ETV Bharat / state

ಪದ್ಮಶ್ರೀ ಹಾಜಬ್ಬ ಕೇಂದ್ರಕ್ಕೆ ಎನ್​ಆರ್​ಸಿ ಕುರಿತು ಯಾವ ದಾಖಲೆ ತೋರಿಸಬೇಕು: ಖಾದರ್ ಪ್ರಶ್ನೆ

ಹರೇಕಳ ಹಾಜಬ್ಬ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಅಕ್ಷರವನ್ನೇ ಕಲಿಯದ ಹಾಜಬ್ಬ ಅವರ ಬಳಿ ಎನ್​ಆರ್​ಸಿಗೆ ಸಂಬಂಧಿಸಿದಂತೆ ಯಾವ ದಾಖಲೆಗಳನ್ನು ಪಡೆಯುತ್ತೀರಿ ಎಂದು ಮಾಜಿ ಸಚಿವ ಯು ಟಿ ಖಾದರ್ ಅವರು ಕೇಂದ್ರ ಸರ್ಕಾರಕ್ಕೆ ಪ್ರಶ್ನಿಸಿದ್ದಾರೆ.

author img

By

Published : Jan 27, 2020, 6:41 PM IST

Updated : Jan 27, 2020, 7:27 PM IST

ut-khader
ut-khader

ಚಿತ್ರದುರ್ಗ: ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿರುವ ಹರೇಕಳ ಹಾಜಬ್ಬ ಅವರು ಅನಕ್ಷರಸ್ಥ. ಸಿಎಎ ಮತ್ತು ಎನ್​ಆರ್​ಸಿ ಜಾರಿಗೆ ತಂದಿರುವ ಕೇಂದ್ರ ಸರ್ಕಾರ, ಶಾಲೆಗೆ ಹೋಗದ ಹಾಜಬ್ಬ ಅಂಥವರಿಂದ ಯಾವ ದಾಖಲೆಗಳನ್ನು ಪಡೆಯುತ್ತದೆ ಎಂದು ಮಾಜಿ ಸಚಿವ ಯು ಟಿ ಖಾದರ್ ಪ್ರಶ್ನಿಸಿದ್ದಾರೆ.

ಮಾಜಿ ಸಚಿವ ಯು ಟಿ ಖಾದರ್

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪದ್ಮಶ್ರೀ ಪ್ರಶಸ್ತಿಗೂ, ಪೌರತ್ವಕ್ಕೂ ಸಂಬಂಧವಿದ್ದು, ಪದ್ಮಶ್ರೀ ಪ್ರಶಸ್ತಿ ಕೊಟ್ಟ ಅಕ್ಷರ ಸಂತ ಹಾಜಬ್ಬಗೆ ಹೇಗೆ ಪೌರತ್ವ ಕೊಡುತ್ತೀರಿ? ಹಾಜಬ್ಬ, ತುಳಸಿ ಗೌಡರಿಗೆ ಪದ್ಮಶ್ರೀ ಕೊಟ್ಟಿರೋದಕ್ಕೆ ಕೇಂದ್ರ ಸರ್ಕಾರವನ್ನ ಅಭಿನಂದಿಸುತ್ತೇನೆ, ನಾಳೆ ಪೌರತ್ವ ಸಾಬೀತುಪಡಿಸಲು ಹಾಜಬ್ಬರನ್ನೂ ಸರತಿ ಸಾಲಲ್ಲಿ ನಿಲ್ಲಿಸುತ್ತೀರಾ? ಹಾಜಬ್ಬ ಶಾಲೆಗೆ ಹೋಗಲು ಆಗಿರಲಿಲ್ಲ, ಬಡತನ ಇತ್ತು. ಓದು, ಬರಹ ಇಲ್ಲ, ನೀವು ದಾಖಲೆ ಕೇಳಿದ್ರೆ ಅವರು ಹೇಗೆ ದಾಖಲಾತಿ ಕೊಡ್ತಾರೆ ಎಂದು ಎನ್ಆರ್​ಸಿ, ಸಿಎಎ ವಿರುದ್ಧ ಆಕ್ರೋಶ ಹೊರಹಾಕಿದರು.

ಎನ್ಆರ್​ಸಿ ಕಾಯ್ದೆ ಬಗ್ಗೆ ಪ್ರತಿಕ್ರಿಯಿಸಿದ ಖಾದರ್​, ದೇಶದಲ್ಲಿ ಎನ್ಆರ್​ಸಿ ಜಾರಿ ಆಗುತ್ತೋ ಇಲ್ಲವೋ ಎಂಬುದನ್ನು ಮೊದಲು ದೇಶದ ಜನರಿಗೆ ಹೇಳಿ. ಇಂದು ಮಂಗಳೂರಲ್ಲಿ ಎನ್​ಆರ್​ಸಿ ಮತ್ತು ಸಿಎಎ ಪರ ಜಾಗೃತಿ ಜಾಥಾ ನಡೆಯುತ್ತಿದ್ದು, ಅದರಲ್ಲಿ ರಕ್ಷಣಾ ಸಚಿವ ರಾಜನಾಥ್​ ಸಿಂಗ್​ ಪಾಲ್ಗೊಳ್ಳುತ್ತಿದ್ದಾರೆ. ಅವರು ಮೊದಲು ಎನ್ಆರ್​ಸಿ ಮತ್ತು ಸಿಎಎ ಕುರಿತು ಜನರಿಗೆ ನಿಜವಾದ ಅಂಶಗಳನ್ನು ವಿವರಿಸಲಿ ಎಂದು ಖಾದರ್​ ಒತ್ತಾಯಿಸಿದರು.

