ETV Bharat / state

ಯುವಕನಿಗೆ ಚಾಕು ಇರಿತ ಪ್ರಕರಣ : ನೈತಿಕ ಪೊಲೀಸ್‌ಗಿರಿ ನಡೆಸಿದ ಹಲವರನ್ನ ವಶಕ್ಕೆ ಪಡೆದ ಖಾಕಿ - Mangalore police

ಯುವತಿ ಬೆಂಗಳೂರಿಗೆ ಕೆಲಸ ಹುಡುಕಲು ಹೊರಟಿದ್ದು ಆಕೆಗೆ ಬೆಂಗಳೂರು ಪರಿಚಯವಿಲ್ಲದ ಕಾರಣ ಈತನನ್ನು ಕರೆದುಕೊಂಡು ಹೋಗಿರುವುದಾಗಿ ತಿಳಿಸಿದ್ದಾಳೆ..

a-knife-stabbing-case-for-a-youth-police-arrested-few-youths-in-case
ಯುವಕನಿಗೆ ಚಾಕು ಇರಿತ ಪ್ರಕರಣ
author img

By

Published : Apr 2, 2021, 7:15 PM IST

Updated : Apr 2, 2021, 9:25 PM IST

ಮಂಗಳೂರು : ನಗರದಲ್ಲಿ ತಡರಾತ್ರಿ ನಡೆದ ಚಾಕು ಇರಿತ ಪ್ರಕರಣದಲ್ಲಿ ಮಂಗಳೂರು ಪೊಲೀಸರು ಹಲವರನ್ನು ವಶಕ್ಕೆ ಪಡೆದಿದ್ದಾರೆ.

ಈ ಕುರಿತು ಮಾತನಾಡಿರುವ ಮಂಗಳೂರು ನಗರ ಪೊಲೀಸ್ ಕಮಿಷನರ್, ಕೆಎಸ್​​​ಆರ್​ಟಿಸಿ ಬಸ್ ನಿಲ್ದಾಣದ ಮುಂಭಾಗದಲ್ಲಿ ಖಾಸಗಿ ಬಸ್ ಹತ್ತಿ ಬೆಂಗಳೂರಿಗೆ ಹೊರಟಿದ್ದ ಅನ್ಯ ಕೋವಿನ ಯುವಕ‌ ಮತ್ತು ಯುವತಿಯನ್ನು ಪಂಪ್ ವೆಲ್​​ನಲ್ಲಿ ಬಸ್​​ನಿಂದ ಇಳಿಸಿ ಹಲ್ಲೆ ಮಾಡಲಾಗಿತ್ತು.

ಈ ವೇಳೆ ಯುವಕನಿಗೆ ಚಾಕುವಿನಿಂದ ಇರಿಯಲಾಗಿದ್ದು, ಯುವತಿ ಮೇಲೂ ಹಲ್ಲೆ ನಡೆಸಲಾಗಿದೆ. ಗಾಯಾಳು ಯುವಕನನ್ನು ಇಂಡಿಯಾನ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ಮಾಹಿತಿ ನೀಡಿದ್ದಾರೆ.

ಯುವಕನಿಗೆ ಚಾಕು ಇರಿತ ಪ್ರಕರಣ: ಹಲವರ ವಶಕ್ಕೆ ಪಡೆದ ಪೊಲೀಸರು

ನಾಲ್ಕೈದು ಮಂದಿ ಹಲ್ಲೆ ನಡೆಸಿದ್ದಾರೆ ಎಂದು ಯುವತಿ ದೂರು ನೀಡಿದ್ದು, ಹಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಯುವತಿ ಬೆಂಗಳೂರಿಗೆ ಕೆಲಸ ಹುಡುಕಲು ಹೊರಟಿದ್ದು ಆಕೆಗೆ ಬೆಂಗಳೂರು ಪರಿಚಯವಿಲ್ಲದ ಕಾರಣ ಈತನನ್ನು ಕರೆದುಕೊಂಡು ಹೋಗಿರುವುದಾಗಿ ತಿಳಿಸಿದ್ದಾಳೆ.

ಇವರಿಬ್ಬರೂ ಡಿಗ್ರಿ ಮುಗಿಸಿದ್ದು, ಒಂದೇ ತರಗತಿಯಲ್ಲಿ ಓದಿದ್ದಾರೆ. ಇವರು ಹಲವು ದಿನಗಳಿಂದ ಒಟ್ಟಿಗೆ ತಿರುಗಾಡುತ್ತಿರುವುದನ್ನು ಹಲವರು ಗಮನಿಸಿದ್ದರು ಎಂದು ತಿಳಿಸಿದರು. ಮುಂದೆ ಇಂತಹ ಘಟನೆ ಮರುಕಳಿಸದಂತೆ ಬಸ್​​ ನಿಲ್ದಾಣ, ಜನ ಓಡಾಟ ಇರುವ ಸ್ಥಳಗಳಲ್ಲಿ ಹೆಚ್ಚಿನ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗುವುದು ಎಂದು ತಿಳಿಸಿದ್ದಾರೆ. (ಇದನ್ನೂ ಓದಿ: ಕರಾವಳಿಯಲ್ಲಿ ಮತ್ತೆ ಮತ್ತೆ ಮರುಕಳಿಸುವ ನೈತಿಕ ಪೊಲೀಸ್​ಗಿರಿ.. ಬಸ್​ನಲ್ಲಿದ್ದ ಜೋಡಿ ಮೇಲೆ ಹಲ್ಲೆಗೈದ ಪುಂಡರು..)

Last Updated : Apr 2, 2021, 9:25 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.