ಚಿತ್ರದುರ್ಗ: ರಸ್ತೆ ಬದಿ ನಿಂತಿದ್ದ ಕೊಳಚೆ ನೀರಿನಲ್ಲಿ ಮಹಿಳೆವೋರ್ವಳು ಸ್ನಾನ ಮಾಡಿರುವ ಘಟನೆ ಜಿಲ್ಲೆಯ ಚಳ್ಳಕೆರೆಯಲ್ಲಿ ನಡೆದಿದೆ.
ಚಿತ್ರದುರ್ಗ ಜಿಲ್ಲೆ ಬರಗಾಲದಿಂದ ಬಳಲುವ ಪ್ರದೇಶವೇನೋ ನಿಜ. ಆದರೆ, ದಿನ ನಿತ್ಯ ಬಳಸಲು ಕಂಗೆಡುವ ಸ್ಥಿತಿಯಂತೂ ನಗರ ಪ್ರದೇಶಗಳಲ್ಲಿ ನಿರ್ಮಾಣವಾಗಿಲ್ಲ. ಅಂತಹದ್ರಲ್ಲಿ ಚಳ್ಳಕೆರೆ ನಗರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಬಳಿ ರಸ್ತೆ ಬದಿಯಲ್ಲಿ ಸಂಗ್ರಹವಾಗಿದ್ದ ನೀರಿನಲ್ಲಿ ಮಹಿಳೆ ಸ್ನಾನಮಾಡಿ ಜನರನ್ನು ದಂಗಾಗಿಸಿದ್ದಾಳೆ.
ಇನ್ನು ಹೀಗೆ ರಸ್ತೆಯಲ್ಲಿ ಕೊಳಚೆ ನೀರಿನಿಮದ ಸ್ನಾನ ಮಾಡಿರುವ ಮಹಿಳೆ ಯಾರು ಎಂದು ವಿಚಾರಿಸಿದಾಗ, ಆಕೆ ಮಾನಸಿಕ ಅಸ್ವಸ್ಥೆ ಎಂದು ಸ್ಥಳೀಯರು ತಿಳಿಸಿದ್ದಾರೆ.