ETV Bharat / state

ಉಳ್ಳಾಲ: ಚೂರಿಯಿಂದ ಇರಿದು ಯುವಕನ ಹತ್ಯೆ - ಉಳ್ಳಾಲ

ದಕ್ಷಿಣ ಕನ್ನಡದ ಉಳ್ಳಾಲದಲ್ಲಿ ಬುಧವಾರ ತಡರಾತ್ರಿ ಯುವಕನ ಹತ್ಯೆ ನಡೆದಿದೆ.

A young man was stabbed to death
ಚೂರಿಯಿಂದ ಇರಿದು ಯುವಕನ ಹತ್ಯೆ
author img

By ETV Bharat Karnataka Team

Published : Dec 14, 2023, 1:04 PM IST

Updated : Dec 14, 2023, 2:31 PM IST

ಉಳ್ಳಾಲ (ದಕ್ಷಿಣ ಕನ್ನಡ): ಯುವಕನೋರ್ವನನ್ನು ಚೂರಿಯಿಂದ ಇರಿದು ಹತ್ಯೆ ಮಾಡಿರುವ ಘಟನೆ ಸೋಮೇಶ್ವರ ಪುರಸಭೆ ವ್ಯಾಪ್ತಿಯ ಸಾರಸ್ವತ ಕಾಲೊನಿ ಎಂಬಲ್ಲಿ ಬುಧವಾರ ತಡರಾತ್ರಿ ವೇಳೆ ನಡೆದಿದೆ.

ಸಾರಸ್ವತ ಕಾಲೊನಿ ನಿವಾಸಿ ವರುಣ್ (28) ಹತ್ಯೆಯಾದವರು. ಸ್ಥಳೀಯ ಸೂರಜ್ ಎಂಬಾತ ಕೃತ್ಯ ಎಸಗಿರುವುದಾಗಿ ಪೊಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ. ಕೊಲ್ಯದ ಖಾಸಗಿ ಶಾಲೆಯೊಂದರ ಸಮೀಪ ತಡರಾತ್ರಿ ವೇಳೆ ಸೂರಜ್ ಹಾಗೂ ಇನ್ನಿಬ್ಬರು ಮದ್ಯಪಾನ ಮಾಡುತ್ತಿರುವುದನ್ನು ವರುಣ್ ಪ್ರಶ್ನಿಸಿದ್ದರು.

ಇದರಿಂದ 5 ಮಂದಿಯ ನಡುವೆ ವಾಗ್ವಾದ ನಡೆದು ಸೂರಜ್​, ವರುಣ್ ಹೃದಯಭಾಗಕ್ಕೆ ಚೂರಿಯಿಂದ ತಿವಿದು ಹತ್ಯೆಗೈದಿದ್ದಾನೆ. ಹಳೇ ವೈಷಮ್ಯದಿಂದ ಕೃತ್ಯ ನಡೆದಿರುವ ಸಾಧ್ಯತೆಗಳಿದೆ. ಸೋಮೇಶ್ವರ ಪುರಸಭೆಗೆ ಡಿ. 27 ಕ್ಕೆ ಚುನಾವಣೆಯೂ ನಡೆಯಲಿದ್ದು, ನಾಮಪತ್ರ ಸಲ್ಲಿಸಲು ಕೆಲವೇ ದಿನಗಳು ಬಾಕಿಯಿದೆ. ಈ ಸಂಬಂಧ ಗಲಾಟೆ ನಡೆದಿರುವ ಸಾಧ್ಯತೆಯನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ. ಘಟನೆಯಲ್ಲಿ ಸೋಮೇಶ್ವರ ಗ್ರಾ.ಪಂ ಮಾಜಿ ಸದಸ್ಯ ರವಿರಾಜ್ ಎಂಬವರಿಗೂ ಗಾಯಗಳಾಗಿವೆ ಎಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.

ಇದನ್ನೂ ಓದಿ: ನಿಧಿ ಹುಡಿಕಿಕೊಡುವುದಾಗಿ ನಂಬಿಸಿ 11 ಮಂದಿಯ ಸರಣಿ ಹತ್ಯೆ ಮಾಡಿದ ಹಂತಕ ಅಂದರ್​!

