ಚಿತ್ರದುರ್ಗ: ಕ್ರೂಸರ್ ಮತ್ತು ಇಂಡಿಕಾ ಕಾರು ನಡುವೆ ನಡೆದ ಮುಖಾಮುಖಿ ಡಿಕ್ಕಿಯಲ್ಲಿ ಒರ್ವ ಸ್ಥಳದಲ್ಲೇ ಸಾವನ್ನಪ್ಪಿದ್ದು, ನಾಲ್ವರಿಗೆ ಗಾಯಗಳಾಗಿರುವ ಘಟನೆ ಜಿಲ್ಲೆಯ ಚಳ್ಳಕೆರೆ ನಗರದ ಸಾಣಿಕೆರೆ ಗ್ರಾಮದ ಸಮೀಪ ನಡೆದಿದೆ.
ಇಂಡಿಕಾ ಕಾರು ಚಾಲಕ ಹನುಮಂತಪ್ಪ (29) ಮೃತ ದುರ್ದೈವಿ. ರಾಯಚೂರು ಜಿಲ್ಲೆಯ ದೇವದುರ್ಗದಿಂದ ಬೆಂಗಳೂರಿಗೆ ಹೊರಟಿದ್ದ ಕಾರು, ಚಳ್ಳಕೆರೆ ಕಡೆ ಚಲಿಸುತ್ತಿದ್ದ ಕ್ರೂಸರ್ಗೆ ಅಪ್ಪಳಿಸಿದ ಪರಿಣಾಮ ಈ ಅವಘಡ ನಡೆದಿದೆ.
ಗಾಯಾಳುಗಳನ್ನು ಚಳ್ಳಕೆರೆ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಳ್ಳಕೆರೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.