ETV Bharat / state

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶೆ.75 ರಷ್ಟು ಮತದಾನ: ಮೊದಲ ಬಾರಿಗೆ ಶಾಂತಿಭಂಗ - karnataka election 2023

ದಕ್ಷಿಣ ಕನ್ನಡ ಜಲ್ಲೆಯ ವ್ಯಾಪ್ತಿಗೆ ಬರುವ ಎಲ್ಲಾ ವಿಧಾನಸಭೆ ಕ್ಷೇತ್ರಗಳ ಮತದಾನ ವಿವರ ಇಲ್ಲಿದೆ.

75-dot-87-polling-in-dakshina-kannada-district
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶೆ.75.87ರಷ್ಟು ಮತದಾನ: ಮೊದಲ ಬಾರಿಗೆ ಶಾಂತಿಭಂಗ
author img

By

Published : May 10, 2023, 11:03 PM IST

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ವಿಧಾನಸಭಾ ಚುನಾವಣೆಗೆ ಉತ್ತಮ ಸ್ಪಂದನೆ ಸಿಕ್ಕಿದ್ದು, ಶೇಕಡ 75.87 ಮತದಾನವಾಗಿದೆ. ಈವರೆಗೆ ಶಾಂತಿಯುತವಾಗಿಯೆ ನಡೆಯುತ್ತಿದ್ದ ಚುನಾವಣೆ ಈ ಬಾರಿ ಅಹಿಂಸೆಯ ಘಟನೆಗಳು ನಡೆದಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಬಾರಿ 17,81,389 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ.

ಮಂಗಳೂರು ಉತ್ತರದಲ್ಲಿ 2,49,421 ಮತದಾರರು ಮತ ಚಲಾಯಿಸಿದ್ದು, 71.6 ಶೇಕಡಾ ಮತದಾನವಾಗಿದೆ. ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ 2,12,753 ಮತದಾರರು ಮತ ಚಲಾಯಿಸಿದ್ದು, 79.91 ಶೇಕಡಾ ಮತದಾನವಾಗಿದೆ. ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ 2,060,29 ಮತದಾರರು ಮತ ಚಲಾಯಿಸಿದ್ದು, 78.53 ಶೇಕಡಾ ಮತದಾನವಾಗಿದೆ. ಮಂಗಳೂರು ವಿಧಾನಸಭಾ ಕ್ಷೇತ್ರದಲ್ಲಿ 2,05,129 ಮತದಾರರು ಮತ ಚಲಾಯಿಸಿದ್ದು, 77.38 ಶೇಕಡಾ ಮತದಾನವಾಗಿದೆ.

ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ 2,28,377 ಮತದಾರರು ಮತ ಚಲಾಯಿಸಿದ್ದು, ಶೇಕಡಾ 80.27 ಶೇಕಡಾ ಮತದಾನವಾಗಿದೆ. ಮೂಡಬಿದಿರೆ ವಿಧಾನಸಭಾ ಕ್ಷೇತ್ರದಲ್ಲಿ 2,05,065 ಮತದಾರರು ಮತ ಚಲಾಯಿಸಿದ್ದು 76 ಶೇಕಡಾ ಮತದಾನವಾಗಿದೆ. ಮಂಗಳೂರು ದಕ್ಷಿಣ ಕ್ಷೇತ್ರದಲ್ಲಿ 2,45,744 ಮತದಾರರು ಮತ ಚಲಾಯಿಸಿದ್ದು, 64.89 ಶೇಕಡಾ ಮತದಾನವಾಗಿದೆ. ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದಲ್ಲಿ 228871 ಮತದಾರರು ಮತ ಚಲಾಯಿಸಿದ್ದು ಶೇಕಡ 80.33 ಮತದಾನವಾಗಿದೆ.

