ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆಯ ಮೀಯಾರಿನ ಮೂಲದ ಶ್ರೀನಿವಾಸ ಗೌಡ ಎಂಬ ಯುವಕ ಕಂಬಳೋತ್ಸವದಲ್ಲಿ 13.62ಸೆಕೆಂಡಲ್ಲಿ 142.5 ಮೀ ದೂರ ಓಡಿ ಎಲ್ಲರನ್ನು ನಿಬ್ಬೆರಗಾಗಿಸಿದ್ದಾರೆ.
ಮಂಗಳೂರು ಸಮೀಪದ ಐಕಳ ಕಂಬಳೋತ್ಸವದಲ್ಲಿ ಶ್ರೀನಿವಾಸ ಗೌಡ ಈ ದಾಖಲೆ ಮೆರೆದಿದ್ದಾರೆ. ಕೆಸರು ತುಂಬಿದ ಗದ್ದೆಯಲ್ಲಿ ಕೋಣಗಳ ಜೊತೆಯಲ್ಲಿ ಅದೇ ವೇಗದಲ್ಲಿ ಓಡಿ ಈ ಸಾಧನೆ ಮಾಡಿದ್ದಾರೆ. ಅವರ ಈ ಸಾಧನೆಗೆ ಎಲ್ಲೆಡೆಯಿಂದ ಶ್ಲಾಘನೆ ವ್ಯಕ್ತವಾಗಿದೆ.