ಚಿತ್ರದುರ್ಗ: ದೇಶದಲ್ಲಿ ಲಾಕ್ಡೌನ್ ಇದ್ದರೂ ಕೂಡ ಜನರಿಗೆ ತೊಂದರೆಯಾಗದಿರಲಿ ಎಂದು ಸರ್ಕಾರ ಮಾಂಸದ ಅಂಗಡಿಗಳನ್ನು ತೆರಯಲು ಅನುಮತಿ ನೀಡಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ಮಾಂಸ ಖರೀದಿ ಮಾಡಿ ಎಂದಿದೆ. ಆದರೆ ಮೀನಿಗಾಗಿ ಇಲ್ಲೊಂದು ಗ್ರಾಮದ ಜನರು ನಾ ಮುಂದು ತಾ ಮುಂದು ಎಂದು ಮುಗಿಬಿದ್ದಿದ್ದಾರೆ.
ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕಿನ ತಾಳ್ಯ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಅಂತರಕಾಯ್ದುಕೊಳ್ಳದೆ ಮೀನು ಖರೀದಿಸಲು ಗ್ರಾಮಸ್ಥರು ಮುಂದಾಗಿದ್ದಾರೆ. ಗ್ರಾಮದ ಹೊರ ಹೊಲಯದಲ್ಲಿರೋ ಕೆರೆಯಲ್ಲಿ ಮೀನಿಗಾಗಿ ಜನರು ನಾ ಮುಂದು ತಾ ಮುಂದು ಎಂದು ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಮೀನಿಗಾಗಿ ದುಂಬಾಲು ಬಿದ್ದಿದ್ದು, ಜೀವದ ಮೇಲೆ ಆಸೆ ಇಲ್ಲ ಎಂಬಂತೆ ವರ್ತಿಸುತ್ತಿದ್ದಾರೆ.
ಕೊರೊನಾ ತಡೆಗೆ ಸರ್ಕಾರ ಏನೇ ಕ್ರಮ ಕೈಗೊಂಡ್ರು ಜನರು ಮಾತ್ರ ಕ್ಯಾರೇ ಎನ್ನದೇ ಇರುವುದು ಸಾರ್ವಜನಿಕ ವಲಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.