ಮಂಗಳೂರು: ಮಹಾಮಾರಿ ಕೊರೊನಾ ಜಿಲ್ಲೆಯಲ್ಲಿ ತನ್ನ ಅಟ್ಟಹಾಸ ಮೆರೆಯುತ್ತಿದ್ದು, ಇಂದು ಒಂದೇ ದಿನ 183 ಪ್ರಕರಣಗಳು ಪತ್ತೆಯಾಗಿವೆ.
ಮಂಗಳೂರು ಮಹಾನಗರ ಪಾಲಿಕೆ ಕಾರ್ಪೋರೇಟರ್, ಪಾಲಿಕೆ ಸಿಬ್ಬಂದಿ, ಸಿಐಎಸ್ಎಫ್ ಪೊಲೀಸರು, ಸಿಸಿಬಿ ಪೊಲೀಸ್ ಸೇರಿದಂತೆ 183 ಮಂದಿಯಲ್ಲಿ ಕೊರೊನಾ ಕಾಣಿಸಿಕೊಂಡಿದೆ. 7 ದಿನದ ಮಗು, 1 ವರ್ಷ, 4 ವರ್ಷ, 5 ವರ್ಷ ಮತ್ತು 3 ವರ್ಷದ ಇಬ್ಬರು ಸೇರಿದಂತೆ 183 ಮಂದಿಗೆ ಕೊರೊನಾ ದೃಢಪಟ್ಟಿದೆ. ಇಂದು 12 ಮಂದಿ ಗುಣಮುಖರಾಗಿದ್ದು, ಮನೆಗೆ ಕಳುಹಿಸಲಾಗಿದೆ.
ದ.ಕ ಜಿಲ್ಲೆಯಲ್ಲಿ ಈವರೆಗೆ ಒಟ್ಟು 1542 ಪ್ರಕರಣಗಳು ಪತ್ತೆಯಾಗಿದ್ದು, ಇದರಲ್ಲಿ 28 ಮಂದಿ ಸಾವನ್ನಪ್ಪಿದ್ದಾರೆ. 695 ಮಂದಿ ಗುಣಮುಖರಾಗಿದ್ದು, 819 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.