ಪುತ್ತೂರು(ಮಂಗಳೂರು) : ನಗರಸಭಾ ವ್ಯಾಪ್ತಿಯಲ್ಲಿ 2 ಮತ್ತು ಗ್ರಾಮಾಂತರ ಪ್ರದೇಶದಲ್ಲಿ 1 ಪ್ರಕರಣ ಸೇರಿ ಪುತ್ತೂರು ಮತ್ತು ಕಡಬ ತಾಲೂಕಿನಲ್ಲಿಂದು 3 ಸೋಂಕಿತ ಪ್ರಕರಣ ಪತ್ತೆಯಾಗಿವೆ.
ಕೆಮ್ಮಿಂಜೆಯ ಒಂದೂವರೆ ವರ್ಷದ ಮಗು ಹಾಗೂ ದರ್ಬೆಯ ಯುವಕನೋರ್ವನಲ್ಲಿ ಸೋಂಕು ದೃಢಪಟ್ಟಿದೆ. ಒಳಮೊಗ್ರು ಗ್ರಾಮದ ಪರ್ಪುಂಜದ ವ್ಯಕ್ತಿಯೊಬ್ಬರಲ್ಲಿ ಸೋಂಕು ತಗುಲಿರುವುದು ದೃಢಪಟ್ಟಿದೆ. ಈ ಮೂಲಕ ಪುತ್ತೂರು ಮತ್ತು ಕಡಬ ತಾಲೂಕುಗಳಲ್ಲಿ ಒಟ್ಟು 27 ಪ್ರಕರಣ ವರದಿಯಾಗಿವೆ.
ಕ್ವಾರಂಟೈನ್‌ನಲ್ಲಿದ್ದ ವೈದ್ಯರು, ಸಿಬ್ಬಂದಿಗೆ ನೆಗೆಟಿವ್ : ಖಾಸಗಿ ಆಸ್ಪತ್ರೆಯ ನಾಲ್ವರು ವೈದ್ಯರು ಹಾಗೂ ಸಿಬ್ಬಂದಿ ಮತ್ತು ಪುತ್ತೂರು ಸರ್ಕಾರಿ ಆಸ್ಪತ್ರೆಯ ವೈದ್ಯರು, ಸಿಬ್ಬಂದಿ ಸೇರಿ ಒಟ್ಟು 20 ಮಂದಿಯ ಗಂಟಲು ದ್ರವ ಪರೀಕ್ಷಾ ವರದಿ ನೆಗೆಟಿವ್ ಬಂದಿವೆ. ರೋಗಿಗಳಲ್ಲಿ ಕೊರೊನಾ ಪಾಸಿಟಿವ್ ಬಂದ ಹಿನ್ನೆಲೆ, ಆಸ್ಪತ್ರೆಯ 20 ಮಂದಿ ಕಾರಂಟೈನ್‌ಗೆ ಒಳಗಾಗಿದ್ದರು. ಇವರ ಗಂಟಲು ದ್ರವವನ್ನು ಪರೀಕ್ಷೆಗಾಗಿ ಮಂಗಳೂರಿಗೆ ಕಳುಹಿಸಲಾಗಿತ್ತು. ಇದೀಗ ನೆಗೆಟಿವ್ ವರದಿ ಬರುವ ಮೂಲಕ ಎಲ್ಲರ ಆತಂಕ ದೂರಗೊಂಡಿದೆ.