ಹಿಂದಿನ ಪ್ರಕರಣಗಳು:

ಚಿಕ್ಕಮಗಳೂರು/ಸೈನೆಡ್​ ಬೆರೆಸಿ ಪತ್ನಿ ಕೊಲೆ: ಮೂಡಿಗೆರೆ ತಾಲೂಕಿನ ದೇವವೃಂದ ಗ್ರಾಮದಲ್ಲಿ ಮೊನ್ನೇ ತಾನೇ ಗೃಹಿಣಿ ಶ್ವೇತ ಎಂಬುವವರು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದರು. ಈ ಸಾವಿಗೆ ಮೃತ ಮಹಿಳೆಯ ಪತಿ ಹಕ್ಕೇರುದ್ದಿ ಗ್ರಾಮದ ದರ್ಶನ್ ಪೂಜಾರಿ ಅವರ ಮೇಲೆ ಕೊಲೆ ಆರೋಪ ಶಂಕಿಸಲಾಗಿತ್ತು. ಈ ಕುರಿತು ಸಂಬಂಧಪಟ್ಟ ಸೆಕ್ಷನ್​ಗಳ ಅಡಿ ಪ್ರಕರಣ ದಾಖಲಿಸಿಕೊಂಡ ಗೋಣಿಬೀಡು ಇನ್ಸ್​ಪೆಕ್ಟರ್​ ಸೋಮೇಗೌಡರು ಶ್ವೇತಾರ ಮೃತದೇಹವನ್ನು ಸರ್ಕಾರ ಆಸ್ಪತ್ರೆಗೆ ರವಾನಿಸಿ ಮರಣೋತ್ತರ ಪರೀಕ್ಷೆಯನ್ನು ಮಾಡಿಸಿ ತನಿಖೆಯನ್ನು ಕೈಗೊಂಡಿದ್ದರು. ಈ ವೇಳೆ ಪತಿಯೇ ಪತ್ನಿಗೆ ಊಟದಲ್ಲಿ ಸೈನೈಡ್ ಬೆರೆಸಿ ನೀಡಿದ್ದು, ಅದನ್ನು ಸೇವಿಸಿ ಪತ್ನಿ ಸಾವನ್ನಪ್ಪಿದ್ದಾಗಿ ಆರೋಪಿ ಪತಿ ತನಿಖೆ ವೇಳೆ ಸತ್ಯ ಬಿಚ್ಚಿಟ್ಟಿದ್ದಾನೆ.

ಮಂಡ್ಯದಲ್ಲಿ ಪತ್ನಿ ಕೊಂದ ಪತಿ: ಘಟನೆ ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ದೇಶಹಳ್ಳಿ ಗ್ರಾಮದಲ್ಲಿ ನಡೆದಿತ್ತು. ಕೌಟುಂಬಿಕ ಕಲಹದ ಹಿನ್ನೆಲೆ ಪತಿ ತನ್ನ ಪತ್ನಿಯನ್ನು ಹತ್ಯೆ ಮಾಡಿದ್ದರು. ಬಳಿಕ ಪೊಲೀಸ್​ ಠಾಣೆಗೆ ತೆರಳಿ ಶರಣಾಗಿದ್ದರು. ಮನಸ್ತಾಪದಿಂದ ಆಗಾಗ ದಂಪತಿ ನಡುವೆ ಕಲಹ ನಡೆಯುತ್ತಿತ್ತು. ಹೀಗೆ 12 ಮಂಗಳವಾರದ ರಾತ್ರಿ ಜಗಳ ವಿಕೋಪಕ್ಕೆ ತಿರುಗಿ ಪತ್ನಿಗೆ ಕಬ್ಬಿಣದ ರಾಡು ಹಾಗೂ ಕಟ್ಟಿಗೆಯಿಂದ ತಲೆಗೆ ಆರೋಪಿ ಪತಿ ಹಲ್ಲೆ ನಡೆಸಿದ್ದ. ಇದರಿಂದ ಮಹಿಳೆ ತಲೆಗೆ ಗಂಭೀರವಾಗಿ ಪೆಟ್ಟಾಗಿ ರಕ್ತಸ್ರಾವದಿಂದ ಸ್ಥಳದಲ್ಲೇ ಮೃತಪಟ್ಟಿದ್ದರು.

Last Updated : Dec 14, 2023, 2:31 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.