ETV Bharat / state

8 ತಿಂಗಳಿನಿಂದ ಹೊರಗುತ್ತಿಗೆ ನೌಕರರಿಗೆ ಇಲ್ಲ ವೇತನ ಭಾಗ್ಯ! - DC Vinod Priya

ಲಾಕ್​​ಡೌನ್ ಘೋಷಿಸಿದ ಬಳಿಕ ವೇತನವಿಲ್ಲದೆ ಜೀವನ ನಡೆಸಲಾಗದೆ ನೌಕರರು ಹೈರಾಣಾಗಿದ್ದಾರೆ. ತಿಂಗಳುಗಳೇ ಉರುಳಿದರು ಕೂಡ ದುಡಿದ ಹಣ ಮಾತ್ರ ಕೈ ಸೇರುತ್ತಿಲ್ಲ. ಜಿಮ್, ಸ್ವಿಮಿಂಗ್ ಪೂಲ್, ಸಿಂಥೆಟಿಕ್ ಟ್ರ್ಯಾಕ್, ಹಾಗೂ ಕ್ರೀಡಾಂಗಣವನ್ನು ಪೋಷಣೆ ಮಾಡುವ ನೌಕರರಿಗೆ 8 ತಿಂಗಳಿನಿಂದ ವೇತನವೇ ಆಗಿಲ್ಲ.

No wages for outsourced employees for 8 months in Department of Sports
8 ತಿಂಗಳಿನಿಂದ ಹೊರಗುತ್ತಿಗೆ ನೌಕರರಿಗಿಲ್ಲ ವೇತನ ಭಾಗ್ಯ: ಕೋಟೆನಾಡ ಕ್ರೀಡಾ ಇಲಾಖೆ ದಿವ್ಯಮೌನ
author img

By

Published : Jun 17, 2020, 1:03 AM IST

ಚಿತ್ರದುರ್ಗ: ಕೊರೊನಾ ತಡೆಗಟ್ಟಲು ಸರ್ಕಾರ ಲಾಕ್​​​ಡೌನ್ ಮಾಡಿದ್ದ ಬೆನ್ನಲ್ಲೇ ಅದೆಷ್ಟೊ ಕುಟುಂಬಗಳಿಗೆ ದಿಕ್ಕು ತೋಚದಂತಾಗಿದೆ. ಚಿತ್ರದುರ್ಗ ಜಿಲ್ಲೆಯಲ್ಲಿ ಮಾತ್ರ ಕ್ರೀಡಾ ಇಲಾಖೆಯಲ್ಲಿ ಸತತ ಹತ್ತು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಹೊರಗುತ್ತಿಗೆ ನೌಕರರಿಗೆ ವೇತನ ಇಲ್ಲದೆ ಜೀವನ ಸಂಕಷ್ಟಕ್ಕೆ ಸಿಲುಕಿದೆ.

8 ತಿಂಗಳಿನಿಂದ ಹೊರಗುತ್ತಿಗೆ ನೌಕರರಿಗೆ ಇಲ್ಲ ವೇತನ ಭಾಗ್ಯ

ಕೋಟೆನಾಡು ಚಿತ್ರದುರ್ಗದ ಕ್ರೀಡಾ ಹಾಗೂ ಯುವಜನ ಸಬಲೀಕರಣ ಇಲಾಖೆಯಲ್ಲಿ ದುಡಿಯುತ್ತಿರುವ ಹೊರಗುತ್ತಿಗೆ ನೌಕರರಿಗೆ ಎಂಟು ತಿಂಗಳಿನಿಂದ ವೇತನವಿಲ್ಲದೆ ಬದುಕು ದುಸ್ತರವಾಗಿದೆ. ಕೊರೊನಾ ಆರಂಭವಾಗುವ ಮೊದಲೇ ವೇತನ ಕಾಣದ ಹೊರಗುತ್ತಿಗೆ ನೌಕರರು 8 ತಿಂಗಳ ವೇತನಕ್ಕಾಗಿ ದಿನನಿತ್ಯ ಕಚೇರಿಗೆ ಅಲೆಯುವ ಪರಿಸ್ಥಿತಿ ನಿರ್ಮಾಣ ಆಗಿದೆ.

