ಮಂಗಳೂರು: ಅಪರಿಚಿತ ವ್ಯಕ್ತಿಯೊಬ್ಬರು ಕ್ರಿಸ್ಮಸ್ ಗಿಫ್ಟ್ ಕಳುಹಿಸಿದ್ದಾರೆ ಎಂದು ನಂಬಿ ಮಂಗಳೂರಿನ ವ್ಯಕ್ತಿಯೊಬ್ಬರು 1.29 ಲಕ್ಷ ರೂ. ಕಳೆದುಕೊಂಡಿದ್ದಾರೆ.
ಮಂಗಳೂರಿನ ವ್ಯಕ್ತಿಯೊಬ್ಬರಿಗೆ ಡಿಸೆಂಬರ್ 15 ರಂದು ಅಪರಿಚಿತನೊಬ್ಬ ಕರೆ ಮಾಡಿ ತನ್ನನ್ನು ನೆಲ್ಸನ್ ವಿಲಿಯಮ್ಸ್ ಎಂದು ಪರಿಚಯಿಸಿಕೊಂಡಿದ್ದ. ಬಳಿಕ ತಾನು ಕ್ರಿಸ್ಮಸ್ ಉಡುಗೊರೆ ಕೊಡುವುದಾಗಿ ಮಂಗಳೂರಿನ ವ್ಯಕ್ತಿಗೆ ತಿಳಿಸಿದ್ದ. ಮಂಗಳೂರಿನ ವ್ಯಕ್ತಿ ಕ್ರಿಸ್ಮಸ್ ಉಡುಗೊರೆ ಬೇಡ ಎಂದಿದ್ದರು. ಆದರೆ, ಡಿಸೆಂಬರ್ 21 ರಂದು ಮತ್ತೊಬ್ಬ ವ್ಯಕ್ತಿ ಕರೆಮಾಡಿ ತನ್ನನ್ನು ಕಸ್ಟಮ್ಸ್ ಅಧಿಕಾರಿ ಎಂದು ಪರಿಚಯಿಸಿಕೊಂಡು ನೆಲ್ಸನ್ ವಿಲಿಯಮ್ಸ್ ಎಂಬುವವರು ಉಡುಗೊರೆ ಕಳುಹಿಸಿದ್ದು, ಅದನ್ನು ಬಿಡಿಸಿಕೊಳ್ಳಲು ಹಣ ನೀಡುವಂತೆ ಬೇಡಿಕೆ ಇಟ್ಟಿದ್ದರು.
ಓದಿ: ರೈತರ 'ಟ್ರ್ಯಾಕ್ಟರ್ ಮಾರ್ಚ್' ಪ್ರಾರಂಭ; ನಾಳೆ ಮತ್ತೊಂದು ಸುತ್ತಿನ ಮಾತುಕತೆ
ಅದರಂತೆ ಆ ವ್ಯಕ್ತಿಯ ಬ್ಯಾಂಕ್ ಖಾತೆಗೆ ಮಂಗಳೂರಿನ ವ್ಯಕ್ತಿ 1,29,300 ವರ್ಗಾಯಿಸಿದ್ದಾರೆ. ಬಳಿಕ ಇದೊಂದು ವಂಚನೆ ಪ್ರಕರಣ ಎಂದು ತಿಳಿದುಕೊಂಡು ಮಂಗಳೂರಿನ ಸೈಬರ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.