ಮಂಗಳೂರು: ಎಲ್ಲೆಡೆ ತಲ್ಲಣ ಮೂಡಿಸಿರುವ ಮಹಾಮಾರಿ ಕೊರೊನಾ ದಕ್ಷಿಣ ಕನ್ನಡ ಜಿಲ್ಲೆಯ 10 ಮಂದಿಯನ್ನು ಬಲಿ ತೆಗೆದುಕೊಂಡಿದೆ. ಈ ಮೂಲಕ ಮೃತರ ಸಂಖ್ಯೆ 190 ಮತ್ತು ಸೋಂಕಿತರ ಸಂಖ್ಯೆ 6542ಕ್ಕೆ ಏರಿಕೆಯಾಗಿದೆ.
ದಿನೇ-ದಿನೆ ಜಿಲ್ಲೆಯಲ್ಲಿ ಕೊರೊನಾ ಸೋಂಕು ಪ್ರಕರಣಗಳು ಮತ್ತು ಸಾವಿನ ಸಂಖ್ಯೆ ಏರುತ್ತಲೇ ಇದೆ. ಇಂದು ಸಾವನ್ನಪ್ಪಿದ 10 ಮಂದಿಯಲ್ಲಿ ಮಂಗಳೂರು ತಾಲೂಕಿನ 7, ಪುತ್ತೂರು ತಾಲೂಕಿನ 1, ಬೆಳ್ತಂಗಡಿ ತಾಲೂಕಿನ 1 ಪ್ರಕರಣ ಸೇರಿದಂತೆ ಒಬ್ಬರು ಹೊರಜಿಲ್ಲೆಯವರಾಗಿದ್ದಾರೆ. ಈ ಮೂಲಕ ಕೊರೊನಾದಿಂದ ಸಾವನ್ನಪ್ಪಿದವರ ಸಂಖ್ಯೆ 190ಕ್ಕೆ ಏರಿಕೆಯಾಗಿದೆ.
ಇನ್ನೂ ಜಿಲ್ಲೆಯಲ್ಲಿ ಇಂದು 149 ಮಂದಿಗೆ ಕೊರೊನಾ ದೃಢಪಟ್ಟಿದೆ. ಮಂಗಳೂರು ತಾಲೂಕಿನ 79, ಬಂಟ್ವಾಳ ತಾಲೂಕಿನ 16, ಬೆಳ್ತಂಗಡಿ ತಾಲೂಕಿನ 21, ಪುತ್ತೂರು ತಾಲೂಕಿನ 20, ಸುಳ್ಯ ತಾಲೂಕಿನ ಒಬ್ಬರು ಮತ್ತು ಹೊರಜಿಲ್ಲೆಯ 12 ಮಂದಿಗೆ ಕೊರೊನಾ ದೃಢಪಟ್ಟಿದೆ. ಈ ಪೈಕಿ 64 ಐಎಲ್ಐ ಪ್ರಕರಣ, 12 ಎಸ್ ಎ ಆರ್ ಐ ಪ್ರಕರಣ, 27 ಪ್ರಾಥಮಿಕ ಸಂಪರ್ಕದಿಂದ ಕೊರೊನಾ ದೃಢಪಟ್ಟಿದೆ. 46 ಮಂದಿಯ ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ. ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 6542ಕ್ಕೆ ತಲುಪಿದೆ.
ಇಂದು 82 ಮಂದಿ ಗುಣಮುಖರಾಗಿದ್ದು, ಈವರೆಗೆ 3009 ಮಂದಿ ಸೋಂಕಿನಿಂದ ಸಂಪೂರ್ಣ ಗುಣಮುಖರಾಗಿದ್ದಾರೆ. ಸದ್ಯ 3343 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.