ETV Bharat / state

ವೇದ ಸಿನಿಮಾ ಪ್ರಚಾರ: ಕೋಟೆನಾಡಿಗೆ ಆಗಮಿಸಿದ ಕರುನಾಡ ಚಕ್ರವರ್ತಿ - ವೇದ ಸಿನಿಮಾ ಲೇಟೆಸ್ಟ್ ನ್ಯೂಸ್

ವೇದ ಸಕ್ಸಸ್ ಖುಷಿಯಲ್ಲಿ ಚಿತ್ರತಂಡ - ಮುಂದುವರಿದ ಪ್ರಚಾರ ಕಾರ್ಯ - ಚಿತ್ರದುರ್ಗದಲ್ಲಿ ಶಿವ ರಾಜ್​ಕುಮಾರ್ ರೋಡ್ ಶೋ - ಸಿನಿಮಾ ತಂಡಕ್ಕೆ ಅಭಿಮಾನಿಗಳಿಂದ ಭರ್ಜರಿ ಸ್ವಾಗತ.

shiva rajkumar road show
ಶಿವ ರಾಜ್​ಕುಮಾರ್ ರೋಡ್ ಶೋ
author img

By

Published : Jan 4, 2023, 7:15 PM IST

ಶಿವ ರಾಜ್​ಕುಮಾರ್ ರೋಡ್ ಶೋ

ಚಳ್ಳಕೆರೆ (ಚಿತ್ರದುರ್ಗ): ಸ್ಯಾಂಡಲ್​ವುಡ್​ನ ಹ್ಯಾಟ್ರಿಕ್ ಹೀರೋ ಶಿವ ರಾಜ್​ಕುಮಾರ್ ನಟನೆಯ 125ನೇ ಚಿತ್ರ 'ವೇದ'. ಡಿಸೆಂಬರ್​ 30ರಂದು ತೆರೆ ಕಂಡಿರುವ ಈ ವೇದ ಸಿನಿಮಾ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ವರ್ಷದ ಕೊನೆಯಲ್ಲಿ ಬಿಡುಗಡೆಯಾಗಿರುವ ಈ ಚಿತ್ರ ಕೇವಲ ಮೂರು ದಿನಗಳಲ್ಲಿ ಬಾಕ್ಸ್ ಆಫೀಸ್​​ನಲ್ಲಿ ದಾಖಲೆ ಮಟ್ಟದ ಕಲೆಕ್ಷನ್​ ಮಾಡಿದೆ. ವೇದ ಭರ್ಜರಿ ಯಶಸ್ವಿಗೆ ಚಿತ್ರ ತಂಡ ಸಿನಿಮಾ ಪ್ರಚಾರ ಕಾರ್ಯ ಮುಂದುವರಿಸಿದ್ದು, ಇಂದು ಕೋಟೆನಾಡಿಗೆ ಕರುನಾಡ ಚಕ್ರವರ್ತಿ ಟೀಂ ಎಂಟ್ರಿ ಕೊಟ್ಟಿದೆ.

ಶಿವ ರಾಜ್​ಕುಮಾರ್ ರೋಡ್ ಶೋ: ವೇದ ಸಿನಿಮಾ ಪ್ರಚಾರದ ಭಾಗವಾಗಿ ಇಂದು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ನಗರದ ಕೆಇಬಿ ಮುಂಭಾಗ ನಟ ಶಿವ ರಾಜ್​ಕುಮಾರ್ ಸಾವಿರಾರು ಅಭಿಮಾನಿಗಳ ಸಮ್ಮುಖದಲ್ಲಿ ರೋಡ್ ಶೋ ನೆಡೆಸಿದರು. ಅಭಿಮಾನಿಗಳು ವೇದ ಸಿನಿಮಾ ಸಂಭ್ರಮಾಚರಣೆಯಲ್ಲಿ ಮಿಂದೆದ್ದರು. ಹ್ಯಾಟ್ರಿಕ್​​ ಹೀರೋ ತಮ್ಮ ತಂಡದೊಂದಿಗೆ ಇಂದು ನಗರಕ್ಕೆ ಅಗಮಸಿದ್ದು, ಅವರಿಗೆ ಅಭಿಮಾನಿಗಳು ಭರ್ಜರಿ ಸ್ವಾಗತ ಕೋರಿದರು. ಅಭಿಮಾನಿಗಳು ಘೋಷಣೆಗಳನ್ನು ಕೂಗಿ ಸಂಭ್ರಮಿಸಿದರು.

