ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸಂಪರ್ಕಿಸುವ ಪ್ರಮುಖ ಮಾರ್ಗದಲ್ಲಿನ ಮರವೂರು ಸೇತುವೆ ನಿನ್ನೆ ಬೆಳಗ್ಗೆ ಪಿಲ್ಲರ್ವೊಂದು ಸ್ವಲ್ಪ ಮಟ್ಟಕ್ಕೆ ಕುಸಿದಿದ್ದು, ಈ ಅಪಾಯದ ಮುನ್ಸೂಚನೆ ಬಗ್ಗೆ ತಿಂಗಳ ಮೊದಲೇ ಆ ಮಾರ್ಗದಲ್ಲಿ ನಿತ್ಯ ಸಂಚಾರ ಮಾಡುವ ವ್ಯಕ್ತಿಯೊಬ್ಬರು ತಿಳಿಸಿದ್ದರು. ಈ ವಿಚಾರ ಇದೀಗ ಬೆಳಕಿಗೆ ಬಂದಿದೆ.
ಕಳವಾರು ಮೊಹಮ್ಮದ್ ಎಂಬವರು ಪ್ರತಿನಿತ್ಯವೂ ಮರವೂರು ಸೇತುವೆ ದಾರಿಯಾಗಿಯೇ ಸಂಚರಿಸುತ್ತಿರುತ್ತಾರೆ. ಮೇ 15ರಂದು ಮರವೂರು ಸೇತುವೆ ಮೇಲೆ ಸಂಚರಿಸುತ್ತಿದ್ದರು. ಈ ವೇಳೆ ಸೇತುವೆಯಲ್ಲಿನ ಬಿರುಕು ಕಣ್ಣಿಗೆ ಬಿದ್ದಿದೆ. ತಕ್ಷಣ ವಾಹನ ನಿಲ್ಲಿಸಿ ವಿಡಿಯೋ ಮಾಡಿದ್ದಾರೆ.
ಅವರು ಮಾಡಿರುವ ವೀಡಿಯೊವನ್ನು ಬಜಪೆಯ ಫೋರ್ಜಿ ಗೈಸ್ ಎಂಬ ವಾಟ್ಸ್‌ಆ್ಯಪ್ ಗ್ರೂಪ್ಗೆ ಫಾರ್ವರ್ಡ್ ಮಾಡಿದ್ದರು. ಅದನ್ನು ಗಮನಿಸಿದ ಹಲವರು ಅವರಿಗೆ ಕರೆ ಮಾಡಿ ಸೇತುವೆ ಬಗ್ಗೆ ವಿಚಾರಿಸಿದರು. ಅವರು ಸೇತುವೆ ಕುಸಿಯುವ ಭೀತಿ ಬಗ್ಗೆ ಹೇಳಿಕೊಂಡಿದ್ದರು.
ಈ ಘಟನೆ ನಡೆದು ಇದೀಗ ಒಂದು ತಿಂಗಳು ಕಳೆದಿದ್ದು, ನಿನ್ನೆ ಮರವೂರು ಸೇತುವೆ ಬೆಳಗಿನ ಜಾವ ಸ್ವಲ್ಪರ ಮಟ್ಟಿಗೆ ಕುಸಿದಿದೆ. ಈಗ ಈ ವಿಡಿಯೋ ಬೆಳಕಿಗೆ ಬಂದಿದೆ.
ಓದಿ: ಮರವೂರು ಸೇತುವೆಯಲ್ಲಿ ಬಿರುಕು; ಏರ್ಪೋರ್ಟ್‌ಗೆ ಸಂಪರ್ಕ ಕಡಿತ- ಹೀಗಿದೆ ಪರ್ಯಾಯ ವ್ಯವಸ್ಥೆ..