ಲಾಕ್​​ಡೌನ್ ಘೋಷಿಸಿದ ಬಳಿಕ ವೇತನವಿಲ್ಲದೆ ಜೀವನ ನಡೆಸಲಾಗದೆ ನೌಕರರು ಹೈರಾಣಾಗಿದ್ದಾರೆ. ತಿಂಗಳುಗಳೇ ಉರುಳಿದರು ಕೂಡ ದುಡಿದ ಹಣ ಮಾತ್ರ ಕೈ ಸೇರುತ್ತಿಲ್ಲ. ಜಿಮ್, ಸ್ವಿಮಿಂಗ್ ಪೂಲ್, ಸಿಂಥೆಟಿಕ್ ಟ್ರ್ಯಾಕ್, ಹಾಗೂ ಕ್ರೀಡಾಂಗಣವನ್ನು ಪೋಷಣೆ ಮಾಡುವ ನೌಕರರಿಗೆ 8 ತಿಂಗಳಿನಿಂದ ವೇತನ ಆಗಿಲ್ಲ. ಇಡೀ ರಾಜ್ಯದಲ್ಲೇ ಕ್ರೀಡಾ ಇಲಾಖೆಯಲ್ಲಿ ವೇತನ ನೀಡಿದ್ದು, ಚಿತ್ರದುರ್ಗ ಜಿಲ್ಲೆಯಲ್ಲಿ ಮಾತ್ರ ಈ ಕೆಲಸ ಆಗಿಲ್ಲ. ಇದಕ್ಕೆಲ್ಲ ಅಸಿಸ್ಟೆಂಟ್ ಡೈರೆಕ್ಟರ್ ನಾಗರಾಜ್ ನಿರ್ಲಕ್ಷ್ಯತನವೇ ಪ್ರಮುಖ ಕಾರಣ ಎಂದು ನೌಕರರೊಬ್ಬರು ಆರೋಪಿಸಿದ್ದಾರೆ.

ಇನ್ನು ಇದರ ಸಂಬಂಧ ಸಾಕಷ್ಟು ಬಾರಿ ಜಿಲ್ಲಾಧಿಕಾರಿ ಸೇರಿದಂತೆ ಸ್ಥಳೀಯ ಶಾಸಕರಾದ ತಿಪ್ಪಾರೆಡ್ಡಿಯವರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನ ಆಗಿಲ್ಲವಂತೆ. ಇದರಿಂದ ನೊಂದ ನೌಕರರು ನೂತನವಾಗಿ ಆಗಮಿಸಿರುವ ಜಿ.ಪಂ ಸಿಇಒ ಯೋಗೇಶ್ ರವರಿಗೆ ಮನವಿ ಸಲ್ಲಿಸಿದರು.

ಇನ್ನು ವೇತನ ಕೇಳಲು ಕಚೇರಿಗೆ ತೆರಳಿದರೆ ಎಜೆನ್ಸಿ ಕ್ಲೋಸ್ ಆಗಿದ್ದು, ಯಾವುದೇ ವೇತನ ನೀಡಲು ಬರುವುದಿಲ್ಲ ಅಂತಾ ಇದ್ದಕ್ಕಿದ್ದಂತೆ ಕೆಲಸದಿಂದ ತೆಗೆದು ಹಾಕಲಾಗಿದೆ ಎಂದು ಯುವಕ ಅಳಲು ತೋಡಿಕೊಂಡಿದ್ದಾರೆ.

ಈಗಾಗಲೇ ಜಿಲ್ಲೆಯ ಕ್ರೀಡಾ ಇಲಾಖೆಯ ಖಜಾನೆಯಲ್ಲಿ 12 ಲಕ್ಷ ಹಣವಿದೆ. ಜಿಲ್ಲಾಧಿಕಾರಿ ವಿನೋತ್‌ ಪ್ರಿಯಾ ಕೂಡ ವೇತನ ನೀಡಲು ಗ್ರೀನ್ ಸಿಗ್ನಲ್ ನೀಡಿದ್ದಾರೆ. ಅಧಿಕಾರಿ ನಾಗರಾಜ್ ಮಾತ್ರ ವೇತನೆ ನೀಡದೆ ಇರುವುದು ನೌಕರರ ಆಕ್ರೋಶಕ್ಕೆ ಕಾರಣವಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.