ETV Bharat / state

ಹಸಿರುವನ ಬೆಳೆಸಿ ಮನಗೆದ್ದಉಪನ್ಯಾಸಕ.. 1 ಎಕರೆ ಜಾಗದಲ್ಲಿ ಅಶ್ವತ್ಥ ಗಿಡಗಳನ್ನ ನೆಟ್ಟು ಪೋಷಣೆ

ಇಷ್ಟೆಲ್ಲ ಆರ್ಥಿಕ ಲಾಭದ ದೃಷ್ಟಿಯಿಂದ ಮಾಡದೇ ಪರಿಸರಕಾಳಜಿಯಷ್ಟೇ ಮುಖ್ಯ ಎನ್ನುತ್ತಾರೆ ಅವರು. ತಮ್ಮ ಸ್ವಂತ ಖರ್ಚಿನಲ್ಲಿ ಜನರ ಆರೋಗ್ಯದ ದೃಷ್ಟಿಯಿಂದ ಆಮ್ಲಜನಕ ವನ ನಿರ್ಮಾಣದಲ್ಲಿ ನಿರತರಾಗಿರುವ ಶ್ರೀಶ ಕುಮಾರ್ ಇತರರಿಗೂ ಮಾದರಿ..

ಅಶ್ವತ್ಥ ಗಿಡಗಳ ನೆಟ್ಟು ಪೋಷಿಸಿದ ಉಪನ್ಯಾಸಕ
ಅಶ್ವತ್ಥ ಗಿಡಗಳ ನೆಟ್ಟು ಪೋಷಿಸಿದ ಉಪನ್ಯಾಸಕ
author img

By

Published : Jun 11, 2021, 2:29 PM IST

Updated : Jun 11, 2021, 2:46 PM IST

ಪುತ್ತೂರು (ದ.ಕ): ಮನೆ ಸುತ್ತ ಒಂದಡಿ ಜಾಗ ಖಾಲಿ ಇದ್ದರೂ ಅದರಲ್ಲಿ ಬೇಲಿ ಹಾಕಿ ಅದರಿಂದ ಲಾಭ ಮಾಡುವ ಜನರೇ ಹೆಚ್ಚಿರುವಾಗ ಇಲ್ಲೊಬ್ಬರು 1 ಎಕರೆ ಜಾಗದಲ್ಲಿ ಮರ-ಗಿಡ ಬೆಳೆಸಿ ಅರಣ್ಯಕ್ಕಾಗಿ ಮೀಸಲಿಟ್ಟಿದ್ದಾರೆ. ಸ್ವಂತ ಖರ್ಚಿನಲ್ಲಿ ಆ ಜಾಗವನ್ನು ಅರಣ್ಯವಾಗಿಸಿ ಜೀವಸಂಕುಲಕ್ಕೆ ಪ್ರಾಣವಾಯು ನೀಡಲು ಮುಂದಾಗಿದ್ದಾರೆ. ನಿರಂತರವಾಗಿ ನಡೆಯುತ್ತಿರುವ ಪರಿಸರ ಮಾಲಿನ್ಯ, ಗಿಡ-ಮರಗಳ ಮಾರಣ ಹೋಮದಿಂದಾಗಿ ಇಂದು ಶುದ್ಧ ಗಾಳಿಯನ್ನ ಹುಡುಕಾಡಬೇಕಾದ ಸ್ಥಿತಿಯಿದೆ.

ಈ ನಡುವೆ ತನಗಲ್ಲದೆ, ಗ್ರಾಮದ ಜನರಿಗೂ ಶುದ್ಧ ಆಮ್ಲಜನಕಯುಕ್ತ ಗಾಳಿ ಸಿಗಬೇಕು ಎನ್ನುವ ಕಾಳಜಿಯ ಪರಿಸರಪ್ರೇಮಿ ಡಾ. ಶ್ರೀಶ ಕುಮಾರ್‌ ಈ ರೀತಿ ಅರಣ್ಯ ಬೆಳೆಸಿ ಮಾದರಿಯಾಗಿದ್ದಾರೆ. ಪುತ್ತೂರಿನ ವಿವೇಕಾನಂದ ಕಾಲೇಜಿನ ಸಂಸ್ಕೃತ ವಿಭಾಗದ ಉಪನ್ಯಾಸಕರಾಗಿರುವ ಡಾ. ಶ್ರೀಶ ಕುಮಾರ್‌, ಮುಂದಿನ ಪೀಳಿಗೆಗೆ ಆಮ್ಲಜನಕದ ಕೊರತೆ ಕಾಡದಿರಲಿ ಎಂಬ ಉದ್ದೇಶದಿಂದ ಈ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