ಇದನ್ನು ಓದಿ: ಬಳ್ಳಾರಿ ಕೊರ್ಲಗುಂದಿ ಮತಗಟ್ಟೆಯಲ್ಲಿ ಗಂಡು ಮಗುವಿಗೆ ಜನ್ಮನೀಡಿದ ಮಹಿಳೆ.. ಕಾಲಿನಿಂದ ಮತ ಚಲಾಯಿಸಿದ ವಿಶೇಷಚೇತನ

ನಗರದಲ್ಲಿ ಕಡಿಮೆ ಗ್ರಾಮಾಂತರದಲ್ಲಿ ಹೆಚ್ಚು ಮತದಾನ: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ಎರಡು ಕ್ಷೇತ್ರಗಳಾದ ಮಂಗಳೂರು ಉತ್ತರದಲ್ಲಿ ಶೇಕಡ 71.6, ಮಂಗಳೂರು ದಕ್ಷಿಣದಲ್ಲಿ 64.89 ಶೇಕಡಾ ಮತದಾನವಾಗಿದೆ. ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರದಲ್ಲಿರುವ ಈ ಎರಡು ಕ್ಷೇತ್ರಗಳು ಕಡಿಮೆ ಮತದಾನವಾದ ಕ್ಷೇತ್ರಗಳಾದರೆ, ಗ್ರಾಮಾಂತರ ಭಾಗದಲ್ಲಿರುವ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದಲ್ಲಿ ಶೇ 80.33ರಷ್ಟು ಮತದಾನವಾಗಿದೆ.

ಇದನ್ನೂ ಓದಿ: ವೋಟಿಗಾಗಿ ನೋಟು ಹಂಚಿದ ಆರೋಪ.. ಕಾಂಗ್ರೆಸ್ ಜೆಡಿಎಸ್ ನಡುವೆ ಹೊಯ್ ಕೈ

ಮೊದಲ ಬಾರಿಗೆ ಹಿಂಸಾಚಾರ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಂತಿಯುತವಾಗಿ ಚುನಾವಣಾ ನಡೆಯುವುದು ಈ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಆದರೆ ಇದೆ ಮೊದಲ ಬಾರಿ ಚುನಾವಣಾ ಪೂರ್ವ ಮತ್ತು ಚುನಾವಣೋತ್ತರ ಹಿಂಸಾಚಾರಗಳು ನಡೆದಿದೆ. ಚುನಾವಣಾ ಪೂರ್ವ ಹಿಂಸಾಚಾರವಾಗಿ ಮತದಾರರಿಗೆ ಹಣ ಹಂಚುವ ಆರೋಪದಲ್ಲಿ ಮಂಗಳೂರು ಉತ್ತರ ಕ್ಷೇತ್ರದ ಜೆಡಿಎಸ್ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ಘರ್ಷಣೆ ನಡೆದಿದೆ. ಇದರಲ್ಲಿ ಜೆಡಿಎಸ್ ಅಭ್ಯರ್ಥಿ ಮೊಯ್ದಿನ್ ಬಾವ ಅವರಿಗೂ ಹಲ್ಲೆಯಾದ ಘಟನೆ ನಡೆದಿತ್ತು. ಚುನಾವಣೋತ್ತರ ಘರ್ಷಣೆಯಾಗಿ ನಗರದ ಮೂಡುಶೆಡ್ಡೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ಘರ್ಷಣೆಯಾಗಿದೆ. ಈ ಗಲಾಟೆಯಲ್ಲಿ ಮೂಡಬಿದಿರೆ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಕಾರಿಗೆ ಹಾನಿ ಮಾಡಲಾಗಿದೆ.

ಇದನ್ನೂ ಓದಿ: ಮಂಗಳೂರಿನಲ್ಲಿ ಬಿಜೆಪಿ-ಕಾಂಗ್ರೆಸ್ ಕಾರ್ಯಕರ್ತರ ಜಟಾಪಟಿ: ಕೈ ಅಭ್ಯರ್ಥಿ ಮಿಥುನ್ ರೈ ಕಾರಿಗೆ ಹಾನಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.