ETV Bharat / state

ಮಾಟಮಂತ್ರದ ಹೆಸರಲ್ಲಿ ಯುವತಿಯನ್ನು ನಂಬಿಸಿ ಎರಡನೇ ಮದುವೆಯಾದ ಮಂತ್ರವಾದಿ ಮಗ - Chitradurga news

ನಿನಗೆ ಜೀವ ದೋಷವಿದೆ ಎಂದು ನಂಬಿಸಿ ಪೂಜೆ ಮಾಡಿಸುವುದಾಗಿ ತಿಳಿಸಿದ್ದಾನೆ. ಆತನ ಪುತ್ರ ಭಾಸ್ಕರ್ ಯುವತಿಯನ್ನು ಹೆದರಿಸಿ ವಿವಾಹವಾಗುವಂತೆ ಪೀಡಿಸಿದ್ದಾನೆ. ನಂತರ ಪಾವಗಡಕ್ಕೆ ಕರೆತಂದು 2ನೇ ವಿವಾಹವಾಗಿರುವುದು ಬೆಳಕಿಗೆ ಬಂದಿದೆ..

young-man-blackmailed-a-girl-and-tied-up-second-marriage
ಮಾಟಮಂತ್ರದ ಹೆಸರಲ್ಲಿ ಯುವತಿಯನ್ನು ನಂಬಿಸಿ ಎರಡನೇ ಮದುವೆಯಾದ ಮಂತ್ರವಾದಿ ಮಗ
author img

By

Published : Oct 31, 2020, 6:15 PM IST

ಚಿತ್ರದುರ್ಗ : ಮಾಟಮಂತ್ರ ಎಂದು ಮರುಳು ಮಾಡಿ ಯುವತಿಯೊಬ್ಬಳ ಇಚ್ಛೆಯ ವಿರುದ್ಧವಾಗಿ ಆಕೆಯನ್ನು ವಿವಾಹವಾಗಿರುವ ಘಟನೆ ಇಲ್ಲಿನ ಭರಮಸಾಗರದಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ. ಇಲ್ಲಿನ ಮೊಳಕಾಲ್ಮೂರು ತಾಲೂಕಿನ ಹಿರೇಹಳ್ಳಿ ಗ್ರಾಮದ ಶರಣಪ್ಪ ಎಂಬ ಮಂತ್ರವಾದಿ ಯುವತಿಯನ್ನು ವಶೀಕರಣ ಮಾಡಿದ್ದು, ಆತನ ಮಗ ಭಾಸ್ಕರ್ ಎಂಬಾತನಿಗೆ 2ನೇ ವಿವಾಹ ಮಾಡಿದ್ದಾನೆ.

ಕೆಲ ವರ್ಷಗಳ ಹಿಂದೆ ಭರಮಸಾಗರದಲ್ಲಿ ಜಮೀನು ಖರೀದಿಸಿ ಮಾಟ ಮಂತ್ರ ಮಾಡಿಕೊಂಡು ಓಡಾಡುತ್ತಿದ್ದ. ಅಪ್ಪನ ಈ ಕೆಲಸದಲ್ಲಿ ಮಗ ಭಾಸ್ಕರ್ ಸಹ ಕೈಜೋಡಿಸುತ್ತಿದ್ದ. ಈ ಮಂತ್ರವಾದಿಯ ಮಗಳು ಹಾಗೂ ಆ ಯುವತಿ ಸ್ನೇಹಿತೆಯರಾಗಿದ್ದು, ಇದನ್ನೇ ಬಂಡವಾಳ ಮಾಡಿಕೊಂಡ ಮಂತ್ರವಾದಿ ಆಕೆಯನ್ನು ವಶೀಕರಣಕ್ಕೆ ಒಳಗಾಗುವಂತೆ ಮಾಡಿದ್ದಾನೆ.

ಮಾಟಮಂತ್ರದ ಹೆಸರಲ್ಲಿ ಯುವತಿಯನ್ನು ನಂಬಿಸಿ ಎರಡನೇ ಮದುವೆಯಾದ ಮಂತ್ರವಾದಿ ಮಗ

ಪ್ರಕರಣದ ಹಿನ್ನೆಲೆ

ಮಂತ್ರವಾದಿ ಶರಣಪ್ಪನ ಮಗಳಿಂದ ಪರಿಚಯವಾಗಿದ್ದ ಯುವತಿಗೆ ಹುಷಾರಿಲ್ಲದಾಗ ಚಿಕಿತ್ಸೆ ನೀಡುವುದಾಗಿ ಕರೆದಿದ್ದಾನೆ. ಬಳಿಕ ನಿನಗೆ ಪ್ರಾಣಾಪಾಯವಿದೆ ಎಂದು ನಂಬಿಸಿ ಪೂಜೆ ಮಾಡಿಸುವುದಾಗಿ ತಿಳಿಸಿದ್ದಾನೆ. ಬಳಿಕ ಆತನ ಮಗ ಭಾಸ್ಕರ್​​ ಆಕೆಯನ್ನು ಕರೆಯಿಸಿ ಪೂಜೆ ಮಾಡಿಸುವ ನೆಪದಲ್ಲಿ ಅಶ್ಲೀಲ ಫೋಟೋಗಳನ್ನ ತೆಗೆದು ಬ್ಲಾಕ್​ ಮೇಲ್ ಮಾಡಲು ಮುಂದಾಗಿದ್ದು, ವಿವಾಹವಾಗುವಂತೆ ಪೀಡಿಸಿದ್ದಾನೆ.

ಇಲ್ಲದಿದ್ದರೆ ಆಕೆಯ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಹೆದರಿಸಿದ್ದಾನೆ. ಇದರಿಂದ ಬೆದರಿದ ಯುವತಿ ವಿವಾಹವಾಗಲು ಒಪ್ಪಿದ್ದಾಳೆ. ಇದಲ್ಲದೆ ಮಂತ್ರವಾದಿ ಪುತ್ರ ಭಾಸ್ಕರ್ ವಿರುದ್ಧ ಇದಕ್ಕೂ ಮೊದಲು 16 ವರ್ಷದ ಅಪ್ರಾಪ್ತೆಯನ್ನೂ ಸಹ ವಶೀಕರಣ ಮಾಡಿ ವಿವಾಹವಾಗಿರುವ ಆರೋಪವಿದೆ.

ಇದಾದ ಬಳಿಕ ಯುವತಿಯ ಪೋಷಕರು ಪ್ರಕರಣ ಸಂಬಂಧ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದರು. ಪ್ರಕರಣ ದಾಖಲಿಕೊಂಡಿದ್ದ ಚಳ್ಳಕೆರೆ ಪೊಲೀಸರು ಆರೋಪಿಗಳಾದ ಮಂತ್ರವಾದಿ ಶರಣಪ್ಪ ಹಾಗೂ ಪುತ್ರ ಭಾಸ್ಕರ್​​​ನನ್ನು ಬಂಧಿಸಿದ್ದು, ವಿಚಾರಣೆ ಮುಂದುವರಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.