ETV Bharat / state

ಮಂಗಳೂರಿನಲ್ಲಿ ಬಸ್ ಡಿಕ್ಕಿ ಹೊಡೆದು 12 ವರ್ಷದ ಬಾಲಕ ಸಾವು - ಸಂಚಾರಿ ಪಶ್ಚಿಮ ಠಾಣೆ

ಸ್ಕೂಟರ್​ ಕೊಟ್ಟಾರ ಕಡೆಯಿಂದ ಮಂಗಳೂರು ಕಡೆಗೆ ಸಂಚರಿಸುತ್ತಿದ್ದಾಗ ಅಪಘಾತ ಸಂಭವಿಸಿದೆ. ಮಂಗಳೂರು - ಕಿನ್ನಿಗೋಳಿ - ಕಟೀಲು ನಡುವೆ ಸಂಚರಿಸುವ ಖಾಸಗಿ ಬಸ್ಸು ಇನ್ನೊಂದು ಬಸ್ಸನ್ನು ಓವರ್‌ ಟೇಕ್‌ ಮಾಡುವ ಭರದಲ್ಲಿ ಬಂದು ಸ್ಕೂಟರ್​​ಗೆ ಡಿಕ್ಕಿ ಹೊಡೆದಿದೆ.

ಮಂಗಳೂರಿನಲ್ಲಿ ಬಸ್ ಢಿಕ್ಕಿ ಹೊಡೆದು 12 ವರ್ಷದ ಬಾಲಕ ಸಾವು
a-12-year-old-boy-died-after-being-hit-by-a-bus-in-mangalore
author img

By

Published : Oct 17, 2022, 5:42 PM IST

ಮಂಗಳೂರು: ಅತೀ ವೇಗದಿಂದ ಬಂದ ಬಸ್ಸೊಂದು ಸ್ಕೂಟರ್​ಗೆ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟರ್​ ಮೇಲೆ ಹಿಂಬದಿ ಸವಾರನಾಗಿದ್ದ 12 ವರ್ಷದ ಬಾಲಕ ಮೃತಪಟ್ಟ ಘಟನೆ ನಗರದ ಲಾಲ್‌ಭಾಗ್‌ ಬಳಿ ನಡೆದಿದೆ.

ಪಡೀಲ್ ಕಣ್ಣೂರು ನಿವಾಸಿ ರಕ್ಷಣ್ (13) ಮೃತಪಟ್ಟ ಬಾಲಕ. ಬಾಲಕ ಸಂಬಂಧಿ ನಾರಾಯಣ ಎಂಬುವರು ಚಲಾಯಿಸುತ್ತಿದ್ದ ಸ್ಕೂಟರ್​​ನಲ್ಲಿ ಹಿಂಬದಿ ಕುಳಿತಿದ್ದ. ಸ್ಕೂಟರ್​ ಕೊಟ್ಟಾರ ಕಡೆಯಿಂದ ಮಂಗಳೂರು ಕಡೆಗೆ ಸಂಚರಿಸುತ್ತಿದ್ದಾಗ ಅಪಘಾತ ಸಂಭವಿಸಿದೆ. ಮಂಗಳೂರು - ಕಿನ್ನಿಗೋಳಿ - ಕಟೀಲು ನಡುವೆ ಸಂಚರಿಸುವ ಖಾಸಗಿ ಬಸ್ಸು ಇನ್ನೊಂದು ಬಸ್ಸನ್ನು ಓವರ್‌ ಟೇಕ್‌ ಮಾಡುವ ಭರದಲ್ಲಿ ಬಂದು ಸ್ಕೂಟರ್​​ಗೆ ಡಿಕ್ಕಿ ಹೊಡೆದಿದೆ.

ಸವಾರ ನಾರಾಯಣ ಅವರು ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾದರೆ, ಸಂಬಂಧಿ ಬಾಲಕ ರಕ್ಷಣ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಸಂಚಾರಿ ಪಶ್ಚಿಮ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.