ETV Bharat / state

ಹೊಸಗನ್ನಡದ ಕವಿ ಮುದ್ದಣ ಹೆಸರಲ್ಲಿ 150 ರೂ.ನಾಣ್ಯ ಅನಾವರಣ - ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್

ಕನ್ನಡ ಸಾಹಿತ್ಯಲೋಕದಲ್ಲಿ ಮಹಾಕವಿ ಎಂದು ಖ್ಯಾತಿಪಡೆದ ಕವಿ ಮುದ್ದಣ ಅವರ 150ನೇ ಜಯಂತಿ ಪ್ರಯುಕ್ತ ಕೇಂದ್ರ ಸರ್ಕಾರ 150 ರೂ. ಮೌಲ್ಯದ ನಾಣ್ಯ ಹೊರತಂದಿದ್ದು, ಇಂದು ಮಂಗಳೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್​ ಅನಾವರಣಗೊಳಿಸಿದರು.

ನಳಿನ್ ಕುಮಾರ್ ಕಟೀಲ್​
ನಳಿನ್ ಕುಮಾರ್ ಕಟೀಲ್​
author img

By

Published : Jan 24, 2022, 10:37 AM IST

ಮಂಗಳೂರು: ಹೊಸಗನ್ನಡದ ಮುಂಗೋಳಿ ಎಂದು ಪ್ರಖ್ಯಾತರಾಗಿದ್ದ ಕವಿ ಮುದ್ದಣ ಅವರ 150ನೇ ಜನ್ಮ ವರ್ಷಾಚರಣೆಯ ಪ್ರಯುಕ್ತ 150 ರೂ. ಹೊಸ ನಾಣ್ಯವನ್ನು ಇಂದು ಮಂಗಳೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್​ ಅನಾವರಣಗೊಳಿಸಿದರು.

ಬಳಿಕ ಮಾತನಾಡಿದ ಅವರು, ದ.ಕ.ಜಿಲ್ಲೆಯ ಕವಿ ಮುದ್ದಣ ಅವರು ಬಹಳ ಶ್ರೇಷ್ಠ ಪರಂಪರೆ ಹುಟ್ಟು ಹಾಕಿದರು. ಕವಿ ಮುದ್ದಣನವರ 150 ನೇ ವರ್ಷಾಚರಣೆಯ ಈ ಸಂದರ್ಭದಲ್ಲಿ ಅವರ ಸಾಹಿತ್ಯ ಪ್ರಚಾರ, ಪ್ರಸಾರದ ಜೊತೆಗೆ ದೇಶದ ಗೌರವ ಸಲ್ಲಬೇಕೆಂಬ ದೃಷ್ಟಿಯಿಂದ ಪ್ರಧಾನಿ ಮೋದಿ ಹಾಗೂ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮುದ್ದಣನ ಹೆಸರಿನಲ್ಲಿ 150 ರೂ‌. ಮೌಲ್ಯದ ನಾಣ್ಯ ಬಿಡುಗಡೆ ಮಾಡಿದ್ದಾರೆ ಎಂದರು.

150 ರೂ.ನಾಣ್ಯ
150 ರೂ.ನಾಣ್ಯ

ಹತ್ತಾರು ಕವಿಗಳು, ಕನ್ನಡದ ಹೋರಾಟಗಾರರು ಹುಟ್ಟಿ ಬೆಳೆದಿರುವ ನಾಡು ಇದು. ಕವಿ ಮುದ್ದಣನಂತಹ ಶ್ರೇಷ್ಠ ಕವಿಯನ್ನು ಗುರುತಿಸುವ ಕಾರ್ಯವನ್ನು ನರೇಂದ್ರ ಮೋದಿ ಸರ್ಕಾರ ಮಾಡಿದೆ. ಅವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ಹೇಳಿದರು.

150 ರೂ.ನಾಣ್ಯ ಅನಾವರಣಗೊಳಿಸಿದ ನಳಿನ್ ಕುಮಾರ್ ಕಟೀಲ್​

ಈ ಸಂದರ್ಭ ನಂದಳಿಕೆ ಬಾಲಚಂದ್ರ ರಾವ್, ಸುಧೀರ್ ಕುಮಾರ್ ಶೆಟ್ಟಿ ಕಣ್ಣೂರು, ಜಗದೀಶ್ ಶೇಣವ, ವಿಜಯ್ ಕುಮಾರ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.