ಬಂಟ್ವಾಳ ( ದಕ್ಷಿಣಕನ್ನಡ) : ಮಂಗಳೂರು ಬೆಂಗಳೂರು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿಯಾದ ಬಿಸಿ ರೋಡು ಅಡ್ಡಹೊಳೆ ಚತುಷ್ಪಥ ರಸ್ತೆ ಕಾಮಗಾರಿಯಿಂದ ಉಂಟಾಗಿರುವ ಹೊಂಡದಲ್ಲಿ ಮಳೆಗೆ ನೀರು ನಿಂತಿದ್ದು, ಮಾನಸಿಕ ಅಸ್ವಸ್ಥನಂತೆ ಕಾಣುವ ವ್ಯಕ್ತಿಯೊಬ್ಬ ಇಳಿದು ಈಜಾಟ ನಡೆಸುತ್ತಿರುವ ದೃಶ್ಯ ಕಂಡು ಬಂದಿದೆ.
ಬಿಸಿ ರೋಡಿನಿಂದ ಮಾಣಿವರೆಗೆ ರಸ್ತೆ ಕಾಮಗಾರಿಯಿಂದಾಗಿ ವಾಹನ ಸವಾರರು ಪರದಾಡುತ್ತಿದ್ದರೆ, ಇನ್ನೊಂದೆಡೆ ಪ್ರಯಾಣಿಕರ ವಾಹನಗಳು ಹೊಂಡದಲ್ಲಿ ಸಿಲುಕಿ ಜಖಂಗೊಳ್ಳುತ್ತಿವೆ. ಜೊತೆಗೆ ಇಲ್ಲಿನ ಕಲ್ಲಡ್ಕ ಪೇಟೆಯಲ್ಲೂ ವಾಹನದಟ್ಟಣೆ ಉಂಟಾಗುತ್ತಿದ್ದು,ಇಲ್ಲಿ ಬೃಹತ್ ಫ್ಲೈಓವರ್ ನಿರ್ಮಾಣಕ್ಕೆ ಅಗೆಯಲಾದ ಹೊಂಡ ಮತ್ತಷ್ಟು ಅಗಲವಾಗಿದೆ.
ಇನ್ನು ಮುಂಜಾಗೃತಾ ಕ್ರಮವಾಗಿ ಗುಂಡಿಯ ಸುತ್ತ ಪ್ಲಾಸ್ಟಿಕ್ ಟೇಪ್ ಅನ್ನು ಕಟ್ಟಲಾಗಿದ್ದು, ಆದರೆ, ಮಾನಸಿಕ ಅಸ್ವಸ್ಥನಂತೆ ಕಾಣುವ ವ್ಯಕ್ತಿಯೊಬ್ಬ ಈ ಹೊಂಡದಲ್ಲಿ ಇಳಿದು ಈಜಾಟ ನಡೆಸಿದ್ದಾನೆ. ಜೊತೆಗೆ ಸ್ನಾನ ಮಾಡುವಂತೆ ಹೊರಳಾಡಿದ್ದಾನೆ. ಈ ದೃಶ್ಯವನ್ನು ಸ್ಥಳೀಯರು ತಮ್ಮ ಮೊಬೈಲಿನಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ : ಹಿಮ್ಮುಖ ಚಲಿಸಿದ ಬಸ್ ನಿಲ್ಲಿಸಿದ ವಿದ್ಯಾರ್ಥಿ.. ಬಾಲಕನ ಸಮಯ ಪ್ರಜ್ಞೆಗೆ ಹಲವರು ಅಪಾಯದಿಂದ ಪಾರು