Intro:ಹಜಬ್ಬಾಗೆ ಪದ್ಮಶ್ರೀ ಕೊಟ್ಟು ಬೀದಿಲಿ ನಿಲ್ಲಿಸತ್ತಾ ಕೇಂದ್ರ ಸರ್ಕಾರ...!

ಆ್ಯಂಕರ್:- ಹಜಬ್ಬಾಗೆ ಪದ್ಮಶ್ರೀ ಕೊಟ್ಟು ಬೀದಿಲಿ ನಿಲ್ಲಿಸತ್ತಾ ಕೇಂದ್ರ ಸರ್ಕಾರ, ಅವರು ಶಾಲೆಗೆ ಹೋಗಿಲ್ಲ, ಅವರ ಬಳಿ ದಾಖಲೆಗಳಿಲ್ಲ ಹಜಬ್ಬಾಗೆ ಹೇಗೆ ಪೌರತ್ವ ಕೊಡ್ತಿರಿ ಎಂದು ಮಾಜಿ ಸಚಿವ ಯು ಟಿ ಖಾದರ್ ಕೇಂದ್ರ ಸರ್ಕಾರಕ್ಕೆ ಪ್ರಶ್ನಿಸಿದರು. ಚಿತ್ರದುರ್ಗದಲ್ಲಿ ಮಾತನಾಡಿದ ಅವರು
ಪದ್ಮಶ್ರೀ ಪ್ರಶಸ್ತಿಗೂ, ಪೌರತ್ವಕ್ಕೂ ಸಂಬಂಧವಿದ್ದು, ಪದ್ಮಶ್ರೀ ಪ್ರಶಸ್ತಿ ಕೊಟ್ಟ ಅಕ್ಷರ ಸಂತ ಹಜಬ್ಬಗೆ ಹೇಗೆ ಪೌರತ್ವ ಕೊಡ್ತಿರಿ
ಹಜಬ್ಬ, ತುಳಸಿ ಗೌಡರಿಗೆ ಪದ್ಮಶ್ರೀ ಕೊಟ್ಟಿರೋದಕ್ಕೆ ಕೇಂದ್ರ ಸರ್ಕಾರವನ್ನ ಅಭಿನಂದಿಸುತ್ತೇನೆ, ನಾಳೆ ಪೌರತ್ವ ಸಾಬೀತುಪಡಿಸಲು ಹಜಬ್ಬಗೂ ಸರತಿ ಸಾಲಲ್ಲಿ ನಿಲ್ಲಿಸ್ತಿರಾ...!
ಹಜಬ್ಬ ಶಾಲೆಗೆ ಹೋಗಲು ಆಗಿರಲಿಲ್ಲ, ಬಡತನ ಇತ್ತು. ಓದು, ಬರಹ ಇಲ್ಲ, ನೀವು ದಾಖಲೆ ಕೇಳಿದ್ರೆ ಅವರು ಹೇಗೆ ದಾಖಲಾತಿ ಕೊಡ್ತಾರೆ ಎಂದು ಎನ್ಆರ್ಸಿ,ಸಿಎಎ ವಿರುದ್ಧ ಆಕ್ರೋಶ ಹೊರಹಾಕಿದ್ರು. ಇನ್ನೂ ಸರ್ಕಾರಕ್ಕೆ ಮತ್ತಿ ಇಲ್ಲ, ಜನರಿಗೆ ಗತಿ ಇಲ್ಲ ಎಂಬಂತಾಗಿದ್ದು, ಪ್ರಕೃತಿ ವಿಕೋಪಕ್ಕೆ ಒಳಗಾದವರಿಗೆ ಕೇದ್ರದಿಂದ ಇನ್ನೂ ಸೂಕ್ತ ಪರಿಹಾರ ಸಿಕ್ಕಿಲ್ಲ, ಬಾಂಬ್ ಇಟ್ಟವರಿಗೆ ಮಾನಸಿಕ ಅಸ್ವಸ್ಥರು ಅನ್ನುತ್ತಾರೆ ಎಂದು ಬಿಜೆಪಿ ರಾಜ್ಯಧ್ಯಕ್ಷ ನಳೀನ್ ಕುಮಾರ್ ಕಟೀಲು ಗೆ ಟಾಂಗ್ ನೀಡಿದ್ರು. ಇನ್ನೂ ಎನ್ ಆರ್ಸಿ ಕಾಯ್ದೆ ಬಗ್ಗೆ ಪ್ರತಿಕ್ರಿಯಿಸಿದ ಅವರು ದೇಶದಲ್ಲಿ NRC ಜಾರಿ ಆಗುತ್ತೋ ಇಲ್ಲ ಅದನ್ನು ಮೊದಲು ದೇಶದ ಜನರಿಗೆ ಹೇಳಿ, ಮೊದಲು ಎನ್ಆರ್ಸಿ ಕಾಯ್ದೆಯನ್ನು ಅಸ್ಸಾಂ ನಲ್ಲಿ ಜಾರಿ ತನ್ನಿ ನಂತರ ದೇಶಕ್ಕೆ ಜಾರಿ ಮಾಡಿ ಎಂದರು.

ಫ್ಲೊ....

ಬೈಟ್01:- ಯುಟಿ ಖಾದರ್, ಮಾಜಿ ಸಚಿವ, ಶಾಸಕBody:Ut khadarConclusion:Avb
Last Updated : Jan 27, 2020, 7:27 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.