'ಕನ್ನಡ ಚಿತ್ರರಂಗವನ್ನು ಪ್ರೋತ್ಸಾಹಿಸಿ': ನಟ ಶಿವ ರಾಜ್​ಕುಮಾರ್ ಮಾತನಾಡಿ, ನನ್ನ 125ನೇ ಚಿತ್ರವನ್ನು ಡೈರೆಕ್ಟರ್​ ಎ. ಹರ್ಷ ನಿರ್ದೇಶನ ಮಾಡಿದ್ದು, ಚಿತ್ರ ಮಂದಿರಗಳಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಈ ಚಿತ್ರಕ್ಕೆ ಕರ್ನಾಟಕ ಅಲ್ಲದೇ ತಮಿಳುನಾಡು, ಮುಂಬೈನಲ್ಲಿಯೂ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಇದು ನಮಗೆ ಬಹಳ ಖುಷಿ ತಂದು ಕೊಟ್ಟಿದೆ. ಎಲ್ಲರೂ ಸಿನಿಮಾವನ್ನು ಥಿಯೇಟರ್​ ಹೋಗಿ ವೀಕ್ಷಿಸುವ ಮೂಲಕ ಕನ್ನಡ ಚಿತ್ರರಂಗಕ್ಕೆ ಪ್ರೋತ್ಸಾಹ ನೀಡಬೇಕು. ಇಂದು ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿ ದೇವರುಗಳು ಸೇರಿರುವುದು ನನಗೆ ಸಂತೋಷವಾಗಿದೆ. ಇದೇ ರೀತಿ ನಿಮ್ಮ ಪ್ರೋತ್ಸಾಹ ಮುಂದುವರಿಯಲಿ ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡರು.

ತೆರದ ವಾಹನದಲ್ಲಿ ಮೆರವಣಿಗೆ: ತೆರದ ವಾಹನದಲ್ಲಿ ಮೆರವಣಿಗೆ ನಡೆಯಿತು. ಪ್ರಮುಖ ರಸ್ತೆಯ ಮೂಲಕ ತರಳಿದ ವಾಹನ ವೇದ ಚಲನಚಿತ್ರ ಪ್ರದರ್ಶವಾಗುತ್ತಿರುವ ರಾಮಕೃಷ್ಣ ಚಿತ್ರಮಂದಿರಕ್ಕೆ ತಲುಪಿತು. ಅಲ್ಲಿ ಪ್ರೇಕ್ಷರಿಗೆ ಅಭಿನಂದನೆ ಸಲ್ಲಿಸಿ ಬಳ್ಳಾರಿಯತ್ತ ಪ್ರಯಾಣ ಬೆಳೆಸಿದರು. ಇನ್ನೂ ನಟ ಶಿವ ರಾಜ್​ಕುಮಾರ್​ ಅವರನ್ನು ನೋಡಲು ಅಭಿಮಾನಿಗಳು ಮುಗಿಬಿದ್ದಿದ್ದರು. ರೋಡ್​ ಶೋ ವೇಳೆ ತಳ್ಳಾಟ ನೂಕಾಟ ನಡೆಸಿದರು. ಜನದಟ್ಟಣೆ ನಿಯಂತ್ರಿಸಲು ಪೊಲೀಸರು ಹರಸಹಾಸ ಪಡುವ ಜೊತೆಗೆ ಕೆಲವರಿ ಲಾಠಿ ರುಚಿ ತೋರಿಸಿದರು. ಬಳಿಕ ಶಾಸಕ ಟಿ. ರಘುಮೂರ್ತಿ ಶಾಲು, ಪುಷ್ಪಹಾರ ಹಾಕಿ ನಟ ಶಿವ ರಾಜ್​​ಕುಮಾರ್ ಹಾಗೂ ವೇದ ಚಿತ್ರತಂಡಕ್ಕೆ ಶುಭ ಕೋರಿದರು.

ಇದನ್ನೂ ಓದಿ: ಗೆಲುವಿಗೆ ಇಡೀ ಚಿತ್ರತಂಡ ಕಾರಣ.. ವೇದ 2 ಮಾಡುವ ಆಲೋಚನೆಯಲ್ಲಿದ್ದೇವೆ:ಶಿವಣ್ಣ

ವೇದ ಚಿತ್ರ ಕಥೆ: ಸ್ತ್ರಿಕುಲದ ಮೇಲೆ ನಡೆಯುವ ಅನ್ಯಾಯದ ವಿರುದ್ಧ ಸಿಡಿದೇಳುವುದೇ 'ವೇದ' ಸಿನಿಮಾ ಕಥೆ. ಎ ಹರ್ಷ ಅವರು ಈ ಕಥೆಯನ್ನು 1960 ಹಾಗೂ 1980ರ ಕಾಲಘಟ್ಟಕ್ಕೆ ತಕ್ಕಂತೆ ಹೆಣೆದಿರೋದು ಈ ಚಿತ್ರದ ವಿಶೇಷವಾಗಿದೆ. ಮಹಿಳೆಯರು ಅನ್ಯಾಯ ಆದ ಕ್ಷಣವೇ ಅದರ ವಿರುದ್ಧ ಸಿಡಿದೇಳಬೇಕು ಎಂಬುದೇ ವೇದ ಸಿನಿಮಾ ಸಮಾಜಕ್ಕೆ ಕೊಡುವ ಸಂದೇಶ. ಸಿನಿಮಾದಲ್ಲಿ ಪ್ರಮುಖ ನಟಿಮಣಿಯರ ಆ್ಯಕ್ಷನ್​ ಸೀನ್​​ಗಳು ಸಿನಿಪ್ರಿಯರ ಮನ ಗೆದ್ದಿದೆ.

ಇದನ್ನೂ ಓದಿ: ಚಿತ್ರಮಂದಿರಗಳಲ್ಲಿ ಶಿವಣ್ಣನ 125ನೇ ಚಿತ್ರದ ಅಬ್ಬರ: 'ವೇದ' ಕಲೆಕ್ಷನ್ ಎಷ್ಟು ಗೊತ್ತಾ?​​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.