ಬೆಳ್ತಂಗಡಿ: ಸೌದಿ ಅರೇಬಿಯಾದ ಜಿಝಾನ್ ಎಂಬಲ್ಲಿನ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ತಾಲೂಕಿನ ನಾವೂರು ಗ್ರಾಮದ ಕೇಳ್ತಾಜೆ ನಿವಾಸಿಯೊಬ್ಬರು ನಿನ್ನೆ ಕೋವಿಡ್ 19 ಮತ್ತು ಶಾಸಕೋಶದ ತೊಂದರೆಯಿಂದಾಗಿ ಸಾವನ್ನಪ್ಪಿದ್ದಾರೆ.
ಶ್ವಾಸಕೋಶದ ಸಮಸ್ಯೆಯಿಂದ ಬಳಲುತ್ತಿದ್ದ ಅವರು, ಸೌದಿ ಅರೇಬಿಯಾದ "ಅಲ್ ಹಯಾ" ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಇಂದು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುವುದಾಗಿ ಅವರ ಕುಟುಂಬ ವರ್ಗಕ್ಕೆ ಮಾಹಿತಿ ಬಂದಿದೆ.
ಅವರ ಅಂತ್ಯಸಂಸ್ಕಾರದ ವಿಧಿ ವಿಧಾನಗಳು ಸೌದಿ ಅರೇಬಿಯಾದಲ್ಲೇ ನಡೆಯಲಿದೆ. ಅಲ್ಲೇ ಆಸುಪಾಸಿನಲ್ಲಿ ಕೆಲಸದಲ್ಲಿರುವ ಅನಿವಾಸಿ ಭಾರತೀಯರು, ಪರಿಚಿತರು ಅಂತ್ಯಸಂಸ್ಕಾರಕ್ಕೆ ಭಾಗಿಯಾಗಲಿದ್ದಾರೆ ಎಂದು ತಿಳಿದು ಬಂದಿದೆ.
ಇನ್ನು ಇಂಡಿಯನ್ ಸೋಷಿಯಲ್ ಫೋರಂ, ISF ಕರ್ನಾಟಕ ಚಾಪ್ಟರ್ ಬೈಶ್ ಸಂಘಟನೆ ಈ ಬಗ್ಗೆ ಸಂತಾಪ ಸೂಚಿಸಿ ಅಗತ್ಯ ನೆರವು ನೀಡುತ್ತಿದೆ.