ಚಿತ್ರದುರ್ಗ: ತಲೆ ಮೇಲೆ ಕಲ್ಲು ಹಾಕಿ ಮೂವರನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಗ್ರಾಮದ ಬಳಿ ನಡೆದಿದೆ.
ಮೂರು ಕೊಲೆಗೆ ಇಡೀ ಚಿತ್ರದುರ್ಗ ಜಿಲ್ಲೆ ಬೆಚ್ಚಿಬಿದ್ದಿದ್ದು, ಹಂದಿ ಸಾಕಣೆ ಮಾಡಿಕೊಂಡಿದ್ದ ಮೂವರನ್ನು ಕೊಲೆ ಮಾಡಲಾಗಿದೆ. ಹಂದಿ ಕಳ್ಳತನಕ್ಕೆ ಬಂದಿದ್ದ ಕಳ್ಳರಿಂದ ಈ ಕೃತ್ಯ ಎಸಗಿರಬಹುದೆಂದು ಪೊಲೀಸರು ಶಂಕೆ ವ್ಯಕ್ತಪಡಿಸುತ್ತಿದ್ದಾರೆ.
![three murder, three murder in Chitradurga, Chitradurga three murder, Chitradurga three murder news, ಮೂರು ಕೊಲೆ, ಚಿತ್ರದುರ್ಗದಲ್ಲಿ ಮೂರು ಕೊಲೆ, ಚಿತ್ರದುರ್ಗ ಮೂರು ಕೊಲೆ, ಚಿತ್ರದುರ್ಗ ಮೂರು ಕೊಲೆ ಸುದ್ದಿ,](https://etvbharatimages.akamaized.net/etvbharat/prod-images/kn-ctd-01-17-03murder-av-7204336_17082020122101_1708f_1597647061_253.jpg)
ಮೃತರನ್ನು ಮಾರೇಶ (50), ಯಲ್ಲೇಶ (30), ಸೀನಪ್ಪ (30) ಎಂದು ಗುರುತಿಸಲಾಗಿದ್ದು, ನಾಯಕನಹಟ್ಟಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಇನ್ನೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೇರಿದಂತೆ ನಾಯಕನಹಟ್ಟಿ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುವ ಮೂಲಕ ಪ್ರಕರಣ ದಾಖಲಿಸಿಕೊಂಡಿದ್ದಾರೆ.