ETV Bharat / state

ಬಸವೇಶ್ವರ ಅಭಿವೃದ್ಧಿ ನಿಗಮ ಎಂದು ಬದಲಾಯಿಸಿ: ಸಾಣೇಹಳ್ಳಿ ಪಂಡಿತಾರಾಧ್ಯ ಸ್ವಾಮೀಜಿ

ವೀರಶೈವ-ಲಿಂಗಾಯತ ಅಭಿವೃದ್ಧಿ ನಿಗಮವನ್ನು ಬಸವೇಶ್ವರ ಅಭಿವೃದ್ಧಿ ನಿಗಮ ಎಂದು ಬದಲಾಯಿಸಬೇಕು ಎಂದು ಸಾಣೇಹಳ್ಳಿ ಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಒತ್ತಾಯಿಸಿದರು.

sanehalli panditharadhya swamiji
ಸಾಣೇಹಳ್ಳಿ ಪಂಡಿತಾರಾದ್ಯ ಸ್ವಾಮೀಜಿ
author img

By

Published : Nov 17, 2020, 7:29 PM IST

ಚಿತ್ರದುರ್ಗ: ಎಲ್ಲರಿಗೂ ಗೊತ್ತಿರುವಂತೆ ಲಿಂಗಾಯತ ಹಾಗೂ ವೀರಶೈವರಲ್ಲಿ ಜಗಳವಿದೆ. ದೇವರಾಜ್ ಅರಸು, ಅಂಬೇಡ್ಕರ್ ನಿಗಮ ಎಂಬಂತೆ ಈ ನಿಗಮಕ್ಕೆ (ವೀರಶೈವ-ಲಿಂಗಾಯತ) ಬಸವೇಶ್ವರ ಅಭಿವೃದ್ಧಿ ನಿಗಮ ಎಂದು ಬದಲಾಯಿಸಬೇಕು ಎಂದು ತರಳಬಾಳು ಸಾಣೇಹಳ್ಳಿ ಶಾಖಾ ಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಸರ್ಕಾರಕ್ಕೆ ಮನವಿ ಮಾಡಿದರು.

ಮಠದಲ್ಲಿ ವಿಡಿಯೋವೊಂದನ್ನು ಮಾಡಿ ಮಾತನಾಡಿರುವ ಅವರು, ಜನಪರವಾಗಿರುವ ರಾಜಕೀಯೇತರ ವ್ಯಕ್ತಿಯನ್ನು ಈ ನಿಗಮದ ಅಧ್ಯಕ್ಷರನ್ನಾಗಿ ನೇಮಿಸಲಿ. ಲಿಂಗಾಯುತ ಸಮುದಾಯಕ್ಕೆ ಶೇ. 16ರಷ್ಟು ಮೀಸಲಾತಿ ನೀಡಬೇಕು. ಕೇಂದ್ರದ ಒಬಿಸಿ ಪಟ್ಟಿಗೆ ಅನೇಕ ಲಿಂಗಾಯತರು ಸೇರಿಲ್ಲ, ಅವರನ್ನು ಸೇರಿಸಬೇಕು. 2ಎ ಸೌಲಭ್ಯ ದೊರೆಯುವ ಪ್ರಯತ್ನ ಸರ್ಕಾರ ಮಾಡಲಿ ಎಂದು ಒತ್ತಾಯಿಸಿದರು.

ಸಾಣೇಹಳ್ಳಿ ಪಂಡಿತಾರಾಧ್ಯ ಸ್ವಾಮೀಜಿ

ಪ್ರಮುಖವಾಗಿ ಲಿಂಗಾಯತವನ್ನು ಸ್ವತಂತ್ರ ಧರ್ಮ ಎಂದು ಕೇಂದ್ರಕ್ಕೆ ಶಿಫಾರಸು​ ಮಾಡಬೇಕು. ಸಂತ್ರಸ್ತ ಸಮುದಾಯಗಳಿಗೆ ಆದ್ಯತೆ ನೀಡಲಿ. ಈಗ ಎಲ್ಲಾ ಜಾತಿ, ಸಮುದಾಯದವರು ಮೀಸಲಾತಿ ಬೇಕು ಎನ್ನುತ್ತಿರುವುದು ವಿಷಾದನೀಯ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.