ETV Bharat / state

ಯೋಗವನ ಬೆಟ್ಟದ ಉತ್ತರಾಧಿಕಾರಿ ಕಲಹ: ಪ್ರಚಾರಕ್ಕಾಗಿ ವಿಷ ಕುಡಿದರೇ ಸ್ವಾಮೀಜಿ!?

author img

By

Published : Feb 14, 2021, 9:50 AM IST

ಚಿತ್ರದುರ್ಗದ ಯೋಗವನ ಬೆಟ್ಟದ ಉತ್ತರಾಧಿಕಾರಿ ವಿಷಯದಲ್ಲಿ ಶಾಸಕ, ಪೀಠಾಧಿಪತಿ ಹಾಗೂ ಸ್ವಾಮೀಜಿಗಳ ನಡುವಿನ ಮುಸುಕಿನ ಗುದ್ದಾಟ ಹೊರ ಬಿದ್ದಿದೆ. ಯೋಗವನ ಬೆಟ್ಟದ ಉತ್ತರಾಧಿಕಾರಿ ವಿಷಯದಲ್ಲಿ ಸ್ವಾಮೀಜಿಯೊಬ್ಬರು ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಸದ್ಯ ಅವರನ್ನು ಆಸ್ಪತ್ರೆಗೆ ದಾಖಲಾಗಿದೆ.

Thipperudra swamy
ಸ್ವಾಮೀಜಿ

ಚಿತ್ರದುರ್ಗ: ಯೋಗವನ ಬೆಟ್ಟಕ್ಕೆ ತನ್ನನ್ನು ಉತ್ತರಾಧಿಕಾರಿ ಮಾಡದೆ ಮೋಸ ಮಾಡಿದ್ದಾರೆ ಎಂದು ತಿಪ್ಪೇರುದ್ರ ಸ್ವಾಮೀಜಿ ಸಚಿವ ಶ್ರೀರಾಮುಲು ಮುಂದೆ ವಿಷ ಸೇವಿಸಿ ಶನಿವಾರ ಆತ್ಮಹತ್ಯೆಗೆ ಯತ್ನಿಸಿದ್ದರು. ಪೀಠಾಧ್ಯಕ್ಷ ವಿಚಾರಲ್ಲಿ ಮಾಜಿ ಶಾಸಕ ಹಾಗೂ ಇತರರು ಮೋಸ ಮಾಡಿ ಮಠದಿಂದ ಹೊರ ಹಾಕಲು ಯತ್ನಿಸುತ್ತಿದ್ದಾರೆ ಎಂದು ಸ್ವಾಮೀಜಿ ಆರೋಪಿಸಿದ್ದರು.

ಯೋಗವನ ಬೆಟ್ಟದ ಉತ್ತರಾಧಿಕಾರಿ ಕಲಹ: ವಿಷ ಸೇವಿಸಿ ಆಸ್ಪತ್ರೆ ಸೇರಿದ ಸ್ವಾಮೀಜಿ

ಚಿತ್ರದುರ್ಗದ ಯೋಗವನ ಬೆಟ್ಟದ ಉತ್ತರಾಧಿಕಾರಿ ವಿಷಯದಲ್ಲಿ ಮಾಜಿ ಶಾಸಕ ಬಸವರಾಜ್ ಹಾಗೂ ಯೋಗವನ ಬೆಟ್ಟದ ಪೀಠಾಧಿಪತಿ ಬಸವಕುಮಾರ ಶ್ರೀ, ಮಾಟಮಂತ್ರ, ಷಡ್ಯಂತರ ರೂಪಿಸಿ ಮೋಸ ಮಾಡಿದ್ದಾರೆ ಎಂಬ ಆರೋಪ ಹೊತ್ತುಕೊಂಡಿದ್ದಾರೆ. ಆ ಕಾರಣಕ್ಕಾಗಿಯೇ ನಿನ್ನೆ ಸಚಿವ ಶ್ರೀ ರಾಮುಲು ಅವರ ಮುಂದೆ ಸುಜ್ಞಾನ ಮಂಟಪದ ತಿಪ್ಪೇರುದ್ರ ಸ್ವಾಮೀಜಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು.

Thipperudra swamy
ಸ್ವಾಮೀಜಿ ಬರೆದ ಡೆತ್​ನೋಟ್

ನ್ಯಾಯ ನೀಡುವಂತೆ ಶ್ರೀರಾಮುಲು ಅವರ ಬಳಿ ಮನವಿ ನೀಡಲು ಬಂದಿದ್ದ ತಿಪ್ಪೇರುದ್ರಸ್ವಾಮಿ ಏಕಾಏಕಿ ವಿಷ ಕುಡಿದು, ನನಗೆ ಅನ್ಯಾಯವಾಗಿದೆ. ನ್ಯಾಯ ಕೊಡಿಸಿ ಎಂದು ಅಕ್ರೋಶ ಹೊರಹಾಕಿದ್ದರು. ಸ್ವಾಮೀಜಿ ವಿಷ ಸೇವನೆ ಮಾಡುತ್ತಿದ್ದಂತೆ ಸ್ಥಳದಲ್ಲಿದ್ದ ಪೊಲೀಸರು ಶ್ರೀಗಳನ್ನ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಕನಕಪುರದ ಯೋಗವನಬೆಟ್ಟದ ಸಿದ್ದಲಿಂಗ ಶ್ರೀಗಳ ಲಿಂಗೈಕ್ಯರಾದ ಬಳಿಕ ಬಸವಕುಮಾರ ಸ್ವಾಮೀಜಿ ಪೀಠಾಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಕನಕಪುರ ಯೋಗವನ ಬೆಟ್ಟದ ಪೀಠಾಧ್ಯಕ್ಷರಾಗಿ ಸ್ಥಾನ ಕೈತಪ್ಪಿದ್ದು, ಅಧಿಕಾರ, ತೋಳ್ಬಲ, ಹಣ ಇದ್ದೋರನ್ನು ಮಾತ್ರ ಪೀಠಾಧ್ಯಕ್ಷರನ್ನಾಗಿ ಮಾಡಲಾಗುತ್ತದೆ. ಎಲ್ಲದಕ್ಕೂ ಮಾಜಿ ಶಾಸಕ ಬಸವರಾಜ್ ಕಾರಣ ಎಂದು ಆರೋಪಿಸಿದ್ದಾರೆ‌.

