ಚಿತ್ರದುರ್ಗ: ಗೋಶಾಲೆಗಳಲ್ಲಿ ಕೆಲಸ ಮಾಡಿದ್ದ ಕಾರ್ಮಿಕರಿಗೆ ಮೊಳಕಾಲ್ಮೂರು ತಾಲೂಕು ಆಡಳಿತ ಕೂಲಿ ನೀಡದೆ ಸತಾಯಿಸುತ್ತಿದೆ ಎಂದು ಆರೋಪಿಸಿ ಕಾರ್ಮಿಕರು ಪ್ರತಿಭಟನೆ ನಡೆಸಿದರು.
ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ಮಾರಮ್ಮನಹಳ್ಳಿ ಹಾಗೂ ಮುತ್ತಿಗಾರನ ಹಳ್ಳಿಯಲ್ಲಿರುವ ಗೋಶಾಲೆಗಳಲ್ಲಿ ಸುಮಾರು ಮೂವತ್ತು ಜನ ಕಾರ್ಮಿಕರು ಕೆಲಸ ಮಾಡುತ್ತಾರೆ. ಆದ್ರೆ ಕೂಲಿ ನೀಡಿಲ್ಲ. ಆರು ತಿಂಗಳ ಕಾಲ ಕೂಲಿ ಇಲ್ಲದೆ ಜೀವನ ನಡೆಸಲು ಕಷ್ಟವಾಗಿದೆ ಎಂದು ಜಿಲ್ಲಾಧಿಕಾರಿ ಕಚೇರಿಯ ಕದ ತಟ್ಟಿದ್ದಾರೆ.
ಆರು ತಿಂಗಳ ಕಾಲ ದುಡಿಸಿಕೊಂಡ ತಾಲೂಕು ಆಡಳಿತಕ್ಕೆ ಕೂಲಿ ನೀಡುವಂತೆ ಕಾಂರ್ಮಿಕರು ಜಿಲ್ಲಾಧಿಕಾರಿ ಕಚೇರಿ ಬಳಿ ಮೌನ ಪ್ರತಿಭಟನೆ ನಡೆಸಿದರು. ಸಿಪಿಐ ಪಕ್ಷದಿಂದ ಮೌನ ಪ್ರತಿಭಟನೆ ಹಮ್ಮಿಕೊಳ್ಳಲಾಗಿದ್ದು, ಕೂಲಿ ಹಣವನ್ನು ತಕ್ಷಣ ನೀಡಿವಂತೆ ಪಟ್ಟು ಹಿಡಿದರು.
ಸ್ಥಳಕ್ಕೆ ಅಪರ ಜಿಲ್ಲಾಧಿಕಾರಿ ಸಂಗಪ್ಪ ಭೇಡಿ ನೀಡಿ ಸಮಸ್ಯೆ ಆಲಿಸುವ ಮುಖೇನ ಮನವಿ ಪಡೆದು ಮೊಳಕಾಲ್ಮೂರು ತಾಪಂ ಇಒಗೆ ಸಮಸ್ಯೆ ಬಗೆಹರಿಸುವಂತೆ ತಿಳಿಸಲಾಗುವುದು ಎಂದು ಭರವಸೆ ನೀಡಿದರು.