ಕಡಬ(ದಕ್ಷಿಣ ಕನ್ನಡ): ಕಾರು ಮತ್ತು ಕೆಎಸ್ಆರ್ಟಿಸಿ ಬಸ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ಬಾಲಕನೊಬ್ಬ ಮೃತಪಟ್ಟು, ಆರು ಮಂದಿಗೆ ಗಂಭೀರವಾಗಿ ಗಾಯಗೊಂಡಿರುವ ಘಟನೆ ಉಪ್ಪಿನಂಗಡಿ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಮರ್ಧಾಳದ ಬ್ರಾಂತಿಕಟ್ಟೆ ಎಂಬಲ್ಲಿ ನಡೆದಿದೆ. ಮರ್ಧಾಳದಿಂದ ಸುಬ್ರಹ್ಮಣ್ಯ ಕಡೆಗೆ ತೆರಳುತ್ತಿದ್ದ ಕಾರು ಹಾಗೂ ಸುಬ್ರಹ್ಮಣ್ಯ ಕಡೆಯಿಂದ ಧರ್ಮಸ್ಥಳ ಕಡೆಗೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ನಡುವೆ ಮರ್ಧಾಳ ಸಮೀಪದ ಐತ್ತೂರು ಗ್ರಾಮ ಪಂಚಾಯತ್ ಎದುರು ಬ್ರಾಂತಿಕಟ್ಟೆ ಎಂಬಲ್ಲಿ ಮುಖಾಮುಖಿ ಢಿಕ್ಕಿ ಸಂಭವಿಸಿದೆ.
ಕಾರಿನಲ್ಲಿದ್ದ 12ವರ್ಷದ ಪೃಥ್ವಿ ಎಂಬ ಬಾಲಕ ಮೃತಪಟ್ಟಿದ್ದು, ಆರು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ, ಗಾಯಾಳುಗಳನ್ನು ಕಡಬ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆತಂದು, ನಂತರ ಹೆಚ್ಚಿನ ಚಿಕಿತ್ಸೆಗಾಗಿ ಪುತ್ತೂರಿಗೆ ಕರೆದೊಯ್ಯಲಾಗಿದೆ. ಕಾರಿನಲ್ಲಿದ್ದವರು ಮಂಡ್ಯ ಜಿಲ್ಲೆ ಮೂಲದವರು ಎಂದು ತಿಳಿದುಬಂದಿದೆ. ಈ ಬಗ್ಗೆ ಕೆಎಸ್‌ಆರ್‌ಟಿಸಿ ಚಾಲಕ ರವಿ.ಕೆ ಎಂಬವರು ಕಡಬ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಕಾರು ಚಾಲಕನ ಅತಿ ವೇಗದ ಚಾಲನೆ ಅಪಘಾತಕ್ಕೆ ಕಾರಣ ಎಂದು ತಿಳಿದು ಬಂದಿದೆ. ಈ ಬಗ್ಗೆ ಕಡಬ ಪೊಲೀಸ್ ಠಾಣೆಯಲ್ಲಿ ಅ.ಕ್ರ 11/2023 ಕಲಂ 279,337,338,304(A)ಐಪಿಸಿ ಪ್ರಕಾರ ಪ್ರಕರಣ ದಾಖಲಾಗಿದೆ.
ಸುಪಾರಿ ಕೊಟ್ಟು ಪತ್ನಿಯನ್ನು ಹತ್ಯೆಮಾಡಿಸಿದ ಪತ್ನಿ ಬಂಧನ(ತುಮಕೂರು):ತನ್ನ ಅಕ್ರಮ ಸಂಬಂಧ ಬಯಲಾಗುತ್ತದೆ ಎಂದು ಎದರಿದ ಮಹಿಳೆಯೊಬ್ಬಳು ತನ್ನ ಪತಿಯನ್ನು ಸುಪಾರಿ ನೀಡಿ ಕೊಲೆ ಮಾಡಿಸಿರುವ ಘಟನೆ ನಡೆದಿದೆ. ಕುಣಿಗಲ್ ತಾಲೂಕಿನ ಸೀನಪ್ಪನಹಳ್ಳಿ ಗ್ರಾಮದ ವಾಸಿ ಹರ್ಷಿತಾ ತನ್ನ ಪತಿ ಮಂಜುನಾಥ್ ನನ್ನ ಸುಪಾರಿ ಕೊಟ್ಟು ಕೊಲೆ ಮಾಡಿಸಿದ್ದಾಳೆ ಎಂದು ಪೊಲೀಸರ ತನಿಖೆಯಲ್ಲಿ ಬಯಲಾಗಿದೆ. ಹತ್ಯೆಗೆ ಸುಫಾರಿ ಪಡೆದಿದ್ದ ಹರ್ಷಿತಾಳ ದೊಡ್ಡಪ್ಪನ ಮಗ ರಘು, ರವಿಕಿರಣ್ ಎಂಬ ಆರೋಪಿಗಳು ಮಂಜುನಾಥ್ ನನ್ನು ಫೆ.3 ರಂದು ಕೊಲೆ ಮಾಡಿದ್ದರು.
ಹುಟ್ಟುಹಬ್ಬ ಆಚರಣೆ ಮುಗಿಸಿಕೊಂಡು ಮನೆಗೆ ಬಂದಿದ್ದ ಮಂಜುನಾಥ ನನ್ನು ಪೋನ್ ಮಾಡಿ ಕರೆಸಿಕೊಂಡು ಕೊಲೆ ಮಾಡಿ ಕಿತ್ನಾಮಂಗಲ ಕೆರೆಯಲ್ಲಿ ಬಿಸಾಡಿದ್ದರು. ಪ್ರಕರಣದ ತನಿಖೆ ನಡೆಸಿದ ಪೊಲೀಸರು ಮಂಜುನಾಥ್ ಕೊಲೆ ಆರೋಪಿಗಳಾದ ಹರ್ಷಿತಾ, ರಘು, ರವಿಕಿರಣ್ ಮೂವರನ್ನು ಬಂಧಿಸಿದ್ದಾರೆ. ಈ ಸಂಬಂಧ ಕುಣಿಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:ಪತ್ನಿಯ ಕತ್ತು ಸೀಳಿ ಹತ್ಯೆ ಮಾಡಿದ ಪತಿ; ಹಾಡಹಗಲೇ ಅಶೋಕನಗರ ವ್ಯಾಪ್ತಿಯಲ್ಲಿ ಘಟನೆ