ಚಿತ್ರದುರ್ಗ: ಮೈಸೂರು ಹಾಗೂ ಹೆಚ್ ಡಿ ಕೋಟೆ ಕಾರ್ಯಕ್ರಮದಿಂದ ತಡರಾತ್ರಿ 12 ಗಂಟೆಗೆ ಬಂದ ಕಾರಣ ಜಿಲ್ಲಾಸ್ಪತ್ರೆಯ ಕುಂದು ಕೊರತೆಗಳನ್ನ ರೋಗಿಗಳಿಂದಲೇ ಆಲಿಸಲು ಸಾಧ್ಯವಾಗದೆ ವಾಸ್ತವ್ಯ ಹೂಡಿ ಬೆಳಗ್ಗೆ ಸಮಸ್ಯೆಗಳನ್ನು ವಿಚಾರಿಸುವುದಾಗಿ ಆರೋಗ್ಯ ಸಚಿವ ಬಿ. ಶ್ರೀರಾಮುಲು ತಿಳಿಸಿದರು.
ಕಳೆದ ಬಾರಿ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದಾಗ ಸಾಕಷ್ಟು ಬದಲಾವಣೆ ಮಾಡಲು ಸೂಚನೆ ನೀಡಿದ್ದೆ. ಬಡ ರೋಗಿಗಳಿಂದ ಲಂಚ ಸ್ವೀಕಾರ ಮಾಡುವವರನ್ನು ಕ್ಷಮಿಸುವುದಿಲ್ಲ, ಹಾಗೇನಾದರೂ ಲಂಚ ಸ್ವೀಕರಿಸಿದರೆ ಅಂತವರ ವಿರುದ್ಧ ಕಠಿಣ ಕ್ರಮ ಜರುಗಿಸುವುದಾಗಿ ತಿಳಿಸಿದರು.
ಹೊರಗುತ್ತಿಗೆ ಆಧಾರದ ಮೇಲೆ ಡಿ ದರ್ಜೆಯ ಕೆಲಸಗಾರಿಗೆ ಮುಂದಿನ ದಿನಗಳಲ್ಲಿ ಅನುಕೂಲ ಮಾಡಿಕೊಡುವುದಾಗಿ ಹೇಳಿದರು. ತಡರಾತ್ರಿ ಬಂದ ಕಾರಣ ಯಾವುದೇ ಸಮಸ್ಯೆ ಕುರಿತು ಚರ್ಚಿಸದೆ ಆಸ್ಪತ್ರೆಯ ವಿಐಪಿ ವಾರ್ಡ್ನ ಎಸಿ ಕೊಠಟಿಗೆ ಹೋಗಿ ನಿದ್ರೆಗೆ ಜಾರಿದರು.