ಚಿತ್ರದುರ್ಗ: ಜಿಲ್ಲೆಯ ಹೊಸದುರ್ಗ ತಾಲೂಕಿನ ಕಂಚಿಪುರ ಗ್ರಾಮದ ಕಂಚಿ ದೇವಾಲಯದಲ್ಲಿ ಎರಡು ಹೆಬ್ಬಾವುಗಳು ಪ್ರತ್ಯಕ್ಷವಾಗಿದ್ದು, ಭಕ್ತರಲ್ಲಿ ಆತಂಕ ಮೂಡಿಸಿದ್ದವು.
ಗುರುವಾರ ಬೆಳಿಗ್ಗೆ ಭಕ್ತರು ನಿತ್ಯ ಪೂಜೆಗಾಗಿ ಬೆಟ್ಟದ ಕಂಚಿ ದೇವಸ್ಥಾನಕ್ಕೆ ತೆರಳಿದ್ದಾರೆ. ದೇವಾಲಯದ ಪ್ರಾಂಗಣ ಹಾಗೂ ಗರ್ಭ ಗುಡಿಯಲ್ಲಿನ ಹೆಬ್ಬಾವುಗಳನ್ನು ನೋಡಿ ಗಾಬರಿಯಾಗಿದ್ದಾರೆ.
ಯಾವುದೇ ಉರಗಗಳು ದೇವಸ್ಥಾನದ ಒಳಗೆ ಬಾರದಂತೆ ಸೂಕ್ತ ಕ್ರಮ ಕೈಗೊಳ್ಳಲು ಗ್ರಾಮಸ್ಥರು ಅರಣ್ಯ ಇಲಾಖೆಗೆ ಮನವಿ ಮಾಡಿದ್ದಾರೆ ಎನ್ನಲಾಗಿದೆ.