ. ಇದರಿಂದ ನಾನು ಸರಿದು ಕುಳಿತೆ. ಆದರೆ ಆತ ತನ್ನ ಚಾಳಿ ಬಿಡಲಿಲ್ಲ.‌ ಅಸಹನೆಗೊಂಡ ನಾನು ಕೂಗಿಕೊಂಡೆ. ಸ್ವಲ್ಪ ಸಮಯದ ಬಳಿಕ ಆತ ಅವನು ನನ್ನಲ್ಲಿ ಕ್ಷಮೆ ಕೇಳಿ ಹಿಂಬದಿ ಸೀಟ್‌ನಲ್ಲಿ ಕುಳಿತುಕೊಂಡ. ಬಳಿಕ ಮೂರು ಸ್ಟಾಪ್‌ ಕಳೆದು ಆತ ಬಸ್ ಇಳಿದ. ಆದರೆ ಆತ ಮತ್ತೆ ಬಸ್‌ಗೆ ಹತ್ತಿ ಪುನಃ ನನ್ನ ಬಳಿ ಬಂದು ಕುಳಿತುಕೊಂಡ. ಅಲ್ಲದೇ ಪುನಃ ನನ್ನನ್ನು ಸ್ಪರ್ಶಿಸಲು ಆರಂಭಿಸಿದ. ಈ ವೇಳೆ ನಾನು ಆತನಲ್ಲಿ ಪುರುಷರ ಸೀಟ್‌ನಲ್ಲಿ ಕುಳಿತುಕೊಳ್ಳಲು ಹೇಳಿದೆ. ಆದರೆ, ಆತ ನನ್ನ ಮಾತನ್ನು ಕಿವಿಗೆ ಹಾಕಿಕೊಳ್ಳದೆ ಪುನಃ ಸ್ಪರ್ಶಿಸಲು ಆರಂಭಿಸಿದ. ದುರಾದೃಷ್ಟವೆಂದರೆ ಈ ರೀತಿ ನಡೆಯುತ್ತಿದ್ದರೂ ಕೂಡ ಉಳಿದ ಪ್ರಯಾಣಿಕರು, ನಿರ್ವಾಹಕ, ಚಾಲಕ ನನ್ನನ್ನು ನೋಡುತ್ತಿದ್ದಾರೆಯೇ ಹೊರತು ಯಾವುದೇ ರೀತಿಯಲ್ಲಿ ಆತನಿಗೆ ಜೋರು ಮಾಡಿಲ್ಲ.

ಓದಿ:ಗಂಡ ಹೆಂಡ್ತಿ ಜಗಳ : ದೂರು ವಿಚಾರಣೆಗೆ ಹೋದ ಪೊಲೀಸರ ಮೇಲೆ ಹಲ್ಲೆ

ಆಗ ನಾನು ನಿಮ್ಮ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುತ್ತೇನೆ. ಇದರಿಂದ ಈ ರೀತಿಯಾದ ಚಟುವಟಿಕೆಗಳನ್ನು ನಿಯಂತ್ರಿಸಬಹುದು ಎಂದು ಎಚ್ಚರಿಕೆ ನೀಡಿದೆ. ಈ ವೇಳೆ ಆತ ಮಾಸ್ಕ್‌‌ ತೆಗೆದು ಫೋಟೋಗೆ ಪೋಸ್‌ ನೀಡಿ ಧನ್ಯವಾದಗಳು ಎಂದು ಹೇಳಿದ.

ಜಾಗೃತಿ ಮೂಡಿಸುವ ಸಲುವಾಗಿ ನಾನು ಈ ಪೋಸ್ಟ್‌ ಮಾಡಿದ್ದೇನೆ. ಸಾಮಾನ್ಯವಾಗಿ ಕೆಲಸ, ಕಾಲೇಜಿಗೆ ಹೋಗುವ ಸಂದರ್ಭ ಸಾರ್ವಜನಿಕ ಸಾರಿಗೆಯನ್ನು ಬಳಸುವ ಮಹಿಳೆಯರಿಗೆ ಅಥವಾ ಹುಡುಗಿಯರಿಗೆ ಈ ರೀತಿಯ ಅನುಭವ ಸಾಕಷ್ಟು ಆಗಿರಬಹುದು. ಆದರೆ ದುರಾದೃಷ್ಟವಶಾತ್‌‌, ಶೇ.99ರಷ್ಟು ಮಹಿಳೆಯರಿಗೆ ಈ ರೀತಿಯ ಅನುಭವಿದ್ದರೂ ತಮ್ಮ ಘನತೆ ಹಾಗೂ ಭವಿಷ್ಯಕ್ಕೆ ಹೆದರಿ ಈ ವಿಚಾರವನ್ನು ಬಹಿರಂಗಪಡಿಸುವುದಿಲ್ಲ. ಯಾವುದೇ ಕಾನೂನು, ಪೊಲೀಸರು, ಯಾರೇ ಆದರೂ ಕೂಡ ಬಂದು ನಿಮಗೆ ಸಹಾಯ ಮಾಡುವುದಿಲ್ಲ. ಬದಲಾಗಿ ರಿಯಾಲಿಟಿ ಶೋ ನೋಡುವ ರೀತಿ ನಿಂತು ನೋಡುತ್ತಿರುತ್ತಾರೆ. ಈ ಪೋಸ್ಟ್​​ನನ್ನು ಓದುವ ಮಹಿಳೆಯರು ಅಥವಾ ಪುರುಷರು ನಾನು ನಿಮ್ಮಲ್ಲಿ ಮನವಿ ಮಾಡಿಕೊಳ್ಳುತ್ತೇನೆ. ನಿಮಗೆ ಸಾಧ್ಯವಾದಷ್ಟು ಈ ಪೋಸ್ಟ್‌‌ ಅನ್ನು ಶೇರ್‌ ಮಾಡಿ ಎಂದು ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.