ETV Bharat / state

ಅಪಘಾತದಲ್ಲಿ ಗಾಯಗೊಂಡಿದ್ದ ವಿದ್ಯಾರ್ಥಿ ಮಿದುಳು ನಿಷ್ಕ್ರಿಯ; ಅಂಗಾಂಗದಾನಕ್ಕೆ ಮುಂದಾದ ಪೋಷಕರು - Etv Bharat Kannada

ಒಂದು ವಾರದ ಹಿಂದೆ ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸೆಂಟ್​ ಅಲೋಶಿಯಸ್ ಕಾಲೇಜು ವಿದ್ಯಾರ್ಥಿಯ ಮಿದುಳು ಇಂದು ನಿಷ್ಕ್ರಿಯಗೊಂಡಿದ್ದು ವಿದ್ಯಾರ್ಥಿಯ ಅಂಗಾಂಗದಾನಕ್ಕೆ ಪೋಷಕರು ಮುಂದಾಗಿದ್ದಾರೆ.

Kn_mng_
ಮಿದುಳು ನಿಷ್ಕ್ರಿಯಗೊಂಡ ವಿದ್ಯಾರ್ಥಿ
author img

By

Published : Sep 13, 2022, 6:46 PM IST

ಉಳ್ಳಾಲ: ಚಲಿಸುತ್ತಿದ್ದ ಬಸ್​​ನಿಂದ ಕೆಳಕ್ಕೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಪಿಯುಸಿ ವಿದ್ಯಾರ್ಥಿಯ ಮಿದುಳು ನಿಷ್ಕ್ರಿಯಗೊಂಡಿದ್ದು, ವಿದ್ಯಾರ್ಥಿಯ ಅಂಗಾಂಗ ದಾನಕ್ಕೆ ಹೆತ್ತವರು ಮುಂದಾಗಿದ್ದಾರೆ.

ಉಳ್ಳಾಲ ಮಾಸ್ತಿಕಟ್ಟೆ ನಿವಾಸಿ ತ್ಯಾಗರಾಜ್ ಮತ್ತು ಮಮತಾ ಕರ್ಕೇರ ದಂಪತಿ ಪುತ್ರ ಯಶರಾಜ್ (16) ನಗರದ ಸೆಂಟ್​ ಅಲೋಶಿಯಸ್ ಕಾಲೇಜಿನಲ್ಲಿ ಪ್ರಥಮ ವರ್ಷದ ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿಯಾಗಿದ್ದರು. ಕಳೆದ ವಾರ ಸೆ.7ರಂದು ಯಶರಾಜ್ ಉಳ್ಳಾಲದಿಂದ ಸಿಟಿ ಬಸ್​​ನಲ್ಲಿ ಕಾಲೇಜಿಗೆ ಪ್ರಯಾಣಿಸುತ್ತಿದ್ದಾಗ ರಾ.ಹೆ.66ರ ಅಡಂ ಕುದ್ರುವಿನಲ್ಲಿ ಚಲಿಸುತ್ತಿದ್ದ ಬಸ್​​ನಿಂದ ಕೆಳಗೆ ಬಿದ್ದು ತಲೆಗೆ ಗಂಭೀರವಾದ ಗಾಯವಾಗಿತ್ತು.

ಬಳಿಕ ಗಾಯಾಳು ಯಶರಾಜ್​ರನ್ನು ನಗರದ ಇಂಡಿಯಾನ ಆಸ್ಪತ್ರೆಗೆ ದಾಖಲಿಸಿ ತೀವ್ರ ನಿಗಾ ಘಟಕದಲ್ಲಿ ಕಳೆದ ಒಂದು ವಾರದಿಂದ ಚಿಕಿತ್ಸೆ ನೀಡಲಾಗಿತ್ತು. ಆದರೇ, ಇಂದು ವಿದ್ಯಾರ್ಥಿಯ ಮಿದುಳು ನಿಷ್ಕ್ರಿಯಗೊಂಡಿದೆ. ವಿಷಯ ತಿಳಿದು ಪೋಷಕರು ಶೋಕದನಡುವೆಯೂ ಯಶರಾಜ್ ಅಂಗಾಂಗದಾನಕ್ಕೆ ಮುಂದಾಗಿದ್ದಾರೆ.

ಈ ಮೂಲಕ ಯಶರಾಜ್​ ಸಾವಿನಲ್ಲೂ ವಿದ್ಯಾರ್ಥಿ ಸಾರ್ಥಕತೆ ಮೆರೆದಿದ್ದಾರೆ. ಇನ್ನು ದಾನ ಪ್ರಕ್ರಿಯೆಗಳು ಆರಂಭವಾಗಬೇಕಾದರೆ ಸಮಯ ತಗಲುವುದು ಎಂದು ಇಂಡಿಯಾನ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.

ಇದನ್ನೂ ಓದಿ: ಶಿವಮೊಗ್ಗ : ರೈಲು ಬೋಗಿಯಿಂದ ಜಾರಿಬಿದ್ದು ಅಪ್ಪ ಮಗ ಸಾವು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.