1 ಎಕರೆ ಜಾಗದಲ್ಲಿ ಅಶ್ವತ್ಥ್ ಗಿಡಗಳನ್ನ ನೆಟ್ಟು ಪೋಷಿಸಿದ ಉಪನ್ಯಾಸಕ

ಮೂರು ವರ್ಷಗಳ ಹಿಂದೆ ಪಾಲ್ತಾಡಿ ಗ್ರಾಮದ ಕುಂಜಾಡಿಯಲ್ಲಿ 1 ಎಕರೆ ಜಾಗ ಖರೀದಿಸಿ ಶುದ್ಧ ಪರಿಸರಕ್ಕೆ ಪೂರಕವಾದ ಗಿಡ ನೆಡುವ ಸಂಕಲ್ಪ ತೊಟ್ಟು ಅದರಲ್ಲಿ ಆರಂಭಿಕ ಯಶಸ್ಸು ಸಾಧಿಸಿದ್ದಾರೆ. ಮನೆಯಿಂದ 21 ಕಿ.ಮೀ ದೂರದಲ್ಲಿ ಜಾಗವಿದ್ದರೂ ಬಿಡುವಿನ ವೇಳೆ ಭೇಟಿ ನೀಡಿ ಪರಿಶೀಲನೆಗೆ ಮುಂದಾಗುತ್ತಾರೆ. ಈ ಆಕ್ಸಿಜನ್ ವನದಲ್ಲಿ 24 ಅಶ್ವತ್ಥ್ ಗಿಡ, ಪಚ್ಚೆ ಕರ್ಪೂರ, ನಾಗಸಂಪಿಗೆ, ನಾಗಲಿಂಗ, ಅಳಿವಿನಂಚಿನಲ್ಲಿರುವ ಗಿಡಗಳು ಸೇರಿದಂತೆ ಒಟ್ಟು 130 ಗಿಡಗಳನ್ನು ನೆಟ್ಟು ಪೋಷಿಸುತ್ತಿದ್ದಾರೆ.

ಆಮ್ಲಜನಕ ತಾಣವಾಗಲಿದೆ ಅರಣ್ಯ

ಅಶ್ವತ್ಥ್ ಗಿಡವೊಂದು ದಿನಕ್ಕೆ ಸಾವಿರ ಜನರಿಗೆ ಬೇಕಾದ ಆಮ್ಲಜನಕ ಕೊಡಬಲ್ಲ ಸಾಮರ್ಥ್ಯ ಹೊಂದಿದೆ. ಅದು ತನ್ನ ಜೀವಿತಾವಧಿಯಲ್ಲಿ 750 ಕೋಟಿ ರೂಪಾಯಿ ಬೆಲೆ ಬಾಳುವ ಆಮ್ಲಜನಕವನ್ನು ನೀಡಬಲ್ಲದು. ಮುಂದಿನ 5 ವರ್ಷಗಳಲ್ಲಿ ಅಶ್ವತ್ಥ್ ಗಿಡಗಳಿರುವ ಕುಂಜಾಡಿ ಪ್ರದೇಶ ಅತಿ ಹೆಚ್ಚು ಆಮ್ಲಜನಕ ಇರುವ ತಾಣವಾಗಲಿದೆ ಎನ್ನುತ್ತಾರೆ ಶ್ರೀಶ ಕುಮಾರ್‌. ಇದಿಷ್ಟೇ ಅಲ್ಲ, ಮನೆ ಬಳಿಯೇ ಖಾಲಿ ಜಾಗದಲ್ಲೂ ಅಶ್ವತ್ಥ್ ಮರಗಳನ್ನ ನೆಟ್ಟು ಪೋಷಿಸಲು ಮುಂದಾಗಿದ್ದಾರೆ.

ಹೀಗೆ ಮರಗಳ ಜೊತೆ ನೀರಿನ ಸಂರಕ್ಷಣೆಯಲ್ಲೂ ಕಾಳಜಿವಹಿಸಿರುವ ಇವರು, ಸುಮಾರು 500 ಕಡೆಗಳಲ್ಲಿ ಮಳೆ ನೀರು ಕೊಯ್ಲು ಕುರಿತು ಜಾಗೃತಿ ಮೂಡಿಸುತ್ತಾ ಉಪನ್ಯಾಸ ನೀಡಿದ್ದಾರೆ. ಜಾಗದ ವ್ಯವಸ್ಥೆ ಇದ್ದರೆ ಬೇರೆ ಕಡೆಗಳಲ್ಲೂ ಗಿಡನೆಡಲು ಮುಂದಾಗಲಿದ್ದೇನೆ ಎನ್ನತ್ತಾರೆ ಶ್ರೀಶ. ಇಷ್ಟೆಲ್ಲ ಆರ್ಥಿಕ ಲಾಭದ ದೃಷ್ಟಿಯಿಂದ ಮಾಡದೇ ಪರಿಸರಕಾಳಜಿಯಷ್ಟೇ ಮುಖ್ಯ ಎನ್ನುತ್ತಾರೆ ಅವರು. ತಮ್ಮ ಸ್ವಂತ ಖರ್ಚಿನಲ್ಲಿ ಜನರ ಆರೋಗ್ಯದ ದೃಷ್ಟಿಯಿಂದ ಆಮ್ಲಜನಕ ವನ ನಿರ್ಮಾಣದಲ್ಲಿ ನಿರತರಾಗಿರುವ ಶ್ರೀಶ ಕುಮಾರ್ ಇತರರಿಗೂ ಮಾದರಿಯಾಗಿದ್ದಾರೆ.

Last Updated : Jun 11, 2021, 2:46 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.