ಮಂಗಳೂರು: ದ.ಕ.ಜಿಲ್ಲೆಯಲ್ಲಿ ರವಿವಾರ ಆರು ಮಂದಿ ಕೊರೊನಾ ಸೋಂಕಿಗೆ ಬಲಿಯಾಗಿದ್ದು, ಈ ಮೂಲಕ ಮೃತಪಟ್ಟವರ ಸಂಖ್ಯೆ 356ಕ್ಕೇರಿದೆ. ಅಲ್ಲದೆ ಇಂದು ಮತ್ತೆ 334 ಮಂದಿಯಲ್ಲಿ ಸೋಂಕು ದೃಢಗೊಂಡಿದೆ.
ಇಂದು ಮಂಗಳೂರಿನಲ್ಲಿ 191 ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದರೆ, ಬಂಟ್ವಾಳದಲ್ಲಿ 78, ಬೆಳ್ತಂಗಡಿ 20, ಪುತ್ತೂರು 20, ಸುಳ್ಯದಲ್ಲಿ 6 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಅಲ್ಲದೆ ಹೊರ ಜಿಲ್ಲೆಯಿಂದ ಬಂದಿರುವ 19 ಮಂದಿಯಲ್ಲಿ ಸೋಂಕು ದೃಢಗೊಂಡಿದೆ.
ಅದೇ ರೀತಿ ಇಂದು ಇಲಿ ಪ್ರಕರಣದಲ್ಲಿ (Influenza Like Illness) 138 ಮಂದಿಗೆ ಸೋಂಕು ತಗುಲಿದ್ದರೆ, ಸಾರಿ ಪ್ರಕರಣದಲ್ಲಿ(Severe Acute Respiratory Influence) 16 ಮಂದಿಗೆ, ಪ್ರಾಥಮಿಕ ಸಂಪರ್ಕದಿಂದ 68 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಅಲ್ಲದೆ 112 ಮಂದಿಯ ಸೋಂಕಿನ ಮೂಲ ಇನ್ನು ಪತ್ತೆಯಾಗಬೇಕಿದೆ. ಇವರಲ್ಲಿ 112 ಮಂದಿ ಹೋಮ್ ಐಸೊಲೇಷನ್ನಲ್ಲಿದ್ದು, 90 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 11 ಮಂದಿ ಕೋವಿಡ್ ಕೇರ್ ಸೆಂಟರ್ ನಲ್ಲಿದ್ದಾರೆ.
ದ.ಕ.ಜಿಲ್ಲೆಯಲ್ಲಿ ಇಂದು ಸೋಂಕಿನಿಂದ ಗುಣಮುಖರಾಗಿ 213 ಮಂದಿ ಮನೆಗೆ ತೆರಳಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ 95,213 ಮಂದಿಗೆ ಕೊರೊನಾ ಸೋಂಕು ತಪಾಸಣೆ ಮಾಡಲಾಗಿದ್ದು, 82,770 ಮಂದಿಗೆ ನೆಗೆಟಿವ್ ಬಂದಿದೆ. 12,443 ಮಂದಿಗೆ ಸೋಂಕು ತಗುಲಿದ್ದು, ಅದರಲ್ಲಿ 9,422 ಮಂದಿ ಗುಣಮುಖರಾಗಿದ್ದಾರೆ. 2,665 ಮಂದಿ ಸೋಂಕಿತರಾಗಿ ಕ್ವಾರೆಂಟೈನ್ನಲ್ಲಿದ್ದಾರೆ.