ಚಿತ್ರದುರ್ಗ: ಟಿಕ್ಟಾಕ್ ಗೋಜಿಗೆ ಬಿದ್ದ ಪ್ರವಾಸಿಗನೋರ್ವ ಜಿಲ್ಲೆಯ ಹಿರಿಯೂರಿನಲ್ಲಿರುವ ವಾಣಿವಿಲಾಸ ಸಾಗರ ಜಲಾಶಯಕ್ಕೆ ಜಿಗಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಹೊಸ ವರ್ಷದ ಸಂಭ್ರಮಾಚರಣೆಗೆ ತೆರಳಿದ್ದಾಗ ನಡೆದ ಘಟನೆ ಎಂದು ಅಂದಾಜಿಸಲಾಗಿದೆ. ಜಲಾಶಯಕ್ಕೆ ಯುವಕ ತಕ್ಷಣ ಈಜಿ ದಡ ಸೇರಿದ್ದಾನೆ. ಈ ರೀತಿಯ ಘಟನೆಗಳು ಸಾಕಷ್ಟು ಭಾರಿ ಸಂಭವಿಸಿದ್ದರೂ ವಿಶ್ವೇಶ್ವರಯ್ಯ ಜಲ ನಿಗಮ ಮಾತ್ರ ಸೂಕ್ತ ಭದ್ರತೆ ಕಲ್ಪಿಸಿಲ್ಲ. ಇನ್ನಾದರೂ ಸಂಬಂಧಿಸಿದ ಅಧಿಕಾರಿಗಳು ಗಮನಹರಿಸಲಿ ಎಂದು ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.
ಜಲಾಶಯದ ಮೇಲಿಂದ ಹಾರಿದ ಯುವಕನ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.