ಡೆತ್​ನೋಟ್ ಬರೆದ ಸ್ವಾಮೀಜಿ:

ಪೀಠಾಧ್ಯಕ್ಷ ವಿಚಾರವಾಗಿ ಮಾಜಿ ಶಾಸಕ ಹಾಗೂ ಈಗಿರುವ ಬಸವ ಕುಮಾರ ಶ್ರೀಗಳು ಅನ್ಯಾಯ ಮಾಡಿದ್ದಾರೆ. ಅಲ್ಲದೆ ಷಡ್ಯಂತರ ರೂಪಿಸಿ, ನನ್ನನ್ನು ಯೋಗವನದಿಂದ ಓಡಿಸಿದ್ದಾರೆ. ನನಗೆ ನ್ಯಾಯಬೇಕು. ಅನ್ಯಾಯ ಮಾಡಿದವ್ರಿಗೆ ಶಿಕ್ಷೆಯಾಗಬೇಕು ಎಂದು ವಿಷ ಸೇವಿಸಿದ ತಿಪ್ಪೇರುದ್ರಸ್ವಾಮಿ ಡೆತ್​ನೋಟ್​ನಲ್ಲಿ ಉಲ್ಲೇಖಿಸಿದ್ದಾರೆ.

ಮಾಜಿ ಶಾಸಕ ಹೇಳೋದೇನು?

ಸ್ವಾಮೀಜಿ ಕಳೆದ ಹಲವು ದಿನಗಳಿಂದ ಯೋಗವನ ಬೆಟ್ಟದ ಮಠದ ಮುಂದೆ ಪ್ರತಿಭಟನೆ ಮಾಡುತ್ತಿದ್ದರು. ಶ್ರೀಗಳು ಈ ಮಟ್ಟಕ್ಕೆ ಹೋಗಬಾರದಿತ್ತು. ಈಗಾಗಲೇ ದಿವಂಗತ ಶ್ರೀ ಸಿದ್ದಲಿಂಗೇಶ್ವರ ಸ್ವಾಮೀಜಿಗಳಿಂದ 10 ಲಕ್ಷ ರೂ‌. ಪರಿಹಾರ ಪಡೆದು ಮಠದಿಂದ ಸಂಬಂಧ ಬೇಡ ಎಂದು ಹೊರ ನಡೆದಿದ್ದಾರೆ ಎಂದು ಮಠದ ಟ್ರಸ್ಟ್ ಮುಖ್ಯಸ್ಥರಾದ ಚಿತ್ರದುರ್ಗ ಮಾಜಿ ಶಾಸಕ ಬಸವರಾಜ್ ಅವರು ತಿಪ್ಪೇರುದ್ರಸ್ವಾಮಿ ಮಾಡಿರುವ ಆರೋಪವನ್ನು ತಳ್ಳಿ ಹಾಕಿದ್ದಾರೆ.

ನಾಟವಾಡ್ತಿದ್ದಾರೆ....

ತಿಪ್ಪೇರುದ್ರಸ್ವಾಮಿ ಪ್ರಚಾರಕ್ಕಾಗಿ ಮಾಡುತಿದ್ದಾರೆಂದು ಮಾಜಿ ಶಾಸಕ ಬಸವರಾಜ್ ಪ್ರತ್ಯಾರೋಪ ಮಾಡಿದ್ದಾರೆ. ಚಿತ್ರದುರ್ಗ ಯೋಗವನ ಬೆಟ್ಟದ ಪೀಠಾಧ್ಯಕ್ಷ ಬಸವ ಕುಮಾರ ಸ್ವಾಮೀಜಿ ಬಳಿ ಬಂದು ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದಿತ್ತು‌. ವಿಷ ಕುಡಿಯುವ ಹಂತಕ್ಕೆ ಹೋಗಿ ಪ್ರಚಾರಗಿಟ್ಟಿಸಿಕೊಳ್ಳುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಜಿಲ್ಲಾಸ್ಪತ್ರೆ ದಾಖಲಾದ ಸ್ವಾಮೀಜಿಯನ್ನ ಹೆಚ್ಚಿನ ಚಿಕಿತ್ಸೆಗಾಗಿ ದಾವಣಗೆರೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸರ ತನಿಖೆಯಿಂದ ಮಾತ್ರ ಘಟನೆಯ ಸತ್ಯಾಸತ್ಯತೆ ಹೊರ ಬರಬೇಕಿದೆ.

ಇದನ್ನೂ ಓದಿ: ಸಚಿವ ರಾಮುಲು ಎದುರೇ ಸ್ವಾಮೀಜಿ ಆತ್ಮಹತ್ಯೆ ಯತ್ನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.